ಕರ್ನಾಟಕದಲ್ಲಿ ‘ಸಲಗ’ ವಿಜಯಯಾತ್ರೆ; ಯಾರೆಲ್ಲಾ ಪಾಲ್ಗೊಳ್ಳಲಿದ್ದಾರೆ?

ವಿಜಯಯಾತ್ರೆ ಮಾಡೋಕೆ ಚಿತ್ರತಂಡ ಪ್ಲ್ಯಾನ್​ ರೂಪಿಸಿದೆ. ನಿರ್ಮಾಪಕ ಕೆ.ಪಿ. ಶ್ರೀಕಾಂತ್​, ನಟ ದುನಿಯಾ ವಿಜಯ್​, ಕಾಕ್ರೋಚ್​ ಸುಧಿ ಸೇರಿ ಎಲ್ಲರೂ ಈ ಯಾತ್ರೆಯ ಭಾಗವಾಗಲಿದ್ದಾರೆ.

ಸಲಗ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ನಿರ್ದೇಶನದಲ್ಲಿ ದುನಿಯಾ ವಿಜಯ್​ ಗೆದ್ದಿದ್ದಾರೆ.  ಈಗ ಸಿನಿಮಾ ಗೆದ್ದ ಖುಷಿಯಲ್ಲಿ ಚಿತ್ರತಂಡ ರಾಜ್ಯಾದ್ಯಂತ ಗೆಲುವಿನ ಯಾತ್ರೆ ಮಾಡಲಿದೆ.

ವಿಜಯ ಯಾತ್ರೆ ಮಾಡೋಕೆ ಚಿತ್ರತಂಡ ಪ್ಲ್ಯಾನ್​ ರೂಪಿಸಿದೆ. ನಿರ್ಮಾಪಕ ಕೆ.ಪಿ. ಶ್ರೀಕಾಂತ್​, ನಟ ದುನಿಯಾ ವಿಜಯ್​, ಕಾಕ್ರೋಚ್​ ಸುಧಿ ಸೇರಿ ಎಲ್ಲರೂ ಈ ಯಾತ್ರೆಯ ಭಾಗವಾಗಲಿದ್ದಾರೆ. ಇದರ ದಿನಾಂಕ ಶೀಘ್ರವೇ ಘೋಷಣೆ ಆಗಲಿದೆ.

‘ಸಲಗ’ ಚಿತ್ರದಲ್ಲಿ ಸಾಮ್ರಾಟ್​ ಎಂಬ ಪೊಲೀಸ್​ ಅಧಿಕಾರಿಯ ಪಾತ್ರದಲ್ಲಿ ಡಾಲಿ ಧನಂಜಯ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಹಲವು ದೃಶ್ಯಗಳಲ್ಲಿ ಅವರು ಆವರಿಸಿಕೊಂಡಿದ್ದಾರೆ. ‘ಟಗರು’ ಬಳಿಕ ಅವರಿಗೆ ಮತ್ತೊಮ್ಮೆ ಭರ್ಜರಿ ಜನಮೆಚ್ಚುಗೆ ಸಿಕ್ಕಿದೆ. ದುನಿಯಾ ವಿಜಯ್​ ಮತ್ತು ಡಾಲಿ ಧನಂಜಯ ಅವರ ಮುಖಾಮುಖಿ ದೃಶ್ಯಗಳು ‘ಸಲಗ’ ಸಿನಿಮಾದಲ್ಲಿ ರಾರಾಜಿಸಿವೆ.

ಇದನ್ನೂ ಓದಿ: ‘ಸಲಗ’ ಚಿತ್ರದ ಸಾವಿತ್ರಿ-ಚಿನ್ನು ಲವ್​ಸ್ಟೋರಿ ಬಗ್ಗೆ ಕಾಕ್ರೋಚ್​​ ಸುಧಿ ಫನ್ನಿ ಮಾತುಕತೆ

Click on your DTH Provider to Add TV9 Kannada