ಸಮಂತಾ ಪಾಲಿಗೆ ಇದು ಮಹತ್ವದ ದಿನ; ನಿರ್ಧಾರವಾಗಲಿದೆ ಹಲವರ ಭವಿಷ್ಯ

ಸಮಂತಾ ಪರ ವಕೀಲರು ಈಗ ಕೋರ್ಟ್​ ಮೆಟ್ಟಿಲೇರಿದ್ದಾರೆ. ಸಮಂತಾ ಬಗ್ಗೆ ಅತೀ ಕೆಟ್ಟದಾಗಿ ಸುದ್ದಿ ಮಾಡಿದ ಮೂರು ಯೂಟ್ಯೂಬ್​ ಚಾನೆಲ್​ಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ.

ಸಮಂತಾ ಪಾಲಿಗೆ ಇದು ಮಹತ್ವದ ದಿನ; ನಿರ್ಧಾರವಾಗಲಿದೆ ಹಲವರ ಭವಿಷ್ಯ
ಸಮಂತಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 22, 2021 | 2:24 PM

ಸಮಂತಾ ಅವರು ಅಕ್ಕಿನೇನಿ ಕುಟುಂಬದಿಂದ ಹೊರ ಬಂದ ನಂತರದಲ್ಲಿ ಅವರ ಬಗ್ಗೆ ಹರಿದಾಡಿದ ಸುದ್ದಿ ಒಂದೆರಡಲ್ಲ. ಆದರೆ, ಕೆಲವರು ತೀರಾ ಕೆಳಮಟ್ಟಕ್ಕೆ ಇಳಿದು ಸಮಂತಾ ಹೆಸರು ಕೆಡಿಸುವ ಪ್ರಯತ್ನ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಸಮಂತಾ ಕಳಕಳಿಯ ಮನವಿ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ. ಈ ಕಾರಣಕ್ಕೆ ಅವರು ಕಾನೂನಾತ್ಮಕವಾಗಿ ಹೋರಾಟ ನಡೆಸಿದ್ದಾರೆ. ತಮ್ಮ ಮಾನಹಾನಿ ಮಾಡಿದವರ ವಿರುದ್ಧ ಕೇಸ್​ ದಾಖಲು ಮಾಡಿದ್ದಾರೆ. ಈ ಪ್ರಕರಣದ ತೀರ್ಪು ಇಂದು (ಅಕ್ಟೋಬರ್​ 22) ಹೊರ ಬೀಳಲಿದೆ.

ಸಮಂತಾ ವಿಚ್ಛೇದನ ಪಡೆದುಕೊಂಡ ನಂತರದಲ್ಲಿ ಅನೇಕರು ಅವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದರು. ಅವರಿಗೆ ಅಬಾರ್ಷನ್​ ಆಗಿತ್ತು, ಸಮಂತಾಗೆ ಬೇರೆಯವರ ಜತೆ ಸಂಬಂಧ ಇತ್ತು ಎಂಬಿತ್ಯಾದಿ ಸುದ್ದಿಗಳನ್ನು ಹಬ್ಬಿಸುವ ಕುತಂತ್ರ ನಡೆದಿತ್ತು. ಆದರೆ, ಸಮಂತಾ ಈ ವಿಚಾರದಲ್ಲಿ ಸುಮ್ಮನೆ ಕೂತಿಲ್ಲ. ಅವರ ಕಡೆಯಿಂದ ಖಡಕ್​ ಆಗಿಯೇ ಇದಕ್ಕೆಲ್ಲ ಉತ್ತರ ಬಂದಿತ್ತು. ಆದರೂ ಅವರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವ ಕೆಲಸ ನಡೆದೇ ಇತ್ತು. ಇದು ಸಮಂತಾ ಅಸಮಾಧಾನಕ್ಕೆ ಕಾರಣವಾಗಿತ್ತು.

