‘ಚರಂಡಿ ಕ್ಲೀನ್​ ಮಾಡುವವನ ಪಾತ್ರ ಮಾಡ್ತೀನಿ’: ದುನಿಯಾ ವಿಜಯ್​ ನಿರ್ದೇಶನದಲ್ಲಿ ಶಿವಣ್ಣನಿಗೆ ನಟಿಸುವ ಆಸೆ

‘ಸಲಗ’ ಸಿನಿಮಾದ ಪ್ರೀ-ರಿಲೀಸ್​ ಕಾರ್ಯಕ್ರಮಕ್ಕೆ ಶಿವರಾಜ್​ಕುಮಾರ್​ ಅತಿಥಿಯಾಗಿ ಆಗಮಿಸಿದ್ದರು. ಮುಂದಿನ ದಿನಗಳಲ್ಲಿ ಯಾವ ರೀತಿಯ ಪಾತ್ರ ಮಾಡಬೇಕು ಎಂಬ ಆಸೆಯನ್ನು ಶಿವಣ್ಣ ಹೇಳಿಕೊಂಡರು.

ನಟ ದುನಿಯಾ ವಿಜಯ್​ ಅವರು ಮೊದಲ ಬಾರಿಗೆ ‘ಸಲಗ’ ಸಿನಿಮಾ ಮೂಲಕ ನಿರ್ದೇಶಕನಾಗಿದ್ದಾರೆ. ಒಂದು ವೇಳೆ, ಅವರ ನಿರ್ದೇಶನದಲ್ಲಿ ತಾವು ನಟಿಸುವುದಾದರೆ ಒಂದು ಭಿನ್ನ ಪಾತ್ರ ಮಾಡುವುದಾಗಿ ಶಿವರಾಜ್​ಕುಮಾರ್​ ಹೇಳಿದ್ದಾರೆ. ‘ಸಲಗ’ ಚಿತ್ರದ ಪ್ರೀ-ರಿಲೀಸ್​ ಕಾರ್ಯಕ್ರಮ ಭಾನುವಾರ (ಅ.10) ನಡೆಯಿತು. ಈ ಸಮಾರಂಭಕ್ಕೆ ಅತಿಥಿಯಾಗಿ ಆಗಮಿಸಿದ್ದ ಶಿವರಾಜ್​ಕುಮಾರ್​ ಅವರು ಕೆಲವು ಮಾತುಗಳನ್ನು ಹಂಚಿಕೊಂಡರು.

‘ಈಗ ಮಾಡುತ್ತಿರುವುದೆಲ್ಲ ಬಿಟ್ಟು ಬೇರೆ ಏನಾದರೂ ಮಾಡಬೇಕು. ಡ್ರೈನೇಜ್​ ಕ್ಲೀನ್​ ಮಾಡುವವರ ಪಾತ್ರವನ್ನೂ ಮಾಡಬೇಕು. ಯಾಕೆಂದರೆ ಈ ಸಮಾಜದಲ್ಲಿ ಕ್ಲೀನ್​ ಮಾಡಬೇಕಿರುವುದು ಬಹಳ ಇದೆ’ ಎಂದು ಶಿವಣ್ಣ ಹೇಳಿದರು. ಈ ಪ್ರೀ ರಿಲೀಸ್​ ಇವೆಂಟ್​ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ಕೂಡ ಸಾಕ್ಷಿಯಾಗಿದ್ದರು. ಸಲಗ ತಂಡಕ್ಕೆ ಅವರು ಕೂಡ ಶುಭ ಕೋರಿದರು. ಈ ಚಿತ್ರಕ್ಕೆ ಕೆ.ಪಿ. ಶ್ರೀಕಾಂತ್​ ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ:

ಶಿವಣ್ಣನಿಗೆ ಅಪ್ಪು ನಿರ್ದೇಶನ, ಉಪ್ಪಿ ಅಸಿಸ್ಟೆಂಟ್​​ ಡೈರೆಕ್ಟರ್​, ಸಂತೋಷ್​ ಆನಂದ್​ರಾಮ್​ ಡೈಲಾಗ್​ ರೈಟರ್

ಸ್ಟಾರ್​ ನಟರ ಮುಖಾಮುಖಿ; ಈಗ ಚಿತ್ರರಂಗದಲ್ಲಿ ಹೊಂದಾಣಿಕೆ ಮುಖ್ಯ ಎಂದ ಶಿವರಾಜ್​ಕುಮಾರ್​

Click on your DTH Provider to Add TV9 Kannada