ವೇದಿಕೆ ಮೇಲೆಯೇ ಸ್ಪರ್ಧಿಗೆ ಕಿಸ್ ಮಾಡಿ, ಕೆನ್ನೆ ಕಚ್ಚಿದ ಕನ್ನಡದ ‘ಜೋಶ್​’ ಸಿನಿಮಾ ನಟಿ; ವಿಡಿಯೋ ವೈರಲ್

ಶಮ್ನಾ ಕಾಸಿಂ​ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. 16-17 ವರ್ಷ ಅವರು ಚಿತ್ರರಂಗದಲ್ಲಿ ಶ್ರಮಿಸಿದ್ದಾರೆ. ಈಗ ಅವರು ಈಟಿವಿ ತೆಲುಗಿನಲ್ಲಿ ಪ್ರಸಾರವಾಗುವ ‘ಧೀ ಚಾಂಪಿಯನ್ಸ್​’ ಶೋನಲ್ಲಿ ಜಡ್ಜ್​​ ಆಗಿದ್ದಾರೆ.

ವೇದಿಕೆ ಮೇಲೆಯೇ ಸ್ಪರ್ಧಿಗೆ ಕಿಸ್ ಮಾಡಿ, ಕೆನ್ನೆ ಕಚ್ಚಿದ ಕನ್ನಡದ ‘ಜೋಶ್​’ ಸಿನಿಮಾ ನಟಿ; ವಿಡಿಯೋ ವೈರಲ್
ವೇದಿಕೆ ಮೇಲೆಯೇ ಸ್ಪರ್ಧಿಗೆ ಕಿಸ್ ಮಾಡಿ, ಕೆನ್ನೆ ಕಚ್ಚಿದ ಕನ್ನಡದ ‘ಜೋಶ್​’ ಸಿನಿಮಾ ನಟಿ; ವಿಡಿಯೋ ವೈರಲ್

ಇತ್ತೀಚೆಗೆ ರಿಯಾಲಿಟಿ ಶೋಗಳ ಸಂಖ್ಯೆ ಹೆಚ್ಚಾಗಿದೆ. ವೀಕ್ಷಕರನ್ನು ಸೆಳೆಯೋಕೆ ಈ ಶೋಗಳು ನಾನಾ ರೀತಿಯ ಕಸರತ್ತು ನಡೆಸುತ್ತಿವೆ. ಶೋನಲ್ಲಿ ಅದ್ಭುತವಾಗಿ ಪರ್ಫಾರ್ಮೆನ್ಸ್​ ನೀಡಿದರೆ ಜಡ್ಜ್​ಗಳಿಂದ ಸ್ಪರ್ಧಿಗಳಿಗೆ ಚಪ್ಪಾಳೆ ಅಥವಾ ಹಗ್​ ಸಿಗುತ್ತದೆ. ಆದರೆ, ಕನ್ನಡದ ಸಿನಿಮಾಗಳಲ್ಲಿ ನಟಿಸಿದ ಹೀರೋಯಿನ್​ ಒಬ್ಬರು ಸ್ಪರ್ಧಿಗೆ ವೇದಿಕೆ ಮೇಲೆಯೇ ಕಿಸ್​ ಮಾಡಿ ಕೆನ್ನೆ ಕಚ್ಚಿದ್ದಾರೆ. ಸದ್ಯ, ಈ ವಿಡಿಯೋ ವೈರಲ್​ ಆಗಿದೆ.

ಶಮ್ನಾ ಕಾಸಿಂ​ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. 16-17 ವರ್ಷ ಅವರು ಚಿತ್ರರಂಗದಲ್ಲಿ ಶ್ರಮಿಸಿದ್ದಾರೆ. ಈಗ ಅವರು ಈಟಿವಿ ತೆಲುಗಿನಲ್ಲಿ ಪ್ರಸಾರವಾಗುವ ‘ಧೀ ಚಾಂಪಿಯನ್ಸ್​’ ಶೋನಲ್ಲಿ ಜಡ್ಜ್​​ ಆಗಿದ್ದಾರೆ. ಈ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡು ಅದ್ಭುತವಾಗಿ ಪರ್ಫಾರ್ಮೆನ್ಸ್​ ನೀಡಿದ ಸ್ಪರ್ಧಿಗೆ ಶಮ್ನಾ ಕೆನ್ನೆಗೆ ಮುತ್ತಿಟ್ಟಿದ್ದಾರೆ. ಜತೆಗೆ ಕೆನ್ನೆಯನ್ನು ಕಚ್ಚಿದ್ದಾರೆ. ಸದ್ಯ, ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ವೈರಲ್​ ಆಗುತ್ತಿದೆ.

