Vasishta Simha: ಸ್ಯಾಂಡಲ್​ವುಡ್ ನಟ ವಸಿಷ್ಠ ಸಿಂಹಗೆ ಜನ್ಮದಿನದ ಸಂಭ್ರಮ; ಹೊಸ ಚಿತ್ರಗಳ ಪೋಸ್ಟರ್ ರಿಲೀಸ್

Vasishta Simha Birthday: ಸ್ಯಾಂಡಲ್​ವುಡ್ ನಟ, ಹಿನ್ನೆಲೆ ಗಾಯಕ ವಸಿಷ್ಠ ಸಿಂಹ ಜನ್ಮದಿನವಿಂದು. ಈ ಹಿನ್ನೆಲೆಯಲ್ಲಿ ಅವರ ನಟನೆಯ ಹಲವು ಚಿತ್ರಗಳ ಪೋಸ್ಟರ್ ರಿಲೀಸ್ ಆಗಿವೆ.

Vasishta Simha: ಸ್ಯಾಂಡಲ್​ವುಡ್ ನಟ ವಸಿಷ್ಠ ಸಿಂಹಗೆ ಜನ್ಮದಿನದ ಸಂಭ್ರಮ; ಹೊಸ ಚಿತ್ರಗಳ ಪೋಸ್ಟರ್ ರಿಲೀಸ್
ವಸಿಷ್ಠ ಸಿಂಹ
Follow us
TV9 Web
| Updated By: shivaprasad.hs

Updated on: Oct 19, 2021 | 3:52 PM

ಕನ್ನಡ ಚಿತ್ರರಂಗದಲ್ಲಿ ಪ್ರಸ್ತುತ ಗಮನ‌ಸೆಳೆಯುತ್ತಿರುವ ನಟ, ಹಿನ್ನೆಲೆ ಗಾಯಕ ವಸಿಷ್ಠ ಸಿಂಹ ಜನ್ಮದಿನವಿಂದು. ನಾಯಕನಾಗಿ, ಖಳನಾಯಕನಾಗಿ ಹಾಗೂ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿರುವ ಅವರು ಪ್ರಸ್ತುತ ವಿವಿಧ ಭಾಷೆಯ ಚಿತ್ರರಂಗಗಳಲ್ಲೂ ಗುರುತಿಸಿಕೊಳ್ಳುತ್ತಿದ್ದಾರೆ. ಅವರ ಜನ್ಮದಿನದ ಪ್ರಯುಕ್ತ ಹಲವು ಹೊಸ ಚಿತ್ರಗಳ ಘೋಷಣೆಯೂ ಆಗಿದೆ. ಅವುಗಳಲ್ಲಿ ವಸಿಷ್ಠರ ಖದರ್ ಗೆಟಪ್ ಅಭಿಮಾನಿಗಳಿಗೆ ಇಷ್ಟವಾಗಿದ್ದು, ನಟನಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ.

ಈಗಾಗಲೇ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ವಸಿಷ್ಠ ಸಿಂಹ ಗುರುತಿಸಿಕೊಂಡಿದ್ದಾರೆ. ಇಂದು ಅವರ ನಟನೆಯಲ್ಲಿ ಮೂಡಿಬರುತ್ತಿರುವ ತೆಲುಗಿನ ಎರಡು ಚಿತ್ರಗಳ ಪೋಸ್ಟರ್ ರಿಲೀಸ್ ಆಗಿವೆ. ಅದರಲ್ಲಿ ‘ನಯೀಮ್‌ ಡೈರೀಸ್’ ಚಿತ್ರದಲ್ಲಿ ವಸಿಷ್ಠ ಸಿಂಹರ ಸ್ಟೈಲ್‌ ತುಸು ಬದಲಾಗಿದೆ. ಜೊತೆಗೆ ಚಿತ್ರತಂಡವು ಮಾಸ್ ಪೋಸ್ಟರ್ ಮುಖಾಂತರ ನಟನಿಗೆ ಜನ್ಮದಿನಗಳ ಶುಭಾಶಯಗಳನ್ನು ಕೋರಿದೆ. ‘ನಯೀಮ್ ಡೈರೀಸ್’ ಚಿತ್ರದ ಪೋಸ್ಟರ್ ಇಲ್ಲಿದೆ:

ಮತ್ತೊಂದು ತೆಲುಗು ಚಿತ್ರದ ಪೋಸ್ಟರ್ ಇಲ್ಲಿದೆ:

‘ಸಿಂಬಾ’ ಚಿತ್ರದಲ್ಲಿ ವಸಿಷ್ಠ ಸಿಂಹ ಖಡಕ್‌ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. ಸಿಂಬಾ ಚಿತ್ರತಂಡವೂ ಪೋಸ್ಟರ್ ಬಿಡುಗಡೆ ಮಾಡಿ ಶುಭಹಾರೈಸಿದೆ. ‘ಸಿಂಬಾ’ ಚಿತ್ರದ ಪೋಸ್ಟರ್ ಇಲ್ಲಿದೆ.

