‘ತಪ್ಪಾಗಿ ಈ ಡ್ಯಾನ್ಸ್​ ಮಾಡಿದ್ರೆ ನಿಮ್ಮ ಭವಿಷ್ಯಕ್ಕೆ ತೊಂದರೆ ಆಗಬಹುದು’: ಅಕ್ಷಯ್​ ಕುಮಾರ್​ ವಾರ್ನಿಂಗ್​

‘ಸೂರ್ಯವಂಶಿ’ ಸಿನಿಮಾದ ಶೂಟಿಂಗ್​ ಸಂದರ್ಭದಲ್ಲಿ ಅಕ್ಷಯ್​ ಕುಮಾರ್​ ಮತ್ತು ರಣವೀರ್​ ಸಿಂಗ್​ ಮಸ್ತ್​ ಮಜಾ ಮಾಡಿದ್ದಾರೆ. ಇಬ್ಬರೂ ಸೇರಿ ‘ಬಾಲ..’ ಹಾಡಿನ ಫೇಮಸ್​ ಡ್ಯಾನ್ಸ್​ ಸ್ಟೆಪ್​​ ಹಾಕಿದ್ದಾರೆ.

‘ತಪ್ಪಾಗಿ ಈ ಡ್ಯಾನ್ಸ್​ ಮಾಡಿದ್ರೆ ನಿಮ್ಮ ಭವಿಷ್ಯಕ್ಕೆ ತೊಂದರೆ ಆಗಬಹುದು’: ಅಕ್ಷಯ್​ ಕುಮಾರ್​ ವಾರ್ನಿಂಗ್​
ವೈರಲ್​ ವಿಡಿಯೋದಲ್ಲಿ ಅಕ್ಷಯ್ ಕುಮಾರ್​, ರಣವೀರ್​ ಸಿಂಗ್​

ಕೊರೊನಾ ಆತಂಕ ನಿಧಾನವಾಗಿ ಕಡಿಮೆ ಆಗುತ್ತಿದೆ. ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಬಿಗ್​ ಬಜೆಟ್​ ಸ್ಟಾರ್​ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಅಕ್ಷಯ್​ ಕುಮಾರ್​, ಅಜಯ್​ ದೇವಗನ್​, ರಣವೀರ್​ ಸಿಂಗ್​ ನಟಿಸಿರುವ ‘ಸೂರ್ಯವಂಶಿ’ ಚಿತ್ರ ಈ ವರ್ಷದ ದೀಪಾವಳಿ ಪ್ರಯುಕ್ತ ನ.5ರಂದು ರಿಲೀಸ್​ ಆಗುತ್ತಿದೆ. ಅದಕ್ಕೂ ಮೊದಲು ‘ಐಲಾರೆ ಐಲಾ..’ ಹಾಡು ಬಿಡುಗಡೆ ಮಾಡಲಾಗಿದೆ. ಅದಲ್ಲದೇ ಅಕ್ಷಯ್​ ಕುಮಾರ್​ ಶೇರ್​ ಮಾಡಿಕೊಂಡಿರುವ ಒಂದು ವಿಡಿಯೋ ಈಗ ಸಖತ್​ ವೈರಲ್​ ಆಗುತ್ತಿದೆ.

‘ಸೂರ್ಯವಂಶಿ’ ಸಿನಿಮಾದ ಶೂಟಿಂಗ್​ ಸಂದರ್ಭದಲ್ಲಿ ಅಕ್ಷಯ್​ ಕುಮಾರ್​ ಮತ್ತು ರಣವೀರ್​ ಸಿಂಗ್​ ಮಸ್ತ್​ ಮಜಾ ಮಾಡಿದ್ದಾರೆ. ಇಬ್ಬರೂ ಸೇರಿ ‘ಬಾಲ..’ ಹಾಡಿನ ಫೇಮಸ್​ ಡ್ಯಾನ್ಸ್​ ಸ್ಟೆಪ್​​ ಹಾಕಿದ್ದಾರೆ. ಆ ವಿಡಿಯೋವನ್ನು ಈಗ ‘ಐಲಾರೆ ಐಲಾ..’ ಹಾಡಿನೊಂದಿಗೆ ಅಕ್ಷಯ್​ ಕುಮಾರ್​ ಶೇರ್​ ಮಾಡಿಕೊಂಡಿದ್ದಾರೆ. ಆ ಸ್ಟೆಪ್​ ಹಾಕುವಾಗ ರಣವೀರ್​ ಸಿಂಗ್​ ಕೊಂಚ ಎಡವಿದ್ದರಿಂದ ಅವರಿಗೆ ನೋವಾಗಿದೆ! ಅದು ಹೇಗೆ ಎಂಬುದು ವಿಡಿಯೋ ನೋಡಿದರೆ ಮಾತ್ರ ತಿಳಿಯುವಂಥದ್ದು.

