ಆನ್​ಲೈನ್​ನಲ್ಲೇ ಎಂಗೇಜ್​ಮೆಂಟ್​ ಮಾಡಿಕೊಂಡ ಕನ್ನಡ ಬಿಗ್​ ಬಾಸ್​ ಸೀಸನ್​ 8ರ ಸ್ಪರ್ಧಿ

ಈ ಬಾರಿಯ ಬಿಗ್​ ಬಾಸ್​ ಮನೆಗೆ ಮೂವರು ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಪಡೆದಿದ್ದರು. ಪ್ರಿಯಾಂಕಾ ತಿಮ್ಮೇಶ್​ ಹಾಗೂ ವೈಜಯಂತಿ ಅಡಿಗ ಒಂದೇ ದಿನ ಮನೆಗೆ ಎಂಟ್ರಿ ಪಡೆದಿದ್ದರು.

ಆನ್​ಲೈನ್​ನಲ್ಲೇ ಎಂಗೇಜ್​ಮೆಂಟ್​ ಮಾಡಿಕೊಂಡ ಕನ್ನಡ ಬಿಗ್​ ಬಾಸ್​ ಸೀಸನ್​ 8ರ ಸ್ಪರ್ಧಿ
ಆನ್​ಲೈನ್​ನಲ್ಲೇ ಎಂಗೇಜ್​ಮೆಂಟ್​ ಮಾಡಿಕೊಂಡ ಕನ್ನಡ ಬಿಗ್​ ಬಾಸ್​ ಸೀಸನ್​ 8ರ ಸ್ಪರ್ಧಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 18, 2021 | 3:24 PM

‘ಕನ್ನಡ ಬಿಗ್​ ಬಾಸ್​ ಸೀಸನ್​ 8’ ಪೂರ್ಣಗೊಂಡು ಹಲವು ದಿನಗಳು ಕಳೆದಿವೆ. ಆದರೂ ಒಂದಲ್ಲಾ ಒಂದು ವಿಚಾರಕ್ಕೆ ಈ ಸ್ಪರ್ಧಿಗಳು ಸುದ್ದಿಯಲ್ಲಿದ್ದಾರೆ. ಈಗ ಬಿಗ್​ ಬಾಸ್​ 8ರ ಸ್ಪರ್ಧಿ ಆನ್​ಲೈನ್​ನಲ್ಲೇ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ. ಸದ್ಯ, ಈ ಫೋಟೋಗಳು ಸಾಕಷ್ಟು ವೈರಲ್​ ಆಗುತ್ತಿದೆ. ಅಷ್ಟಕ್ಕೂ ಈ ರೀತಿ ನಿಶ್ಚಿತಾರ್ಥ ಮಾಡಿಕೊಂಡವರು ಯಾರು? ವೈಜಯಂತಿ ಅಡಿಗ.

ಈ ಬಾರಿಯ ಬಿಗ್​ ಬಾಸ್​ ಮನೆಗೆ ಮೂವರು ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಪಡೆದಿದ್ದರು. ಪ್ರಿಯಾಂಕಾ ತಿಮ್ಮೇಶ್​ ಹಾಗೂ ವೈಜಯಂತಿ ಅಡಿಗ ಒಂದೇ ದಿನ ಮನೆಗೆ ಎಂಟ್ರಿ ಪಡೆದಿದ್ದರು. ಆದರೆ, ವೈಜಯಂತಿಗೆ ಬಿಗ್​ ಬಾಸ್​ ಮನೆಯಲ್ಲಿ ಹೆಚ್ಚು ದಿನ ಇರೋಕೆ ಸಾಧ್ಯವಾಗಿಲ್ಲ. ಪದೇಪದೇ ಕ್ಯಾಮೆರಾ ಬಳಿ ತೆರಳಿ ನನಗೆ ಇಲ್ಲಿ ಇರೋಕೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದರು. ಕೊನೆಗೆ, ವೀಕೆಂಡ್​ನಲ್ಲಿ ಬಿಗ್​ ಬಾಸ್​ ಮನೆಯಿಂದ ಹೊರ ಹೋಗೋಕೆ ವೈಜಯಂತಿಗೆ ಸುದೀಪ್​ ಆಫರ್​ ನೀಡಿದರು. ಈ ಆಫರ್​ಅನ್ನು ಸ್ವೀಕರಿಸಿದರು ವೈಜಯಂತಿ ಅಡಿಗ. ಈ ಮೂಲಕ ಬೆರಳೆಣಿಕೆ ದಿನಗಳಲ್ಲಿ ಅವರು ಮನೆಯಿಂದ ಹೊರ ಬಂದರು.

ಬಿಗ್​ ಬಾಸ್​ ಫಿನಾಲೆ ದಿನ ಎಲ್ಲಾ ಸ್ಪರ್ಧಿಗಳು ವೇದಿಕೆಗೆ ಬಂದಿದ್ದರು. ಆದರೆ, ವೈಜಯಂತಿ ಅಡಿಗ ಬಂದಿರಲಿಲ್ಲ. ಇನ್​ಸ್ಟಾಗ್ರಾಮ್​ನಲ್ಲಿ ಆಸ್ಕ್​ ಮಿ ಎನಿಥಿಂಗ್​ ಸೆಷನ್​ ನಡೆಸಿದಾಗಲೂ ವೈಜಯಂತಿ ಬಿಗ್​ ಬಾಸ್​ ಬಗ್ಗೆ ಮಾತನಾಡೋಕೆ ನೋ ಎಂದಿದ್ದರು. ಈಗ ಅವರು ತಮ್ಮ ಪ್ರಿಯಕರ ಸೂರಜ್​ ಜತೆ ಆನ್​ಲೈನ್​ನಲ್ಲಿ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ.

ಈ ಫೋಟೋಗಳನ್ನು ವೈಜಯಂತಿ ಅಡಿಗ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವೈಜಯಂತಿ ಕುಟುಂಬ ಕೂಡ ಈ ಎಂಗೇಜ್​ಮೆಂಟ್​ನಲ್ಲಿ ಭಾಗಿಯಾಗಿತ್ತು. ಅವರ ಮದುವೆ ಆಗುವ ಹುಡುಗ ಅಮೆರಿಕದಲ್ಲಿ ವಾಸವಾಗಿದ್ದಾರೆ ಎನ್ನಲಾಗಿದೆ. ವೈಜಯಂತಿ ಅಡಿಗ ಖ್ಯಾತ ಹೋಟೆಲ್ ಉದ್ಯಮಿ ವಾಸುದೇವ ಅಡಿಗ ಅವರ ಮಗಳು. ‘ಅಮ್ಮಚ್ಚಿ ಎಂಬ ನೆನಪು’ ಸಿನಿಮಾದಲ್ಲಿ ಇವರು ನಟಿಸಿದ್ದರು.

ಇದನ್ನೂ ಓದಿ: ಪ್ಲೀಸ್​ ಬೇರೆಯವರ ಅವಕಾಶ ಕಿತ್ತುಕೊಳ್ಳಬೇಡಿ; ಎಲಿಮಿನೇಟ್​ ಆದ ವೈಜಯಂತಿಗೆ ಸುದೀಪ್​ ಕಿವಿಮಾತು

ವೈಜಯಂತಿಗೆ ಈ ಭಯ ತುಂಬಾನೇ ಕಾಡಿತ್ತಂತೆ; ಚಂದ್ರಚೂಡ್​ ಬಿಚ್ಚಿಟ್ರು ರಹಸ್ಯ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