ಈ ವಿಡಿಯೋ ಹೈಪ್​ ಪಡೆದುಕೊಂಡಿದೆ ಎಂಬುದು ನಿಜ. ಆದರೆ, ಅನೇಕರು ಇದನ್ನು ಟೀಕಿಸಿದ್ದಾರೆ. ಓರ್ವ ಜಡ್ಜ್​ ಆಗಿ ಈ ರೀತಿ ನಡೆದುಕೊಳ್ಳಬಹುದೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ಇದೆಲ್ಲ ಟಿಆರ್​ಪಿ ಗಿಮಿಕ್​ ಎಂದು ಕಮೆಂಟ್​ ಮಾಡುತ್ತಿದ್ದಾರೆ. ಆದರೆ, ಇದಕ್ಕೆ ನಟಿ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಅಂದಹಾಗೆ, ಈ ಮೊದಲು ಕೂಡ ಅವರು ಸಾಕಷ್ಟು ಬಾರಿ ಸ್ಪರ್ಧಿಗಳಿಗೆ ಇದೇ ರೀತಿ ಕಿಸ್​ ಮಾಡಿದ ಉದಾಹರಣೆ ಇದೆ. ಈ ಫೋಟೋಗಳನ್ನು ಕೂಡ ಈಗ ಹಂಚಿಕೊಳ್ಳಲಾಗುತ್ತಿದೆ.

Shamna Kasim

ವೇದಿಕೆ ಮೇಲೆಯೇ ಸ್ಪರ್ಧಿಗೆ ಕಿಸ್ ಮಾಡಿ, ಕೆನ್ನೆ ಕಚ್ಚಿದ ಕನ್ನಡದ ‘ಜೋಶ್​’ ಸಿನಿಮಾ ನಟಿ; ವಿಡಿಯೋ ವೈರಲ್

ಶಮ್ನಾ 2004ರಲ್ಲಿ ಚಿತ್ರರಂಗಕ್ಕೆ ಬಂದರು. ಆರಂಭದಲ್ಲಿ ಸಾಕಷ್ಟು ಮಲಯಾಳಂ ಸಿನಿಮಾದಲ್ಲಿ ನಟಿಸಿದರು. ನಂತರ ತೆಲುಗು, ತಮಿಳು ಚಿತ್ರರಂಗದಿಂದ ಅವರಿಗೆ ಆಫರ್​ಗಳು ಬರೋಕೆ ಆರಂಭವಾದವು. ‘ಜೋಶ್​’ ಸಿನಿಮಾ ಮೂಲಕ ಕನ್ನಡಕ್ಕೆ ಕಾಲಿಟ್ಟರು. ಕನ್ನಡದ ‘ರಾಧನ ಗಂಡ’ ಹೆಸರಿನ ಸಿನಿಮಾದಲ್ಲೂ ಅವರು ನಟಿಸಿದ್ದಾರೆ. ಅವರ ಕೈಯಲ್ಲಿ ಕನ್ನಡದ ಒಂದು ಸಿನಿಮಾ ಸೇರಿ 6-7 ಪ್ರಾಜೆಕ್ಟ್​ಗಳಿವೆ. ಕೊವಿಡ್​ ಕಾರಣದಿಂದ ಚಿತ್ರದ ಕೆಲಸಗಳು ವಿಳಂಬವಾಗಿದೆ.

ಇದನ್ನೂ ಓದಿ: ದೇವಸ್ಥಾನದಲ್ಲೂ ಡಿವೋರ್ಸ್​ ವಿಚಾರ; ಸಿಟ್ಟಾದ ಸಮಂತಾ ರಿಯಾಕ್ಷನ್​ ನೋಡಿ ಚಪ್ಪಾಳೆ ಹೊಡೆದ ಅಭಿಮಾನಿಗಳು

ಆನ್​ಲೈನ್​ನಲ್ಲೇ ಎಂಗೇಜ್​ಮೆಂಟ್​ ಮಾಡಿಕೊಂಡ ಕನ್ನಡ ಬಿಗ್​ ಬಾಸ್​ ಸೀಸನ್​ 8ರ ಸ್ಪರ್ಧಿ

Click on your DTH Provider to Add TV9 Kannada