 

View this post on Instagram

 

A post shared by Akshay Kumar (@akshaykumar)

‘ರಣವೀರ್​ ಸಿಂಗ್​ ಮತ್ತು ನಾನು ಐಲಾರೆ ಐಲಾ ಹಾಡಿಗೆ ಡ್ಯಾನ್ಸ್​ ಮಾಡಿದ ವಿಡಿಯೋ ಇಲ್ಲಿದೆ. ನೀವು ಕೂಡ ಇದನ್ನು ಮಾಡಿ ತೋರಿಸಿ. ಎಚ್ಚರಿಕೆ: ತಪ್ಪಾಗಿ ಈ ಡ್ಯಾನ್ಸ್​ ಸ್ಟೆಪ್​ ಹಾಕಿದಾರೆ ನಿಮ್ಮ ಭವಿಷ್ಯಕ್ಕೆ ತೊಂದರೆ ಆಗಬಹುದು’ ಎಂದು ಅಕ್ಷಯ್​ ಕುಮಾರ್​ ಕ್ಯಾಪ್ಷನ್​ ನೀಡಿದ್ದಾರೆ. ಸದ್ಯ ಈ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ.

‘ಸೂರ್ಯವಂಶಿ’ ಚಿತ್ರಕ್ಕೆ ರೋಹಿತ್​ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಎಲ್ಲವೂ ಎಂದುಕೊಂಡಂತೆ ಆಗಿದ್ದರೆ, 2020ರ ಮಾರ್ಚ್​ನಲ್ಲಿಯೇ ಈ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿತ್ತು. ಎಲ್ಲ ವಿಘ್ನಗಳನ್ನೂ ನಿವಾರಿಸಿಕೊಂಡು ನ.5ರಂದು ಈ ಚಿತ್ರ ವಿಶ್ವಾದ್ಯಂತ ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಕತ್ರಿನಾ ಕೈಫ್​ ಅಭಿನಯಿಸಿದ್ದಾರೆ. ಭರ್ಜರಿ ಆ್ಯಕ್ಷನ್​ ದೃಶ್ಯಗಳ ಮೂಲಕ ಪ್ರೇಕ್ಷಕರನ್ನು ರಂಜಿಸುವ ಭರವಸೆ ನೀಡಿದ್ದಾರೆ ನಿರ್ದೇಶಕ ರೋಹಿತ್​ ಶೆಟ್ಟಿ.

ಇದನ್ನೂ ಓದಿ:

ಸೈನಿಕರ ಬಗ್ಗೆ ಅಕ್ಷಯ್​ ಕುಮಾರ್​ ಹೊಸ ಸಿನಿಮಾ; ಪೋಸ್ಟರ್​ನಲ್ಲಿ ತಪ್ಪು ಕಂಡುಹಿಡಿದ ಮಾಜಿ ಸೇನಾಧಿಕಾರಿ

ಶಾರುಖ್​ ಪುತ್ರ ಆರ್ಯನ್​ ಖಾನ್​ ಅರೆಸ್ಟ್​ ಆದಾಗ ಅಕ್ಷಯ್​ ಕುಮಾರ್​ ಮಗ ಆರವ್​ ಏನು ಮಾಡ್ತಿದ್ರು? ಎಲ್ಲಿದ್ರು?

Click on your DTH Provider to Add TV9 Kannada