AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈಜಯಂತಿಗೆ ಈ ಭಯ ತುಂಬಾನೇ ಕಾಡಿತ್ತಂತೆ; ಚಂದ್ರಚೂಡ್​ ಬಿಚ್ಚಿಟ್ರು ರಹಸ್ಯ

ಬಿಗ್​ ಬಾಸ್​ ಮನೆಯಲ್ಲಿದ್ದಷ್ಟು ದಿನ ವೈಜಯಂತಿ ಅವರು ಚಕ್ರವರ್ತಿ ಚಂದ್ರಚೂಡ್​ ಆಪ್ತರಾಗಿದ್ದರು. ಈಗ ವೈಜಯಂತಿ ಹೊರ ಹೋಗೋಕೆ ನಿಜವಾದ ಕಾರಣ ಬಿಚ್ಚಿಟ್ಟಿದ್ದಾರೆ.

ವೈಜಯಂತಿಗೆ ಈ ಭಯ ತುಂಬಾನೇ ಕಾಡಿತ್ತಂತೆ; ಚಂದ್ರಚೂಡ್​ ಬಿಚ್ಚಿಟ್ರು ರಹಸ್ಯ
ವೈಜಯಂತಿ ಅಡಿಗ
ರಾಜೇಶ್ ದುಗ್ಗುಮನೆ
|

Updated on: Apr 12, 2021 | 10:02 PM

Share

ಬಿಗ್​ ಬಾಸ್​ ಮನೆ ಪ್ರವೇಶಿಸಿದ್ದ ಕೆಲವೇ ದಿನಕ್ಕೆ ವೈಜಯಂತಿ ಅಡಿಗ ಹೊರ ನಡೆದಿದ್ದಾರೆ. ಈ ವಿಚಾರ ಮನೆಯವರಿಗೆ ತುಂಬಾನೇ ಶಾಕ್​ ನೀಡಿದೆ. ಬಿಗ್​ ಬಾಸ್​ ಮನೆಯಲ್ಲಿದ್ದಷ್ಟು ದಿನ ವೈಜಯಂತಿ ಅವರು ಚಕ್ರವರ್ತಿ ಚಂದ್ರಚೂಡ್​ ಆಪ್ತರಾಗಿದ್ದರು. ಅವರ ಬಳಿ ಸಾಕಷ್ಟು ವಿಚಾರಗಳನ್ನು ಚಂದ್ರಚೂಡ್​​ ಹಂಚಿಕೊಂಡಿದ್ದರು. ಈಗ ವೈಜಯಂತಿ ಹೊರ ಹೋಗೋಕೆ ನಿಜವಾದ ಕಾರಣ ಬಿಚ್ಚಿಟ್ಟಿದ್ದಾರೆ. ಎಲಿಮಿನೇಷನ್​ಗೂ ಒಂದು ದಿನ ಮೊದಲು ಮಾತನಾಡಿದ್ದ ವೈಜಯಂತಿ, ನನಗೆ ಇಲ್ಲಿ ನಿಜವಾಗಲೂ ಕಷ್ಟ ಆಗ್ತಾ ಇದೆ. ಇಲ್ಲಿ ಇರೋಕೆ ಆಗ್ತಾ ಇಲ್ಲ ಎಂದು ಪುನಃ ಪುನಃ ಹೇಳಿದ್ದರು. ಭಾನುವಾರ ಶಮಂತ್​ ಎಲಿಮಿನೇಟ್​ ಆಗಿದ್ದರು. ಈ ವೇಳೆ ವೈಜಯಂತಿಗೆ ಸುದೀಪ್​ ಒಂದು ಆಯ್ಕೆ ನೀಡಿದ್ದರು. ಇಚ್ಛಿಸಿದರೆ ಶಮಂತ್ ಸೇವ್​ ಆಗುತ್ತಾರೆ ಮತ್ತು ವೈಜಯಂತಿ ಮನೆಯಿಂದ ಹೊರ ಹೋಗುತ್ತಾರೆ. ಈ ಅವಕಾಶವನ್ನು ವೈಜಯಂತಿ ಒಪ್ಪಿ ಮನೆಯಿಂದ ಹೊರ ನಡೆಯುತ್ತೇನೆ ಎಂದರು. ನಾನು ಮನೆಯಿಂದ ಹೊರ ಬರುತ್ತಿರುವುದಕ್ಕೆ ನನ್ನದೇ ಆದ ಕಾರಣವಿದೆ. ದಯವಿಟ್ಟು ಬೇರೆ ರೀತಿಯಲ್ಲಿ ತೆಗೆದುಕೊಳ್ಳಬೇಡಿ ಎಂದು ವೈಜಯಂತಿ ಹೇಳಿದ್ದರು.

ಅಷ್ಟಕ್ಕೂ ವೈಜಯಂತಿ ಹೊರ ಬರುತ್ತಿರುವುದಕ್ಕೆ ಚಕ್ರವರ್ತಿ ಚಂದ್ರಚೂಡ್​ ಕಾರಣ ಬಿಚ್ಚಿಟ್ಟಿದ್ದಾರೆ. ವೈಜಯಂತಿ ತಪ್ಪು ಮಾಡಿದಳು. ಅವಳು, ಉಳಿದುಕೊಳ್ಳಬಹುದಿತ್ತು. ಬಹುಶಃ ನಾನು ಜೈಲಿಗೆ ಹೋಗಿ ಇದ್ದಿದ್ದನ್ನು ನೋಡಿ ಭಯವಾಗಿರಬೇಕು. ಮುಂದಿನ ವಾರ ಎಲ್ಲರೂ ಸೇರಿ ನನ್ನನ್ನು ಜೈಲಿಗೆ ಹಾಕುತ್ತಾರೆ. ಇದನ್ನು ನೋಡಿ ಮನೆಯವರು ಏನಂದುಕೊಳ್ಳುತ್ತಾರೋ ಏನೋ ಎನ್ನುವ ಭಯ ಅವರನ್ನು ಕಾಡಿರಬಹುದು ಎಂದಿದ್ದಾರೆ. ಅರವಿಂದ್ ಇದನ್ನು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಪ್ಲೀಸ್​ ಬೇರೆಯವರ ಅವಕಾಶ ಕಿತ್ತುಕೊಳ್ಳಬೇಡಿ; ಎಲಿಮಿನೇಟ್​ ಆದ ವೈಜಯಂತಿಗೆ ಸುದೀಪ್​ ಕಿವಿಮಾತು

ಬಿಗ್​ ಬಾಸ್ ಹೆಸರು ದುರ್ಬಳಕೆ ಮಾಡಿಕೊಂಡ ಪ್ರಶಾಂತ್​ ಸಂಬರಗಿ; ಸುದೀಪ್ ಛೀಮಾರಿ