Suhana Khan: ಶಾರುಖ್ ಪುತ್ರಿ ಸುಹಾನಾರಂತೆಯೇ ಇರುವ ಈ ಯುವತಿ ಯಾರು?; ನೆಟ್ಟಿಗರ ಕುತೂಹಲಕ್ಕೆ ಇಲ್ಲಿದೆ ಉತ್ತರ

Isha Jain: ಖ್ಯಾತ ನಟ ನಟಿಯರ ತದ್ರೂಪಿಗಳಂತಿರುವವರು ಬೇಗ ಎಲ್ಲರ ಗಮನ ಸೆಳೆಯುತ್ತಾರೆ. ಖ್ಯಾತ ನಟ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಮಾದರಿಯಲ್ಲೇ ಇರುವ ಓರ್ವ ಯುವತಿ ಸದ್ಯ ನೆಟ್ಟಿಗರ ಕಣ್ಮಣಿಯಾಗಿದ್ದಾರೆ.

Suhana Khan: ಶಾರುಖ್ ಪುತ್ರಿ ಸುಹಾನಾರಂತೆಯೇ ಇರುವ ಈ ಯುವತಿ ಯಾರು?; ನೆಟ್ಟಿಗರ ಕುತೂಹಲಕ್ಕೆ ಇಲ್ಲಿದೆ ಉತ್ತರ
ಸುಹಾನಾ ಖಾನ್, ಇಶಾ ಜೈನ್

ನೋಡಲು ಬಾಲಿವುಡ್ ತಾರೆಯರಂತೆಯೇ ಇರುವ ವ್ಯಕ್ತಿಗಳು ಬಹುಬೇಗ ಎಲ್ಲರ ಗಮನ ಸೆಳೆಯುತ್ತಾರೆ. ಪ್ರಸ್ತುತ ಬಾಲಿವುಡ್​ನ ಖ್ಯಾತ ನಟ ಶಾರುಖ್ ಖಾನ್ ಹಾಗೂ ಗೌರಿ ಖಾನ್ ಪುತ್ರಿ ಸುಹಾನಾ ಖಾನ್ ತರಹವೇ ಇರುವ ಯುವತಿಯೋರ್ವರು ಪ್ರಸ್ತುತ ನೆಟ್ಟಿಗರ ಮನಗೆದ್ದಿದ್ದಾರೆ. ಅದರಲ್ಲೂ ಶಾರುಖ್ ಕುಟುಂಬ ಪ್ರಸ್ತುತ ಸುದ್ದಿಯಲ್ಲಿರುವುದರಿಂದ ಸುಹಾನಾ ತದ್ರೂಪಿ ಯುವತಿ ರಾತ್ರೋರಾತ್ರಿ ಪ್ರಸಿದ್ಧರಾಗಿದ್ದಾರೆ. ಆ ಯುವತಿಯ ಹೆಸರು ಇಶಾ ಜೈನ್. ಈಗಾಗಲೇ ಇನ್ಸ್ಟಾಗ್ರಾಂನಲ್ಲಿ ಸಖತ್ ಸುದ್ದಿಯಾಗಿರುವ ಅವರು, ಸುಮಾರು 1.30 ಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ. ಸುಹಾನಾ ಖಾನ್ ಕೂಡ ಯಾವುದೇ ಚಿತ್ರಗಳಲ್ಲಿ ನಟಿಸದಿದ್ದರೂ ಕೂಡ ಬಹಳಷ್ಟು ಅನುಯಾಯಿಗಳನ್ನು ಹೊಂದಿದ್ದಾರೆ. ಪ್ರಸ್ತುತ ಇಶಾ ಎಲ್ಲರ ಗಮನ ಸೆಳೆದಿದ್ದಾರೆ.

ನೆಟ್ಟಿಗರು ಸುಹಾನಾರೊಂದಿಗೆ ಸಾಮ್ಯತೆ ಗುರುತಿಸಿರುವ ಇಶಾ ಜೈನ್ ಅವರ ಒಂದಷ್ಟು ಚಿತ್ರಗಳು ಇಲ್ಲಿವೆ:

 

View this post on Instagram

 

A post shared by Isha Jain (@ishajainv)

 

View this post on Instagram

 

A post shared by Isha Jain (@ishajainv)

 

View this post on Instagram

 

A post shared by Isha Jain (@ishajainv)

 

View this post on Instagram

 

A post shared by Isha Jain (@ishajainv)

ತಮ್ಮ ಚಿತ್ರಗಳು ಹಾಗೂ ವಿಡಿಯೋಗಳ ಮೂಲಕ ಇಶಾ ತಮ್ಮದೇ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಇತ್ತ ಸುಹಾನಾ ಖಾನ್ ಇಂಗ್ಲಂಡ್​ನಲ್ಲಿ ನಟನೆಯ ತರಬೇತಿ ಪಡೆದಿದ್ದಾರೆ. ಸುಹಾನಾ ನಟಿಸಿರುವ ‘The Grey Part Of Blue’ ಎಂಬ ಒಂದು ಕಿರುಚಿತ್ರದ ಪೋಸ್ಟರ್ ಕೂಡ ಇತ್ತೀಚೆಗೆ ಬಿಡುಗಡೆಯಾಗಿತ್ತು. ಸುಹಾನಾ ಬಾಲಿವುಡ್​ಗೆ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಆಗಾಗ ಕೇಳಿಬರುತ್ತಲೇ ಇರುತ್ತದೆ. ನಟನೆಯ ತರಬೇತಿಯನ್ನೂ ಮುಗಿಸಿರುವ ಸುಹಾನಾ, ಬಾಲಿವುಡ್​ಗೆ ಪ್ರವೇಶಿಸುವುದನ್ನು ಅಭಿಮಾನಿಗಳು ಕಾಯುತ್ತಿದ್ದಾರೆ.

ಇದನ್ನೂ ಓದಿ:

ಸಮಂತಾ ಪಾಲಿಗೆ ಇದು ಮಹತ್ವದ ದಿನ; ನಿರ್ಧಾರವಾಗಲಿದೆ ಹಲವರ ಭವಿಷ್ಯ

Raayan Raj Sarja: ರಾಯನ್​ ರಾಜ್​ ಸರ್ಜಾ ಹುಟ್ಟುಹಬ್ಬಕ್ಕೆ ಧ್ರುವ ಬಂದಿಲ್ಲ; ಕಾರಣ ತಿಳಿಸಿದ ಮೇಘನಾ ರಾಜ್​

ದೇಶದ ಹೆಮ್ಮೆಯ ಈ ಕಲಾವಿದೆಗೆ ವಿಮಾನ ನಿಲ್ದಾಣಗಳಲ್ಲಿ ಪ್ರತಿ ಬಾರಿ ಎದುರಾಗುತ್ತಿದೆ ಸಮಸ್ಯೆ; ಪರಿಹಾರಕ್ಕೆ ಪ್ರಧಾನಿಗೆ ಮನವಿ

Click on your DTH Provider to Add TV9 Kannada