ಸ್ಟಾರ್​ ನಟರ ಮುಖಾಮುಖಿ; ಈಗ ಚಿತ್ರರಂಗದಲ್ಲಿ ಹೊಂದಾಣಿಕೆ ಮುಖ್ಯ ಎಂದ ಶಿವರಾಜ್​ಕುಮಾರ್​

ಇದನ್ನು ಸ್ಟಾರ್ಸ್​ ವಾರ್ಸ್​ ಎಂದು ಕರೆಯಬೇಡಿ ಎಂದು ಚಿತ್ರತಂಡದವರೇ ಮನವಿ ಮಾಡಿದ್ದಾರೆ. ಆದಾಗ್ಯೂ ಇದನ್ನು ಸ್ಟಾರ್​ ವಾರ್​ ಎಂದೇ ಬಿಂಬಿಸಲಾಗುತ್ತಿದೆ. ಈ ವಿಚಾರದ ಬಗ್ಗೆ ಸೆಂಚ್ಯುರಿ ಸ್ಟಾರ್​ ಶಿವರಾಜ್​ಕುಮಾರ್​ ಪ್ರತಿಕ್ರಿಯೆ ನೀಡಿದ್ದಾರೆ.

ಸ್ಟಾರ್​ ನಟರ ಮುಖಾಮುಖಿ; ಈಗ ಚಿತ್ರರಂಗದಲ್ಲಿ ಹೊಂದಾಣಿಕೆ ಮುಖ್ಯ ಎಂದ ಶಿವರಾಜ್​ಕುಮಾರ್​

ಕೋಟ್ಯಂತರ ರೂಪಾಯಿ ಸುರಿದು ನಿರ್ಮಾಪಕರು ಸಿನಿಮಾ ಮಾಡಿರುತ್ತಾರೆ. ಆದರೆ, ಎರಡು ಸ್ಟಾರ್​ ಸಿನಿಮಾಗಳು ಒಂದೇ ದಿನ ತೆರೆಗೆ ಬಂದರೆ, ಇದರಿಂದ ನಷ್ಟವಾಗುವುದು ನಿರ್ಮಾಪಕರಿಗೆ. ಈಗ ಸ್ಯಾಂಡಲ್​ವುಡ್​ನಲ್ಲಿ ಸುದೀಪ್​ ನಟನೆಯ ‘ಕೋಟಿಗೊಬ್ಬ 3’ ಹಾಗೂ ದುನಿಯಾ ವಿಜಯ್​ ನಟನೆಯ ‘ಸಲಗ’ ಒಂದೇ ದಿನ ತೆರೆಗೆ ಬರುತ್ತಿದೆ. ಯಾವ ಸಿನಿಮಾ ನೋಡಬೇಕು ಎನ್ನುವ ಗೊಂದಲ ಪ್ರೇಕ್ಷಕರಿಗೂ ಉಂಟಾಗುತ್ತದೆ. ಇದನ್ನು ಸ್ಟಾರ್ಸ್​ ವಾರ್ಸ್​ ಎಂದು ಕರೆಯಬೇಡಿ ಎಂದು ಚಿತ್ರತಂಡದವರೇ ಮನವಿ ಮಾಡಿದ್ದಾರೆ. ಆದಾಗ್ಯೂ ಇದನ್ನು ಸ್ಟಾರ್​ ವಾರ್​ ಎಂದೇ ಬಿಂಬಿಸಲಾಗುತ್ತಿದೆ. ಈ ವಿಚಾರದ ಬಗ್ಗೆ ಸೆಂಚ್ಯುರಿ ಸ್ಟಾರ್​ ಶಿವರಾಜ್​ಕುಮಾರ್​ ಪ್ರತಿಕ್ರಿಯೆ ನೀಡಿದ್ದಾರೆ.

