ಐಪಿಎಲ್​ ಹೊಸ ತಂಡದಮೇಲೆ ಕಣ್ಣಿಟ್ಟ ರಣವೀರ್​ ಸಿಂಗ್​-ದೀಪಿಕಾ ಪಡುಕೋಣೆ

ಬಿಸಿಸಿಐ ಈ ಬಾರಿ ಎರಡು ಹೊಸ ಟೀಮ್​ಗಳನ್ನು ಪರಿಚಯಿಸುತ್ತಿದೆ. ಈ ಮೂಲಕ ತಂಡಗಳ ಸಂಖ್ಯೆ 10ಕ್ಕೆ ಏರಿಕೆ ಆಗುತ್ತಿದೆ. ಹೊಸ ತಂಡಗಳ ಮಾಲೀಕತ್ವದ ಬಗ್ಗೆ ಅನೇಕರು ಕಣ್ಣಿಟ್ಟಿದ್ದಾರೆ.

ಐಪಿಎಲ್​ ಹೊಸ ತಂಡದಮೇಲೆ ಕಣ್ಣಿಟ್ಟ ರಣವೀರ್​ ಸಿಂಗ್​-ದೀಪಿಕಾ ಪಡುಕೋಣೆ
ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ

ಐಪಿಎಲ್​ಗೂ ಬಾಲಿವುಡ್​ಗೂ ಒಳ್ಳೆಯ ನಂಟಿದೆ. ಐಪಿಎಲ್​ನ ಸಾಕಷ್ಟು ಟೀಮ್​ಗಳ ಮಾಲೀಕರು ಬಾಲಿವುಡ್​ ನಟ-ನಟಿಯರು. ನಟನೆ ಜತೆಜತೆಗೆ ಐಪಿಎಲ್​ನಲ್ಲಿ ಫ್ರಾಂಚೈಸಿ ಹೊಂದಿದ್ದಾರೆ ಬಾಲಿವುಡ್​ ಮಂದಿ. ಶಾರುಖ್​ ಖಾನ್​, ಪ್ರೀತಿ ಜಿಂಟಾ ಈ ಸಾಲಿನಲ್ಲಿ ನಿಲ್ಲುತ್ತಾರೆ. ಇದಕ್ಕೆ ಈಗ ರಣವೀರ್​ ಸಿಂಗ್​ ಮತ್ತು ದೀಪಿಕಾ ಪಡುಕೋಣೆ ಹೊಸ ಸೇರ್ಪಡೆ ಆಗುವ ಸಾಧ್ಯತೆ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ.

ಬಿಸಿಸಿಐ ಈ ಬಾರಿ ಎರಡು ಹೊಸ ಟೀಮ್​ಗಳನ್ನು ಪರಿಚಯಿಸುತ್ತಿದೆ. ಈ ಮೂಲಕ ತಂಡಗಳ ಸಂಖ್ಯೆ 10ಕ್ಕೆ ಏರಿಕೆ ಆಗುತ್ತಿದೆ. ಹೊಸ ತಂಡಗಳ ಮಾಲೀಕತ್ವದ ಬಗ್ಗೆ ಅನೇಕರು ಕಣ್ಣಿಟ್ಟಿದ್ದಾರೆ. ಎರಡು ಹೊಸ ತಂಡಗಳ ಪೈಕಿ ಒಂದನ್ನು ರಣವೀರ್​-ದೀಪಿಕಾ ಖರೀದಿಸುವ ಆಲೋಚನೆಯಲ್ಲಿದ್ದಾರೆ ಎನ್ನುವ ಬಗ್ಗೆ ವರದಿ ಬಿತ್ತರವಾಗಿದೆ.

