‘ಶಿವಣ್ಣನಿಗೆ ನಾನು ಡೈರೆಕ್ಷನ್​ ಮಾಡ್ತೀನಿ’; ಸಲಗ ರಿಲೀಸ್​ಗೂ ಮೊದಲು ದುನಿಯಾ ವಿಜಯ್​ ಘೋಷಣೆ

‘ಶಿವಣ್ಣನಿಗೆ ನಾನು ಡೈರೆಕ್ಷನ್​ ಮಾಡ್ತೀನಿ’; ಸಲಗ ರಿಲೀಸ್​ಗೂ ಮೊದಲು ದುನಿಯಾ ವಿಜಯ್​ ಘೋಷಣೆ

TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 13, 2021 | 7:56 PM

ಸಲಗ ಸಿನಿಮಾದ ಪ್ರೀ-ರಿಲೀಸ್​ ಇವೆಂಟ್​ಗೆ ಶಿವರಾಜ್​ಕುಮಾರ್​ ಆಗಮಿಸಿದ್ದರು. ಈ ವೇಳೆ ಶಿವಣ್ಣ ವಿಜಯ್​ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ದುನಿಯಾ ವಿಜಯ್​ ನಿರ್ದೇಶಿಸಿ, ನಟಿಸಿರುವ ‘ಸಲಗ’ ಸಿನಿಮಾ ನಾಳೆ (ಅಕ್ಟೋಬರ್​ 14) ತೆರೆಗೆ ಬರುತ್ತಿದೆ. ಈ ಸಿನಿಮಾ ರಿಲೀಸ್​ಗೂ ಮೊದಲೇ ವಿಜಯ್​ ಮಹತ್ವದ ಘೋಷಣೆ ಮಾಡಿದ್ದಾರೆ. ಅವಕಾಶ ಸಿಕ್ಕರೆ ಖಂಡಿತವಾಗಿಯೂ ಶಿವರಾಜ್​ಕುಮಾರ್​ ಸಿನಿಮಾಗೆ ಡೈರೆಕ್ಷನ್​ ಮಾಡುತ್ತೇನೆ ಎಂದಿದ್ದಾರೆ.

ಸಲಗ ಸಿನಿಮಾದ ಪ್ರೀ-ರಿಲೀಸ್​ ಇವೆಂಟ್​ಗೆ ಶಿವರಾಜ್​ಕುಮಾರ್​ ಆಗಮಿಸಿದ್ದರು. ಈ ವೇಳೆ ಶಿವಣ್ಣ ವಿಜಯ್​ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಜಯ್​, ‘ಶಿವರಾಜ್​ಕುಮಾರ್​ ನಮ್ಮ ಬಗ್ಗೆ ಹೊಗಳುತ್ತಾರೆ ಎಂದರೆ ಅದು ಖುಷಿಯ ವಿಚಾರ. ಅವಕಾಶ ಸಿಕ್ಕರೆ ಶಿವರಾಜ್​ಕುಮಾರ್ ಸಿನಿಮಾ ನಿರ್ದೇಶನ ಮಾಡುತ್ತೇನೆ’ ಎಂದಿದ್ದಾರೆ ವಿಜಯ್.

ಇದನ್ನೂ ಓದಿ: ವಿಜಯ್​ ದೇವರಕೊಂಡ ಸಿನಿಮಾ ತಂಡಕ್ಕೆ ಸಂಕಷ್ಟ; ಮೈಕ್​ ಟೈಸನ್​ ಜತೆ ಸಾಧ್ಯವಾಗುತ್ತಿಲ್ಲ ಶೂಟ್​

‘ಚರಂಡಿ ಕ್ಲೀನ್​ ಮಾಡುವವನ ಪಾತ್ರ ಮಾಡ್ತೀನಿ’: ದುನಿಯಾ ವಿಜಯ್​ ನಿರ್ದೇಶನದಲ್ಲಿ ಶಿವಣ್ಣನಿಗೆ ನಟಿಸುವ ಆಸೆ