‘ಚಿತ್ರಮಂದಿರಗಳಲ್ಲಿ ಹೌಸ್​ಫುಲ್​ಗೆ ಅವಕಾಶ ನೀಡಿದ್ದಕ್ಕೆ ಸರ್ಕಾರಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಕೊರೊನಾ ಬಳಿಕ ಸಾಕಷ್ಟು ಬದಲಾವಣೆ ಆಗಿದೆ. ನಮ್ಮ ಸಿನಿಮಾದ ರಿಲೀಸ್​ ಡೇಟ್​ ಎರಡು ಬಾರಿ ಮುಂದೂಡಲ್ಪಟ್ಟಿದೆ. ಈಗ ನಾವು ಅಕ್ಟೋಬರ್​ 29ರಂದು ತೆರೆಗೆ ಬರುತ್ತಿದ್ದೇವೆ’ ಎಂದರು ಶಿವರಾಜ್​ಕುಮಾರ್​.

ಇನ್ನು, ಎರಡು ದೊಡ್ಡ ನಟರ ಸಿನಿಮಾ ಒಟ್ಟಿಗೆ ತೆರೆಗೆ ಬರುತ್ತಿರುವ ಬಗ್ಗೆ ಅವರು ಮಾತನಾಡಿದ್ದಾರೆ. ‘ಯಾವುದೇ ಸಿನಿಮಾ ರಿಲೀಸ್ ಆಗಬೇಕೆಂದರೂ ಹೊಂದಾಣಿಕೆ ಇರಬೇಕು. ಸಲಗ ಮತ್ತು ‘ಕೋಟಿಗೊಬ್ಬ 3’ ಎರಡೂ ಚಿತ್ರಕ್ಕೂ ಒಳ್ಳೆಯದಾಗಬೇಕು. ಒಂದೇ ದಿನ ಬಂದರೆ ತೊಂದರೆಯೇ. ನಿರ್ಮಾಪಕರು ಮಾತಾಡಿಕೊಂಡು, ಬಗೆಹರಿಸಿಕೊಳ್ಳಬೇಕು’ ಎಂದರು ಶಿವರಾಜ್​ಕುಮಾರ್​.

‘ಬಹುಶಃ ಎರಡೂ ಸಿನಿಮಾ ಒಂದೇ ದಿನ ತೆರೆಗೆ ಬರಲಿದೆ. ನನ್ನ ಪ್ರಕಾರ ಒಂದು ಸಿನಿಮಾ ಮಾತ್ರ ತೆರೆಗೆ ಬಂದರೆ ಒಳ್ಳೆಯದು. ಸಾಕಷ್ಟು ಸಿನಿಮಾಗಳು ರಿಲೀಸ್​​ಗೆ ರೆಡಿ ಇವೆ. ಯಾರೇ ಬರುವುದಾದರೂ ಮಾತನಾಡಿಕೊಂಡು ಬರಲಿ. ಈಗ ಚಿತ್ರರಂಗದಲ್ಲಿ ಹೊಂದಾಣಿ ಮುಖ್ಯ’ ಎಂದಿದ್ದಾರೆ ಶಿವಣ್ಣ.

ಇದನ್ನೂ ಓದಿ: ದುಬೈನಲ್ಲಿ ಕಿಚ್ಚ; ಬುರ್ಜ್​ ಖಲೀಫಾ ಫೋಟೋ ಹಾಕಿ ‘ವಿಕ್ರಾಂತ್​ ರೋಣ’ ಟೈಟಲ್​ ಲಾಂಚ್​ ನೆನಪಿಸಿಕೊಂಡ ಸುದೀಪ್​

‘ಬರಲಿ ನೋಡೋಣ, ಇನ್ನೇನು ಮಾಡೋಕೆ ಆಗಲ್ಲ’; ಸ್ಟಾರ್ ಮುಖಾಮುಖಿಗೆ ‘ಕೋಟಿಗೊಬ್ಬ 3’ ಪ್ರೊಡ್ಯೂಸರ್​ ರೆಡಿ

Read Full Article

Click on your DTH Provider to Add TV9 Kannada