AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಭಜರಂಗಿ 2’ ಟ್ರೇಲರ್​ ಬಿಡುಗಡೆಗೂ ಮುನ್ನ ಧೂಳೆಬ್ಬಿಸಿದ ಪೋಸ್ಟರ್​; ಚಿತ್ರದ ಮೇಲೆ ಹೆಚ್ಚಿತು ನಿರೀಕ್ಷೆ

Bhajarangi 2: ಕೆಲವೇ ದಿನಗಳ ಹಿಂದೆ ಹಿರಿಯ ನಟಿ ಶ್ರುತಿ, ಖಳನಟ ಲೋಕಿ ಅವರ ಪೋಸ್ಟರ್​ಗಳನ್ನು ‘ಭಜರಂಗಿ 2’ ಚಿತ್ರತಂಡ ಬಿಡುಗಡೆ ಮಾಡಿತ್ತು. ಈಗ ಮತ್ತೋರ್ವ ಖಳನಟ ಚೆಲುವರಾಜು ಅವರ ಪೋಸ್ಟರ್​ ಹೊರಬಂದಿದೆ.

‘ಭಜರಂಗಿ 2’ ಟ್ರೇಲರ್​ ಬಿಡುಗಡೆಗೂ ಮುನ್ನ ಧೂಳೆಬ್ಬಿಸಿದ ಪೋಸ್ಟರ್​; ಚಿತ್ರದ ಮೇಲೆ ಹೆಚ್ಚಿತು ನಿರೀಕ್ಷೆ
‘ಭಜರಂಗಿ 2’ ಚಿತ್ರದ ಪೋಸ್ಟರ್​
TV9 Web
| Edited By: |

Updated on: Oct 19, 2021 | 12:31 PM

Share

ನಿರ್ದೇಶಕ ಎ. ಹರ್ಷ ಮತ್ತು ನಟ ಶಿವರಾಜ್​ಕುಮಾರ್​ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ‘ಭಜರಂಗಿ 2’ ಚಿತ್ರದ ಬಗ್ಗೆ ಅಭಿಮಾನಿಗಳು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗಾಗಲೇ ಈ ಸಿನಿಮಾದ ಟೀಸರ್​ ಮತ್ತು ಪೋಸ್ಟರ್​ಗಳು ಭಾರಿ ಹೈಪ್​ ಸೃಷ್ಟಿಸಿವೆ. ಅ.29ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಬುಧವಾರ (ಅ.20) ಟ್ರೇಲರ್​​ ಬಿಡುಗಡೆಗೆ ದಿನಾಂಕ ನಿಗದಿ ಮಾಡಲಾಗಿದೆ. ಸೂಪರ್​ ನ್ಯಾಚುರಲ್​ ಅಂಶಗಳನ್ನು ಹೊಂದಿರುವ ಈ ಸಿನಿಮಾ ಹೇಗೆ ಮೂಡಿಬಂದಿದೆ ಎಂಬುದರ ಝಲಕ್​ ಅನ್ನು ಈ ಟ್ರೇಲರ್​ನಲ್ಲಿ ತೋರಿಸಲಾಗುವುದು. ಅದಕ್ಕೂ ಮುನ್ನ ಈ ಚಿತ್ರದ ವಿಲನ್​ ಆರಕ ಪೋಸ್ಟರ್​ ಸಖತ್​ ಗಮನ ಸೆಳೆಯುತ್ತಿದೆ.

ನಾಯಕ ನಟ ಶಿವರಾಜ್​ಕುಮಾರ್​, ನಾಯಕಿ ಭಾವನಾ ಮೆನನ್​ ಮಾತ್ರವಲ್ಲದೇ ಎಲ್ಲ ಪಾತ್ರಗಳ ಪೋಸ್ಟರ್​ಗಳನ್ನು ತುಂಬ ಚೆನ್ನಾಗಿ ವಿನ್ಯಾಸಗೊಳಿಸಲಾಗಿದೆ. ಕೆಲವೇ ದಿನಗಳ ಹಿಂದೆ ಹಿರಿಯ ನಟಿ ಶ್ರುತಿ, ಖಳನಟ ಲೋಕಿ ಅವರ ಪೋಸ್ಟರ್​ಗಳನ್ನು ಬಿಡುಗಡೆ ಮಾಡಲಾಗಿತ್ತು. ಈಗ ಮತ್ತೋರ್ವ ಖಳನಟ ಚೆಲುವರಾಜು ಅವರ ಪೋಸ್ಟರ್​ ಹೊರಬಂದಿದೆ. ಟ್ರೇಲರ್​ ಬಿಡುಗಡೆಗೂ ಒಂದು ದಿನ ಮುನ್ನ ‘ಭಜರಂಗಿ 2’ ಚಿತ್ರತಂಡ ಈ ​ಪೋಸ್ಟರ್​ ಹಂಚಿಕೊಂಡಿದೆ. ಇದರಲ್ಲಿ ವಿಲನ್​ ಆರಕ ಅಬ್ಬರಿಸಿದ್ದಾನೆ. ಅದನ್ನು ನೋಡಿದರೆ ಸಿನಿಪ್ರಿಯರ ಕೌತುಕ ಡಬಲ್​ ಆಗುವುದರಲ್ಲಿ ಸಂಶಯವಿಲ್ಲ.

