AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಬೈನಲ್ಲಿ ಕಿಚ್ಚ; ಬುರ್ಜ್​ ಖಲೀಫಾ ಫೋಟೋ ಹಾಕಿ ‘ವಿಕ್ರಾಂತ್​ ರೋಣ’ ಟೈಟಲ್​ ಲಾಂಚ್​ ನೆನಪಿಸಿಕೊಂಡ ಸುದೀಪ್​

ಭಾರತದಲ್ಲಿ ನಡೆಯುತ್ತಿದ್ದ ಐಪಿಎಲ್​ 14ನೇ ಸೀಸನ್​ ಕೊವಿಡ್​ ಕಾರಣದಿಂದ ನಿಂತಿತ್ತು. ಹೀಗಾಗಿ, ಅರ್ಧಕ್ಕೆ ನಿಂತ ಐಪಿಎಲ್​ ಮ್ಯಾಚ್​ ದುಬೈನಲ್ಲಿ ಮುಂದುವರಿಯುತ್ತಿದೆ. ಐಪಿಎಲ್​ ಮ್ಯಾಚ್​ ನೋಡೋಕೆ ಸುದೀಪ್​ ಕೂಡ ದುಬೈಗೆ ತೆರಳಿದ್ದಾರೆ.

ದುಬೈನಲ್ಲಿ ಕಿಚ್ಚ; ಬುರ್ಜ್​ ಖಲೀಫಾ ಫೋಟೋ ಹಾಕಿ ‘ವಿಕ್ರಾಂತ್​ ರೋಣ’ ಟೈಟಲ್​ ಲಾಂಚ್​ ನೆನಪಿಸಿಕೊಂಡ ಸುದೀಪ್​
ದುಬೈನಲ್ಲಿ ಕಿಚ್ಚ; ಬುರ್ಜ್​ ಖಲೀಫಾ ಫೋಟೋ ಹಾಕಿ ‘ವಿಕ್ರಾಂತ್​ ರೋಣ’ ಟೈಟಲ್​ ಲಾಂಚ್​ ನೆನಪಿಸಿಕೊಂಡ ಸುದೀಪ್​
TV9 Web
| Edited By: |

Updated on:Sep 18, 2021 | 4:48 PM

Share

‘ವಿಕ್ರಾಂತ್​ ರೋಣ’ ಸಿನಿಮಾ ಟೈಟಲ್​ ಲಾಂಚ್​ ದುಬೈನ ಬುರ್ಜ್​ ಖಲೀಫಾ ಕಟ್ಟಡದ ಮೇಲೆ ನಡೆದಿತ್ತು. ವಿಶ್ವದ ಅತಿ ಎತ್ತರದ ಕಟ್ಟಡದ ಮೇಲೆ ಸುದೀಪ್ ಸಿನಿಮಾ​ ಟೈಟಲ್​ ಲಾಂಚ್​ ಆಗಿದ್ದಲ್ಲದೆ, ಕರ್ನಾಟಕದ ಬಾವುಟ ರಾರಾಜಿಸಿತ್ತು. ಇದಾಗಿ ಹಲವು ತಿಂಗಳುಗಳು ಕಳೆದಿವೆ. ಈಗ ಸುದೀಪ್​ ಮತ್ತೆ ದುಬೈಗೆ ತೆರಳಿದ್ದಾರೆ. ಬುರ್ಜ್​ ಖಲೀಫಾ ಕಟ್ಟಡದ ಫೋಟೋ ಹಾಕಿಕೊಂಡು, ‘ವಿಕ್ರಾಂತ್​ ರೋಣ’ ಸಿನಿಮಾ ಟೈಟಲ್​ ಲಾಂಚ್​ ಕಾರ್ಯಕ್ರಮವನ್ನು ನೆನಪಿಸಿಕೊಂಡಿದ್ದಾರೆ.

ಭಾರತದಲ್ಲಿ ನಡೆಯುತ್ತಿದ್ದ ಐಪಿಎಲ್​ 14ನೇ ಸೀಸನ್​ ಕೊವಿಡ್​ ಕಾರಣದಿಂದ ನಿಂತಿತ್ತು. ಹೀಗಾಗಿ, ಅರ್ಧಕ್ಕೆ ನಿಂತ ಐಪಿಎಲ್​ ಮ್ಯಾಚ್​ ದುಬೈನಲ್ಲಿ ಮುಂದುವರಿಯುತ್ತಿದೆ. ಐಪಿಎಲ್​ ಮ್ಯಾಚ್​ ನೋಡೋಕೆ ಸುದೀಪ್​ ಕೂಡ ದುಬೈಗೆ ತೆರಳಿದ್ದಾರೆ. ಈ ವೇಳೆ ಅವರು ಈ ಎತ್ತರದ ಕಟ್ಟಡದ ಫೋಟೋ ಪೋಸ್ಟ್​ ಮಾಡಿದ್ದಾರೆ.