ಸೋಮವಾರ (ಅಕ್ಟೋಬರ್​ 25) ದುಬೈನಲ್ಲಿ ಐಪಿಎಲ್​ ತಂಡದ ಹರಾಜು ಪ್ರಕ್ರಿಯೆ ನಡೆಯಲಿದೆ. ಇದಕ್ಕೆ ರಣವೀರ್​ ಸಿಂಗ್​ ಹಾಗೂ ದೀಪಿಕಾ ಕೂಡ ಹೆಸರು ನೋಂದಾಯಿಸಿದ್ದಾರಂತೆ. ಒಂದೊಮ್ಮೆ ಇವರ ತೆಕ್ಕೆಗೆ ಒಂದು ತಂಡ ಸಿಕ್ಕರೆ ರಣವೀರ್​-ದೀಪಿಕಾ ಫ್ಯಾನ್ಸ್​ ಹೆಚ್ಚು ಖುಷಿ ಪಡುತ್ತಾರೆ.  ಶಾರುಖ್​ ಖಾನ್​ ಅವರು ಕೋಲ್ಕತ್ತಾ ನೈಟ್​ ರೈಡರ್ಸ್​ ಹಾಗೂ ಪಂಜಾಬ್​ ಕಿಂಗ್ಸ್​ ತಂಡವನ್ನು ಪ್ರೀತಿ ಜಿಂಟಾ ಮುನ್ನಡೆಸುತ್ತಿದ್ದಾರೆ.

ದೀಪಿಕಾಗೆ ಕ್ರೀಡಾ ಹಿನ್ನೆಲೆ ಇದೆ. ಅವರ ತಂದೆ ಪ್ರಕಾಶ್​ ಪಡುಕೋಣೆ ಬ್ಯಾಡ್​ಮಿಂಟನ್​ ಆಟಗಾರ. ರಣವೀರ್​ ಸಿಂಗ್​ಗೂ ಕ್ರಿಕೆಟ್​ ಬಗ್ಗೆ ಆಸಕ್ತಿ ಇದೆ. 1983ರಲ್ಲಿ ಟೀಂ ಇಂಡಿಯಾ ವಿಶ್ವಕಪ್​ ಗೆದ್ದ ಘಟನೆ ಆಧರಿಸಿ ‘83’ ಸಿನಿಮಾ ಸಿದ್ಧಗೊಂಡಿದೆ. ಈ ಚಿತ್ರದಲ್ಲಿ ರಣವೀರ್​ ಸಿಂಗ್​ ಅವರು ಕಪಿಲ್​ ದೇವ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು, ಎನ್​ಬಿಎಗೂ ಅವರು ಭಾರತದ ರಾಯಭಾರಿ ಆಗಿದ್ದಾರೆ. ಈ ಕಾರಣಕ್ಕೆ ರಣವೀರ್​ ಸಿಂಗ್​ ಹಾಗೂ ದೀಪಿಕಾ ಕ್ರಿಕೆಟ್​ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ ಎನ್ನಲಾಗಿದೆ.

ಐಪಿಎಲ್​ 14 ಸೀಸನ್​ಗಳನ್ನು ಪೂರೈಸಿದೆ. 15ನೇ ಸೀಸನ್​ಗೆ ಮತ್ತೆರಡು ತಂಡಗಳು ಸೇರ್ಪಡೆ ಆಗಲಿವೆ. 2022ರಲ್ಲಿ 15ನೇ ಸೀಸನ್​ ನಡೆಯಲಿದೆ. ಇತ್ತೀಚೆಗಷ್ಟೇ 14ನೇ ಸೀಸನ್​ ಮುಗಿದಿದ್ದು, ಚೆನ್ನೈ ಸೂಪರ್​ ಕಿಂಗ್ಸ್​ ಗೆದ್ದಿದೆ.

ಇದನ್ನೂ ಓದಿ: ಬಾಲಿವುಡ್​ಗೆ ವಿಲನ್​ ಆಗಿ ಎಂಟ್ರಿ ಕೊಡೋಕೆ ರೆಡಿ ಆದ ಜಗಪತಿ ಬಾಬು; ಯಾರು ಹೀರೋ?

IPL 2022: ಹೊಸ ಐಪಿಎಲ್ ತಂಡ ಖರೀದಿಗೆ ಮುಂದಾದ ಜನಪ್ರಿಯ ಫುಟ್​ಬಾಲ್ ಕ್ಲಬ್

Click on your DTH Provider to Add TV9 Kannada