‘ಸಲಗ’ ಸೀಕ್ವೆಲ್​ ಬಗ್ಗೆ ಬಾಯಿ ಬಿಟ್ಟ ಡಾಲಿ ಧನಂಜಯ; ಗೆದ್ದ ಖುಷಿಯಲ್ಲಿ ದುನಿಯಾ ವಿಜಯ್​

Salaga Movie: ‘ಸಲಗ’ ಚಿತ್ರದಲ್ಲಿ ಸಾಮ್ರಾಟ್​ ಎಂಬ ಪೊಲೀಸ್​ ಅಧಿಕಾರಿಯ ಪಾತ್ರದಲ್ಲಿ ಡಾಲಿ ಧನಂಜಯ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಹಲವು ದೃಶ್ಯಗಳನ್ನು ಅವರು ಆವರಿಸಿಕೊಂಡಿದ್ದಾರೆ. ಈ ಪಾತ್ರಕ್ಕೆ ಭರ್ಜರಿ ಜನಮೆಚ್ಚುಗೆ ಸಿಕ್ಕಿದೆ.

‘ಸಲಗ’ ಸೀಕ್ವೆಲ್​ ಬಗ್ಗೆ ಬಾಯಿ ಬಿಟ್ಟ ಡಾಲಿ ಧನಂಜಯ; ಗೆದ್ದ ಖುಷಿಯಲ್ಲಿ ದುನಿಯಾ ವಿಜಯ್​
ಧನಂಜಯ, ದುನಿಯಾ ವಿಜಯ್​
Follow us
| Updated By: ಮದನ್​ ಕುಮಾರ್​

Updated on: Oct 19, 2021 | 3:10 PM

‘ಸಲಗ’ ಚಿತ್ರವನ್ನು ಪ್ರೇಕ್ಷಕರು ಗೆಲ್ಲಿಸಿದ್ದಾರೆ. ದುನಿಯಾ ವಿಜಯ್​ ಅವರ ಚೊಚ್ಚಲ ನಿರ್ದೇಶನದ ಪ್ರಯತ್ನಕ್ಕೆ ಫಲ ಸಿಕ್ಕಿದೆ. ನಿರ್ಮಾಪಕ ಕೆ.ಪಿ. ಶ್ರೀಕಾಂತ್​ಗೆ ಭರ್ಜರಿ ಲಾಭ ಆಗಿದೆ. ಹಾಗಾಗಿ ಬೆಂಗಳೂರಿನ ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಇಡೀ ಚಿತ್ರತಂಡ ಪೂಜೆ ಸಲ್ಲಿಸಿದೆ. ಈ ವೇಳೆ ಗೆಲುವಿನ ಸಂಭ್ರಮವನ್ನು ಮಾಧ್ಯಮಗಳ ಜೊತೆ ಹಂಚಿಕೊಳ್ಳಲಾಯಿತು. ಆಗ ಸಲಗ ಸೀಕ್ವೆಲ್​ ಮಾಡುವ ಕುರಿತು ಡಾಲಿ ಧನಂಜಯ ಮಾತನಾಡಿದರು. ‘ಸಲಗ 2, ಸಲಗ 3, ಸಲಗ 4 ಎಲ್ಲವೂ ಮಾಡುತ್ತೇವೆ’ ಎಂದು ಅವರು ಹೇಳಿದ್ದಾರೆ.