‘#VikrantRonaOnBurjKhalifa ಅನ್ನು ಅಳಿಸಲು ಮತ್ತು ಬದಲಿಸಲು ಸಾಧ್ಯವಿಲ್ಲ. ಐಪಿಎಲ್​ ಮ್ಯಾಚ್​ ನೋಡೋಕೆ ಎಗ್ಸೈಟ್​ ಆಗಿದ್ದೇನೆ’ ಎಂದು ಸುದೀಪ್​ ಬರೆದುಕೊಂಡಿದ್ದಾರೆ. ಸುದೀಪ್​ ಮೊದಲಿನಿಂದಲೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡದ ಅಭಿಮಾನಿ. ಬೆಂಗಳೂರಿನಲ್ಲಿ ಮ್ಯಾಚ್​ ಇದ್ದಾಗ ಸಾಕಷ್ಟು ಬಾರಿ ಸ್ಟೇಡಿಯಮ್​ಗೆ ಬಂದು ಅವರು ಪಂದ್ಯ ವೀಕ್ಷಣೆ ಮಾಡಿದ್ದರು. ಆದರೆ, ಕಳೆದ ಬಾರಿ ಹಾಗೂ ಈ ಬಾರಿ ಕೊವಿಡ್​ ಕಾರಣದಿಂದ ಪಂದ್ಯ ವೀಕ್ಷಣೆಗೆ ಅವಕಾಶ ಇರಲಿಲ್ಲ. ಆದರೆ, ಕೊವಿಡ್​ ಲಸಿಕೆ ಪಡೆದವರಿಗೆ ಐಪಿಎಲ್​​ ವೀಕ್ಷಿಸೋಕೆ ದುಬೈನಲ್ಲಿ ಅವಕಾಶ ನೀಡಲಾಗಿದೆ. ಹೀಗಾಗಿ, ಸುದೀಪ್​ ಕೂಡ ಅಲ್ಲಿಗೆ ತೆರಳಿದ್ದಾರೆ.

ಸೆಪ್ಟೆಂಬರ್​ 19ರಿಂದ ಅಂದರೆ ಭಾನುವಾರದಿಂದ ಐಪಿಎಲ್​ ಮ್ಯಾಚ್​ ಪುನರಾರಂಭಗೊಳ್ಳಲಿದೆ. ಸೋಮವಾರ (ಸೆಪ್ಟೆಂಬರ್​ 20) ಆರ್​ಸಿಬಿ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್​ ನಡುವೆ ಪಂದ್ಯ ನಡೆಯಲಿದೆ. ಈ ಮ್ಯಾಚ್​​ಅನ್ನು ಸುದೀಪ್​ ವೀಕ್ಷಿಸಲಿದ್ದಾರೆ. ಈ ಮ್ಯಾಚ್​ ನೋಡೋಕೆ ಕೋಲ್ಕತ್ತಾ ತಂಡದ ಮಾಲೀಕ, ಬಾಲಿವುಡ್​ ನಟ ಶಾರುಖ್​ ಕೂಡ ಬರುವ ಸಾಧ್ಯತೆ ಇದೆ. ಹೀಗಾಗಿ, ಸುದೀಪ್​ ಮತ್ತು ಶಾರುಖ್​ ಮುಖಾಮುಖಿ ಆದರೂ ಅಚ್ಚರಿ ಇಲ್ಲ.

ಸುದೀಪ್​ ನಟನೆಯ ‘ಕೋಟಿಗೊಬ್ಬ 3’ ಹಾಗೂ ‘ವಿಕ್ರಾಂತ್​ ರೋಣ’ ಸಿನಿಮಾ ಕೆಲಸಗಳು ಪೂರ್ಣಗೊಂಡಿವೆ. ಕೊವಿಡ್​ ಕಡಿಮೆ ಆಗಿ, ಚಿತ್ರಮಂದಿರದಲ್ಲಿ ಸಂಪೂರ್ಣ ಭರ್ತಿಗೆ ಅವಕಾಶ ನೀಡಿದ ನಂತರದಲ್ಲಿ ಈ ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ.

ಇದನ್ನೂ ಓದಿ: ಕೊರೊನಾಗೆ ಸೆಡ್ಡು ಹೊಡೆದು ಹಳೇ ಚಾರ್ಮ್​ ಪಡೆದ ಸುದೀಪ್​; ಫೋಟೋ ನೋಡಿ ವಾವ್​ ಎಂದ ಫ್ಯಾನ್ಸ್​

ಸರ್ಕಾರಿ ಶಾಲೆಗೆ ಸುಣ್ಣ-ಬಣ್ಣ ಬಳಿದು, ಮಕ್ಕಳಿಗೆ ಕಲಿಕಾ ಸಾಮಾಗ್ರಿ ವಿತರಿಸಿದ ಆಲ್ ಇಂಡಿಯಾ ಬಾದ್ ಷಾ ಕಿಚ್ಚ ಸುದೀಪ್ ಫ್ಯಾನ್ಸ್ ಅಸೋಸಿಯೇಷನ್

Published On - 4:42 pm, Sat, 18 September 21

ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