ಸಮಂತಾ ಪರ ವಕೀಲರು ಈಗ ಕೋರ್ಟ್​ ಮೆಟ್ಟಿಲೇರಿದ್ದಾರೆ. ಸಮಂತಾ ಬಗ್ಗೆ ಅತೀ ಕೆಟ್ಟದಾಗಿ ಸುದ್ದಿ ಮಾಡಿದ ಮೂರು ಯೂಟ್ಯೂಬ್​ ಚಾನೆಲ್​ಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ. ಇದರ ತೀರ್ಪು ಇಂದು ಹೊರಬೀಳಲಿದೆ. ಒಂದೊಮ್ಮೆ ತಪ್ಪು ಸಾಬೀತಾದರೆ, ಈ ಯೂಟ್ಯೂಬ್​ ಚಾನೆಲ್​ಗಳು ಸಮಂತಾಗೆ ದೊಡ್ಡ ಮೊತ್ತದ ಹಣ ಪಾವತಿ ಮಾಡಬೇಕಿದೆ.

ಸಮಂತಾ ಸದ್ಯ ರಿಷಿಕೇಶ ಪ್ರವಾಸದಲ್ಲಿದ್ದಾರೆ. ರಿಷಿಕೇಶದಲ್ಲಿರುವ ಶ್ರೀ ಸ್ವಾಮಿ ಪುರುಷೋತ್ತಮಾನಂದ ಜೀ ಮಹರಾಜ್ ವಸಿಷ್ಠ್ ಆಶ್ರಮದ ದ್ವಾರದ ಚಿತ್ರವನ್ನು ಸಮಂತಾ ಹಂಚಿಕೊಂಡಿದ್ದಾರೆ. ಜೊತೆಗೆ ‘ಸಂತಸ ಬೇರೆಲ್ಲೂ ಇಲ್ಲ, ನಮ್ಮೊಳಗಿದೆ’ ಎಂದು ಬರೆದುಕೊಂಡಿರುವ ಫಲಕದ ಚಿತ್ರವನ್ನೂ ಅವರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ.

ಇತ್ತೀಚೆಗೆ ಪೋಸ್ಟ್ ಹಾಕಿದ್ದ ಸಮಂತಾ, ‘ನನ್ನ ವೈಯಕ್ತಿಕ ವಿಚಾರಕ್ಕೆ ನೀವು ಸ್ಪಂದಿಸಿರುವುದು ಖುಷಿ ನೀಡಿದೆ. ವದಂತಿಗಳ ವಿಚಾರದಲ್ಲಿ ನೀವು ನನ್ನ ಪರವಾಗಿ ನಿಂತಿರುವುದಕ್ಕೆ ಧನ್ಯವಾದಗಳು. ನನಗೆ ಬೇರೆ ಸಂಬಂಧವಿದೆ, ನಾನು ಮಕ್ಕಳನ್ನು ಪಡೆಯಲು ಬಯಸಲಿಲ್ಲ, ನಾನು ಅವಕಾಶವಾದಿ ಮತ್ತು ನಾನು ಗರ್ಭಪಾತ ಮಾಡಿಸಿಕೊಂಡಿದ್ದೇನೆ ಎನ್ನುವ ಸುದ್ದಿ ಹರಿದಾಡುತ್ತಿದೆ. ವಿಚ್ಛೇದನ ಎನ್ನುವುದು ನೋವಿನ ಪ್ರಕ್ರಿಯೆ. ಇದು ಗುಣವಾಗಲು ಸಮಯ ನೀಡಿ. ಆದರೆ ನಾನು ಒಂದು ಪ್ರಾಮಿಸ್​ ಮಾಡುತ್ತೇನೆ. ಈ ರೀತಿಯ ದಾಳಿಯಿಂಧ ನನ್ನನ್ನು ಮುರಿಯಲು ಸಾಧ್ಯವಿಲ್ಲ’ ಎಂದು ಸಮಂತಾ ಬರೆದುಕೊಂಡಿದ್ದರು.

ಇದನ್ನೂ ಓದಿ: ಸುಳ್ಳು ಸುದ್ದಿ ಹಬ್ಬಿಸಿದವರಿಗೆ ನಡುಕ ಹುಟ್ಟಿಸಿದ ಸಮಂತಾ; ಯಾರಿಗೆಲ್ಲಾ ತೊಂದರೆ?

Samantha: ಡಿವೋರ್ಸ್ ಬೆನ್ನಲ್ಲೇ ಆಶ್ರಮಕ್ಕೆ ತೆರಳಿದ್ದಾರಾ ಸಮಂತಾ?; ಉತ್ತರ ನೀಡುತ್ತಿವೆ ಈ ಚಿತ್ರಗಳು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