ಪ್ರಸ್ತುತ ವಸಿಷ್ಠ ಸಿಂಹ ನಟನೆಯ ‘ಕಾಲಚಕ್ರ’ ಬಿಡುಗಡೆಗೆ ಸಿದ್ಧವಾಗಿದೆ. ಕೆಜಿಎಫ್ 1 ರಲ್ಲೂ ವಸಿಷ್ಠ ಮಿಂಚಿದ್ದರು. ಇದೀಗ ಕೆಜಿಎಫ್ 2 ಕೂಡ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ. ಬಹುನಿರೀಕ್ಷಿತ ‘ಹೆಡ್ ಬುಷ್’ ಸೇರಿದಂತೆ ಹಲವಾರು ಚಿತ್ರಗಳು ವಸಿಷ್ಠ ಬತ್ತಳಿಕೆಯಲ್ಲಿವೆ. ವಸಿಷ್ಠರ ಬಹುಮುಖ ಪ್ರತಿಭೆ ಅಚ್ಚರಿ ಮೂಡಿಸುವಂಥದ್ದು. ತಮ್ಮ ಖಡಕ್ ಧ್ವನಿಯಿಂದ ಅವರು ಎಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೋ, ಅಂತೆಯೇ ಅದೇ ಧ್ವನಿಯಲ್ಲಿ ಮಧುರವಾದ ಹಾಡುಗಳನ್ನೂ ಹಾಡಿ ಎಲ್ಲರನ್ನೂ ಮೋಡಿಮಾಡಿದ್ದಾರೆ.

ವಸಿಷ್ಠ ಸಿಂಹ ಹಾಡಿರುವ ‘ದಯವಿಟ್ಟು ಗಮನಿಸಿ’ ಚಿತ್ರದ ‘ಮರೆತೇ ಹೋದೆನು’(Unplugged) ಹಾಡು:

‘ದಯವಿಟ್ಟು ಗಮನಿಸಿ’ ಚಿತ್ರದ ‘ಮರೆತೇ ಹೋದೆನು’ ಹಾಡಂತೂ ಇನ್ನೂ ಚಿತ್ರಪ್ರೇಮಿಗಳ ಎದೆಯಲ್ಲಿ ಗುನುಗುಟ್ಟುತ್ತಿದೆ. ಇದಲ್ಲದೇ ಕಿರಿಕ್ ಪಾರ್ಟಿ ಸೇರಿದಂತೆ ಹಲವಾರು ಚಿತ್ರಗಳ ಹಾಡಿಗೆ ಧ್ವನಿಯಾಗಿದ್ದಾರೆ. ವಸಿಷ್ಠ ಸಿಂಹರ ಹುಟ್ಟುಹಬ್ಬದಂದು ಅವರ ಅಭಿಮಾನಿಗಳು ನೆಚ್ಚಿನ ನಟನಿಗೆ ಶುಭಕೋರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಶುಭಾಶಯದ ಮಹಾಪೂರವೇ ಹರಿದುಬರುತ್ತಿದ್ದು, ವಸಿಷ್ಠ ಸಿಂಹ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತಿದ್ದಾರೆ.

ಇದನ್ನೂ ಓದಿ:

‘ಸಲಗ’ ಸೀಕ್ವೆಲ್​ ಬಗ್ಗೆ ಬಾಯಿ ಬಿಟ್ಟ ಡಾಲಿ ಧನಂಜಯ; ಗೆದ್ದ ಖುಷಿಯಲ್ಲಿ ದುನಿಯಾ ವಿಜಯ್​

ಯಾವ ಸಿನಿಮಾ ನಟಿಯರಿಗೂ ಕಮ್ಮಿಯಿಲ್ಲ ಟೀಂ ಇಂಡಿಯಾ ಯುವ ಕ್ರಿಕೆಟಿಗರ ಪ್ರೇಯಸಿಯರು..!

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