ಭಾರತಕ್ಕೂ ಬಂತು ಬ್ರಿಟನ್ನಿನ ಸೂಪರ್ ಬೈಕ್ ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್; ಬೆಲೆ 9 ಲಕ್ಷಕ್ಕೂ ಹೆಚ್ಚು!
ಕಸ್ಟಮ್ ಸ್ಟೈಲಿಂಗ್ ಅಲ್ಯೂಮಿನಿಯಂ ನಂಬರ್ ಬೋರ್ಡ್, ಹೀಲ್ ಗಾರ್ಡ್, ಬ್ರಶ್ಡ್ ಅಲ್ಯೂಮಿನಿಯಂ ಹೆಡ್‌ಲೈಟ್ ಬ್ರಾಕೆಟ್, ಸಾಹಸ-ಆಧಾರಿತ ಸೀಟ್ ಮೆಟೀರಿಯಲ್ ಮತ್ತು ಥ್ರೊಟಲ್ ಬಾಡಿ ಫಿನಿಶರ್‌ಗಳೊಂದಿಗೆ ಹೊಸ ಸೈಡ್ ಪ್ಯಾನಲ್ ಅನ್ನು ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬೈಕ್ ಒಳಗೊಂಡಿದೆ.
ಬ್ರಿಟನ್ನಿನ ಸೂಪರ್ ಬೈಕ್ ತಯಾರಿಕೆ ಕಂಪನಿ ಟ್ರಯಂಫ್ ಮೊಟಾರ್ ಸೈಕಲ್ಸ್ ಸಂಸ್ಥೆಯು ತನ್ನ ಹೊಸ ಮತ್ತು ಸುಧಾರಿತ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬೈಕನ್ನು ಬುಧವಾರ ಭಾರತದಲ್ಲಿ ಲಾಂಚ್ ಮಾಡಿದ್ದು ದೆಹಲಿಯಲ್ಲಿ ಅದರ ಎಕ್ಸ್ ಶೋರೂಂ ಬೆಲೆ ರೂ 9.35 ಲಕ್ಷ ಆಗಿದೆ. 900 ಸಿಸಿ ಎಂಜಿನ್ ಹೊಂದಿರುವ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ 65 ಪಿಎಸ್ ಪವರ್ ಉತ್ಪಾದಿಸುತ್ತದಂತೆ. ಈ ಬೈಕ್ ಮೂರು ರೈಡಿಂಗ್ ಮೋಡ್ಗಳು (ರಸ್ತೆ, ಮಳೆ ಮತ್ತು ಆಫ್ ರೋಡ್), ಟಾರ್ಕ್ ನೆರವಿನ ಕ್ಲಚ್, ವಿಶಿಷ್ಟ ಬಗೆಯ ಎಲ್ ಇಡಿ ರೇರ್ ಲೈಟ್, ಯೂಎಸ್ಬಿ ಚಾರ್ಜರ್ ಗಳೊಂದಿಗೆ ಬರುತ್ತದೆ. 120 ಬಗೆಯ ಅಕ್ಸಸರೀಸ್ ಗಳ ಮೂಲಕ ಬೈಕನ್ನು ನಿಮ್ಮ ವ್ಯಕ್ತಿಗತವನ್ನಾಗಿ ಮಾಡಿಕೊಳ್ಳಬಹುದು ಎಂದು ತಾನು ಬಿಡುಗಡೆ ಮಾಡಿರುವ ಹೇಳಿಕೆಯೊಂದರಲ್ಲಿ ಟ್ರಯಂಫ್ ಮೊಟಾರ್ ಸೈಕಲ್ಸ್ ಸಂಸ್ಥೆ ಹೇಳಿದೆ.
ಕಸ್ಟಮ್ ಸ್ಟೈಲಿಂಗ್ ಅಲ್ಯೂಮಿನಿಯಂ ನಂಬರ್ ಬೋರ್ಡ್, ಹೀಲ್ ಗಾರ್ಡ್, ಬ್ರಶ್ಡ್ ಅಲ್ಯೂಮಿನಿಯಂ ಹೆಡ್‌ಲೈಟ್ ಬ್ರಾಕೆಟ್, ಸಾಹಸ-ಆಧಾರಿತ ಸೀಟ್ ಮೆಟೀರಿಯಲ್ ಮತ್ತು ಥ್ರೊಟಲ್ ಬಾಡಿ ಫಿನಿಶರ್‌ಗಳೊಂದಿಗೆ ಹೊಸ ಸೈಡ್ ಪ್ಯಾನಲ್ ಅನ್ನು ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬೈಕ್ ಒಳಗೊಂಡಿದೆ.
2021 ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್‌ನ ಸಸ್ಪೆನ್ಷನ್ ಮತ್ತು ಬ್ರೇಕ್ ಹಾರ್ಡ್‌ವೇರ್ ನಲ್ಲಿ ಬದಲಾವಣೆ ಆಗಿಲ್ಲ. ಇದು 41 ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಅವಳಿ ಬದಿಯ ಹಿಂಭಾಗದ ಶಾಕ್ಗಳ ಮೇಲೆ ಭಾರ ತಳೆದಿದೆ.
ಇದರ ಬ್ರೇಕಿಂಗ್ ಸೆಟಪ್ ಮುಂಭಾಗದಲ್ಲಿ ಒಂದೇ 310 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 255 ಎಂಎಂ ಡಿಸ್ಕ್ ಜೊತೆಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಒಳಗೊಂಡಿದೆ. ತನ್ನ ಸ್ಕ್ರಾಂಬ್ಲರ್ ವಿನ್ಯಾಸವನ್ನು ಪೂರ್ಣಗೊಳಿಸುವ ಭಾಗವಾಗಿ ಮೋಟಾರ್ ಸೈಕಲ್ 19 ಇಂಚಿನ ಮುಂಭಾಗ/17 ಇಂಚಿನ ಹಿಂಭಾಗದ ಸ್ಪೋಕ್ ಚಕ್ರಗಳನ್ನು ನಾಬಿ ಟೈರುಗಳ ಜೊತೆ ಹೊಂದಿದೆ.
ಇದನ್ನೂ ಓದಿ: Nitin Gadkari: ಬೇರೆ ಪ್ರಯಾಣಿಕರೊಂದಿಗೆ ಕ್ಯೂನಲ್ಲಿ ನಿಂತು ವಿಮಾನ ಹತ್ತಿದ ಕೇಂದ್ರ ಸಚಿವ ನಿತಿನ್ ಗಡ್ಕರಿ; ವಿಡಿಯೋ ವೈರಲ್