‘ಸಲಗ’ ಚಿತ್ರದ ಸಾವಿತ್ರಿ-ಚಿನ್ನು ಲವ್​ಸ್ಟೋರಿ ಬಗ್ಗೆ ಕಾಕ್ರೋಚ್​​ ಸುಧಿ ಫನ್ನಿ ಮಾತುಕತೆ

‘ಸಲಗ’ ಚಿತ್ರದಲ್ಲಿ ಮಿಂಚಿರುವ ಸಾವಿತ್ರಿ ಎಂಬ ಫನ್ನಿ ಪಾತ್ರದ ಬಗ್ಗೆ ನಟ ಕಾಕ್ರೋಚ್​​ ಸುಧಿ ಕೆಲವು ಇಂಟರೆಸ್ಟಿಂಗ್​ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ರಾಜ್ಯಾದ್ಯಂತ ಒಳ್ಳೆಯ ಪ್ರದರ್ಶನ ಕಾಣುತ್ತಿರುವ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಗೆದ್ದಿರುವುದು ಅವರಿಗೆ ಸಖತ್ ಖುಷಿ ನೀಡಿದೆ.

ದುನಿಯಾ ವಿಜಯ್​ ನಟನೆ, ನಿರ್ದೇಶನದ ‘ಸಲಗ’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿದೆ. ಈ ಸಿನಿಮಾದ ಪ್ರತಿಯೊಂದು ಪಾತ್ರವೂ ಕೂಡ ಪ್ರೇಕ್ಷಕರ ಗಮನ ಸೆಳೆಯುತ್ತಿವೆ. ದುನಿಯಾ ವಿಜಯ್​ ಹೀರೋ ಆಗಿದ್ದರೂ ಕೂಡ ಅವರು ತೆರೆಮೇಲೆ ಹೆಚ್ಚು ಕಾಣಿಸಿಕೊಳ್ಳುವ ಬದಲು ಇತರೆ ಕಲಾವಿದರಿಗೆ ಜಾಸ್ತಿ ಸ್ಕ್ರೀನ್​ ಸ್ಪೇಸ್​ ನೀಡಿದ್ದಾರೆ. ಹಾಗಾಗಿ ಎಲ್ಲ ಪಾತ್ರಗಳು ಈ ಚಿತ್ರದಲ್ಲಿ ಮಿಂಚಿವೆ. ಅದರಲ್ಲೂ ಕಾಕ್ರೋಚ್​​ ಸುಧಿ ನಿಭಾಯಿಸಿರುವ ಸಾವಿತ್ರಿ ಎಂಬ ಪಾತ್ರ ಭರ್ಜರಿ ಮನರಂಜನೆ ನೀಡುತ್ತಿದೆ. ಆ ಪಾತ್ರದ ಬಗ್ಗೆ ಸುಧಿ ಮಾತನಾಡಿದ್ದಾರೆ.

ನಿರೀಕ್ಷೆಗೂ ಮೀರಿ ‘ಸಲಗ’ ಚಿತ್ರ ಗೆದ್ದಿರುವುದರಿಂದ ಬೆಂಗಳೂರಿನ ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಇಡೀ ಚಿತ್ರತಂಡ ಪೂಜೆ ಸಲ್ಲಿಸಿದೆ. ಈ ವೇಳೆ ಗೆಲುವಿನ ಸಂಭ್ರಮವನ್ನು ಮಾಧ್ಯಮಗಳ ಜೊತೆ ಹಂಚಿಕೊಳ್ಳಲಾಯಿತು. ಚಿತ್ರದ ಕಲಾವಿದರಾದ ಡಾಲಿ ಧನಂಜಯ, ದುನಿಯಾ ವಿಜಯ್​, ಸಂಜನಾ ಆನಂದ್​, ಸಂಭಾಷಣಾಕಾರ ಮಾಸ್ತಿ ಮುಂತಾದವರು ಮಾತನಾಡಿದರು. ತಮ್ಮ ಸಾವಿತ್ರಿ ಎಂಬ ಫನ್ನಿ ಪಾತ್ರದ ಬಗ್ಗೆ ಸುಧಿ ಕೆಲವು ಇಂಟರೆಸ್ಟಿಂಗ್​ ಸಂಗತಿಗಳನ್ನು ಹಂಚಿಕೊಂಡರು.

ಇದನ್ನೂ ಓದಿ:

‘ಸಲಗ’ ಸೀಕ್ವೆಲ್​ ಬಗ್ಗೆ ಬಾಯಿ ಬಿಟ್ಟ ಡಾಲಿ ಧನಂಜಯ; ಗೆದ್ದ ಖುಷಿಯಲ್ಲಿ ದುನಿಯಾ ವಿಜಯ್​

Salaga Movie Review: ‘ಸಲಗ’ ತುಂಬಾ ರಗಡ್​ ಆಗಿದೆ ಎಚ್ಚರಿಕೆ! ದುನಿಯಾ ವಿಜಯ್​ಗೆ ಮಾಸ್​ ಪ್ರೇಕ್ಷಕರೇ ಟಾರ್ಗೆಟ್​

Click on your DTH Provider to Add TV9 Kannada