‘ಸಲಗ’ ಚಿತ್ರದಲ್ಲಿ ಸಾಮ್ರಾಟ್​ ಎಂಬ ಪೊಲೀಸ್​ ಅಧಿಕಾರಿಯ ಪಾತ್ರದಲ್ಲಿ ಡಾಲಿ ಧನಂಜಯ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಹಲವು ದೃಶ್ಯಗಳಲ್ಲಿ ಅವರು ಆವರಿಸಿಕೊಂಡಿದ್ದಾರೆ. ‘ಟಗರು’ ಬಳಿಕ ಅವರಿಗೆ ಮತ್ತೊಮ್ಮೆ ಭರ್ಜರಿ ಜನಮೆಚ್ಚುಗೆ ಸಿಕ್ಕಿದೆ. ದುನಿಯಾ ವಿಜಯ್​ ಮತ್ತು ಡಾಲಿ ಧನಂಜಯ ಅವರ ಮುಖಾಮುಖಿ ದೃಶ್ಯಗಳು ‘ಸಲಗ’ ಸಿನಿಮಾದಲ್ಲಿ ರಾರಾಜಿಸಿವೆ. ಚಿತ್ರ ಗೆಲುವು ಕಂಡಿರುವುದರಿಂದ ಇದೇ ತಂಡದ ಜೊತೆ ಸೀಕ್ವೆಲ್​ ಮಾಡುವ ಇಂಗಿತವನ್ನು ಧನಂಜಯ ವ್ಯಕ್ತಪಡಿಸಿದರು.

‘ಒಳ್ಳೆಯ ಸಿನಿಮಾ ಮಾಡಿದರೆ ನಿರ್ಮಾಪಕ ಕೆಪಿ ಶ್ರೀಕಾಂತ್​ ಅವರು ಅದನ್ನು ಬೇರೊಂದು ಮಟ್ಟಕ್ಕೆ ತಲುಪಿಸುತ್ತಾರೆ. ಸಲಗ ರೀತಿಯ ಚಿತ್ರದಲ್ಲಿ ನಾನೂ ಒಂದು ಭಾಗ ಆಗಿರುವುದಕ್ಕೆ ಖುಷಿ ಇದೆ. ಸಲಗ 2, ಸಲಗ 3, ಸಲಗ 4 ಎಲ್ಲವೂ ಮಾಡುತ್ತೇವೆ’ ಎಂದು ಧನಂಜಯ ಹೇಳಿದರು.

ಓಟಿಟಿಯಲ್ಲಿ ಸದ್ಯಕ್ಕಿಲ್ಲ ‘ಸಲಗ’

ಕೊರೊನಾ ಆತಂಕವನ್ನು ಮರೆತು ಜನರು ಚಿತ್ರಮಂದಿರಕ್ಕೆ ಬಂದು ‘ಸಲಗ’ ಚಿತ್ರವನ್ನು ನೋಡುತ್ತಿದ್ದಾರೆ. ಆದರೆ ಕೆಲವರು ಈ ಚಿತ್ರ ಓಟಿಟಿಗೆ ಬಂದ ಮೇಲೆ ನೋಡೋಣ ಎಂದುಕೊಳ್ಳುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಕೆಲವರು ಗಾಸಿಪ್​ ಹಬ್ಬಿಸುತ್ತಿದ್ದಾರೆ. ಅದು ಚಿತ್ರತಂಡದ ಗಮನಕ್ಕೆ ಬಂದಿದೆ. ‘ಸದ್ಯಕ್ಕಂತೂ ನಮ್ಮ ಸಿನಿಮಾ ಓಟಿಟಿಗೆ ಬರುವುದಿಲ್ಲ’ ಎಂದು ದುನಿಯಾ ವಿಜಯ್​ ನೇರವಾಗಿ ಹೇಳಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಒಂದು ವಿಡಿಯೋ ಹಂಚಿಕೊಳ್ಳುವ ಮೂಲಕ ಈ ವಿಚಾರವನ್ನು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:

Salaga Movie Review: ‘ಸಲಗ’ ತುಂಬಾ ರಗಡ್​ ಆಗಿದೆ ಎಚ್ಚರಿಕೆ! ದುನಿಯಾ ವಿಜಯ್​ಗೆ ಮಾಸ್​ ಪ್ರೇಕ್ಷಕರೇ ಟಾರ್ಗೆಟ್​

‘ಚರಂಡಿ ಕ್ಲೀನ್​ ಮಾಡುವವನ ಪಾತ್ರ ಮಾಡ್ತೀನಿ’: ದುನಿಯಾ ವಿಜಯ್​ ನಿರ್ದೇಶನದಲ್ಲಿ ಶಿವಣ್ಣನಿಗೆ ನಟಿಸುವ ಆಸೆ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