Samantha: ಡಿವೋರ್ಸ್ ಬೆನ್ನಲ್ಲೇ ಆಶ್ರಮಕ್ಕೆ ತೆರಳಿದ್ದಾರಾ ಸಮಂತಾ?; ಉತ್ತರ ನೀಡುತ್ತಿವೆ ಈ ಚಿತ್ರಗಳು

Rishikesh: ಟಾಲಿವುಡ್ ನಟಿ ಸಮಂತಾ ರಿಷಿಕೇಶಕ್ಕೆ ತೆರಳಿದ್ದಾರೆ. ಅಲ್ಲಿ ರಜೆಯ ದಿನಗಳನ್ನು ಕಳೆಯುತ್ತಿರುವ ಅವರು, ಸುತ್ತಲ ಪರಿಸರದ ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ. ಈ ನಡುವೆ ಅವರು ಹಂಚಿಕೊಂಡಿರುವ ಕೆಲವು ಚಿತ್ರಗಳು ಎಲ್ಲರ ಕುತೂಹಲ ಕೆರಳಿಸಿದೆ.

Samantha: ಡಿವೋರ್ಸ್ ಬೆನ್ನಲ್ಲೇ ಆಶ್ರಮಕ್ಕೆ ತೆರಳಿದ್ದಾರಾ ಸಮಂತಾ?; ಉತ್ತರ ನೀಡುತ್ತಿವೆ ಈ ಚಿತ್ರಗಳು
ಸಮಂತಾ
Follow us
TV9 Web
| Updated By: shivaprasad.hs

Updated on: Oct 20, 2021 | 4:21 PM

ದಾಂಪತ್ಯ ಜೀವನದಿಂದ ಹೊರ ಬಂದ ಬೆನ್ನಲ್ಲೇ ಟಾಲಿವುಡ್ ನಟಿ ಸಮಂತಾ ರಿಷಿಕೇಶಕ್ಕೆ ತೆರಳಿದ್ದಾರೆ. ತಾವು ತಂಗಿರುವ ಬೆಟ್ಟಗಳ ನಡುವಿರುವ ರೆಸಾರ್ಟ್​ನಿಂದ ಮನಮೋಹಕ ಚಿತ್ರಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಸುಂದರವಾಗಿರುವ ಈಜುಕೊಳದ ಚಿತ್ರವನ್ನೂ ಅವರು ಹಂಚಿಕೊಂಡಿದ್ದು, ಎಲ್ಲರ ಗಮನ ಸೆಳೆದಿದೆ. ಇವುಗಳಿಗಿಂತ ಹೆಚ್ಚಾಗಿ ಸದ್ಯ ಚರ್ಚೆಯಾಗುತ್ತಿರುವುದು ಸಮಂತಾ ಹಂಚಿಕೊಂಡಿರುವ ಆಶ್ರಮದ ಚಿತ್ರಗಳು. ಆಶ್ರಮವೊಂದರ ದ್ವಾರದ ಹಾಗೂ ಅಲ್ಲಿರುವ ಫಲಕವೊಂದರ ಚಿತ್ರಗಳನ್ನು ಸಮಂತಾ ಪೋಸ್ಟ್ ಮಾಡಿದ್ದು, ಅವರು ಆಶ್ರಮಕ್ಕೆ ತೆರಳಿದ್ದಾರೆಯೇ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ.

ರಿಷಿಕೇಶದಲ್ಲಿರುವ ಶ್ರೀ ಸ್ವಾಮಿ ಪುರುಷೋತ್ತಮಾನಂದ ಜೀ ಮಹರಾಜ್ ವಸಿಷ್ಠ್ ಆಶ್ರಮದ ದ್ವಾರದ ಚಿತ್ರವನ್ನು ಸಮಂತಾ ಹಂಚಿಕೊಂಡಿದ್ದಾರೆ. ಜೊತೆಗೆ ‘ಸಂತಸ ಬೇರೆಲ್ಲೂ ಇಲ್ಲ, ನಮ್ಮೊಳಗಿದೆ’ ಎಂದು ಬರೆದುಕೊಂಡಿರುವ ಫಲಕದ ಚಿತ್ರವನ್ನೂ ಹಂಚಿಕೊಂಡಿದ್ದು, ಸಮಂತಾ ರಜೆಯ ಅವಧಿಯಲ್ಲಿ ಆಶ್ರಮಕ್ಕೂ ತೆರಳಿದ್ದಾರೆ ಎಂಬುದನ್ನು ಸಾಬೀತುಪಡಿಸುವಂತಿದೆ. ಒಟ್ಟಿನಲ್ಲಿ ವಿವಿಧ ಚಟುವಟಿಕೆಗಳ ಮೂಲಕ ಸಮಂತಾ ತಮ್ಮನ್ನು ತಾವು ಸದಾ ಕ್ರಿಯಾಶೀಲರಾಗಿಟ್ಟುಕೊಂಡಿದ್ದಾರೆ.

ಸಮಂತಾ ಹಂಚಿಕೊಂಡ ಆಶ್ರಮದ ಚಿತ್ರಗಳು ಇಲ್ಲಿವೆ:

Samantha went to Ashram

ಸಮಂತಾ ಹಂಚಿಕೊಂಡ ಆಶ್ರಮದ ಚಿತ್ರ

ಕೆಲ ಸಮಯದ ಹಿಂದಷ್ಟೇ ಸಾಮಾಜಿಕ ಜಾಲತಾಣಗಳ ಮುಖಾಂತರ ಸಮಂತಾ ಹಾಗೂ ನಾಗ ಚೈತನ್ಯ ಪರಸ್ಪರ ದೂರವಾಗುತ್ತಿರುವ ನಿರ್ಧಾರವನ್ನು ಘೋಷಿಸಿದ್ದರು. ಇದೊಂದು ಕಠಿಣ ನಿರ್ಧಾರವಾಗಿದ್ದು, ಬಹಳ ನೋವು ನೀಡುತ್ತಿದೆ ಎಂದೂ ಅವರು ಬರೆದುಕೊಂಡಿದ್ದರು. ಇತ್ತೀಚೆಗೆ ಅವರು ಡಿವೋರ್ಸ್​​ ಕುರಿತು ಹರಿದಾಡುತ್ತಿರುವ ವೈಯಕ್ತಿಕ ದಾಳಿಯ ವಿರುದ್ಧ ಮಾತನಾಡಿ, ಅವುಗಳನ್ನು ಸಂಪೂರ್ಣ ನಿರಾಕರಿಸಿದ್ದರು.

ಇದನ್ನೂ ಓದಿ:

‘ಇಲ್ಲಿ ಕೂರಲು ಭಯವಾಗುತ್ತಿದೆ’; ಡಿವೋರ್ಸ್ ಬಳಿಕ ಮೊದಲ ಬಾರಿಗೆ ಸ್ಕ್ರೀನ್ ಮೇಲೆ ಕಾಣಿಸಿಕೊಂಡ ಸಮಂತಾ ಮಾತು

ಕರ್ನಾಟಕದಲ್ಲಿ ‘ಸಲಗ’ ವಿಜಯಯಾತ್ರೆ; ಯಾರೆಲ್ಲಾ ಪಾಲ್ಗೊಳ್ಳಲಿದ್ದಾರೆ?

ಯಶ್​ 19ನೇ ಸಿನಿಮಾ ಬಗ್ಗೆ ಹರಿದಾಡುತ್ತಿರುವ ಸುದ್ದಿಯ ಅಸಲಿಯತ್ತೇನು?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