ಈ ಸಿನಿಮಾ ಅ.29ರಂದು ಬಿಡುಗಡೆ ಆಗಲಿದೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆಯೇ ಅಭಿಮಾನಿಗಳು ಅದನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದರು. ಪರಿಣಾಮವಾಗಿ ಟ್ವಿಟರ್​ನಲ್ಲಿ ‘ಭಜರಂಗಿ 2’ ಟ್ರೆಂಡ್​ ಆಗಿತ್ತು. ಮಂಜು ಪಾವಗಡ, ಶಿವರಾಜ್​ ಕೆ. ಆರ್​ ಪೇಟೆ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಜಯಣ್ಣ ಕಂಬೈನ್ಸ್​ ಬ್ಯಾನರ್​ನಲ್ಲಿ ‘ಭಜರಂಗಿ 2’ ನಿರ್ಮಾಣ ಆಗಿದೆ.

ಬೇರೆಲ್ಲ ಸಿನಿಮಾಗಳಲ್ಲಿ​ ಗೊಂಬೆಯಂತೆ ಕಾಣಿಸಿಕೊಳ್ಳುತ್ತಿದ್ದ ಭಾವನಾ ಮೆನನ್​ ಈ ಚಿತ್ರದಲ್ಲಿ ರಗಡ್​ ಅವತಾರ ತಾಳಿದ್ದಾರೆ. ‘ಚಿಣಿಮಿಣಿಕಿ- ದಿ ಲೇಡಿ ಫೈರ್’ ಎಂಬ ಅಡಿಬರಹದಲ್ಲಿ ನಾಯಕಿ ಭಾವನಾ ಮೆನನ್​ ಪೋಸ್ಟರ್ ಅನ್ನು ಚಿತ್ರತಂಡ ಹಂಚಿಕೊಂಡಿತ್ತು. ಕೇವಲ ಪೋಸ್ಟರ್​ಗಳೇ ಈ ಮಟ್ಟಕ್ಕೆ ಕ್ರೇಜ್​ ಸೃಷ್ಟಿ ಮಾಡಿರುವಾಗ ಇನ್ನು ಟ್ರೇಲರ್​ ಹೇಗಿರಬಹುದು? ಬುಧವಾರ (ಅ.20) ಸಂಜೆ 6.45ಕ್ಕೆ ಟ್ರೇಲರ್​ ಬಿಡುಗಡೆ ಆಗಲಿದೆ. ಈ ಚಿತ್ರಕ್ಕೆ ಅರ್ಜುನ್​ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಸ್ವಾಮಿ ಜೆ. ಗೌಡ ಛಾಯಾಗ್ರಹಣ, ದೀಪು ಎಸ್​. ಕುಮಾರ್​ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.

ಇದನ್ನೂ ಓದಿ:

‘ಚರಂಡಿ ಕ್ಲೀನ್​ ಮಾಡುವವನ ಪಾತ್ರ ಮಾಡ್ತೀನಿ’: ದುನಿಯಾ ವಿಜಯ್​ ನಿರ್ದೇಶನದಲ್ಲಿ ಶಿವಣ್ಣನಿಗೆ ನಟಿಸುವ ಆಸೆ

‘ಶಿವಣ್ಣನಿಗೆ ನಾನು ಡೈರೆಕ್ಷನ್​ ಮಾಡ್ತೀನಿ’; ಸಲಗ ರಿಲೀಸ್​ಗೂ ಮೊದಲು ದುನಿಯಾ ವಿಜಯ್​ ಘೋಷಣೆ

ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಹೇಗಿದೆ ನೋಡಿ
ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಹೇಗಿದೆ ನೋಡಿ
ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು
ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