AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Major Teaser: ಜೀವ ಲೆಕ್ಕಿಸದೇ ಜನರ ರಕ್ಷಿಸಿದ: ಮುಂಬೈ ದಾಳಿಯಲ್ಲಿ ಸಂದೀಪ್ ಉನ್ನಿಕೃಷ್ಣನ್ ಮಾಡಿದ ತ್ಯಾಗ ನೆನಪಿಸುವ ‘ಮೇಜರ್’ ಟೀಸರ್

ಮುಂಬೈ ದಾಳಿ ವೇಳೆ ವೀರ ಮರಣ ಹೊಂದಿದ್ದ ಮೇಜರ್​​ ಸಂದೀಪ್​ ಉನ್ನಿಕೃಷ್ಣನ್ ಅವರ ಜೀವನಾಧಾರಿತ ಸಿನಿಮಾ ‘ಮೇಜರ್’ ಟೀಸರ್​ ರಿಲೀಸ್​ ಆಗಿದೆ. ಅವರು ಬಾಲ್ಯದಲ್ಲಿ ಕಂಡ ಕನಸನ್ನು ಹೇಗೆ ನನಸು ಮಾಡಿಕೊಂಡರು, ಮುಂಬೈ ದಾಳಿ ವೇಳೆ ಹೇಗೆ ಹೋರಾಡಿದರು ಎಂಬಿತ್ಯಾದಿ ವಿಚಾರಗಳನ್ನು ಟೀಸರ್​ನಲ್ಲಿ ಕಟ್ಟಿಕೊಡಲಾಗಿದೆ. ಸಂದೀಪ್​ ಉನ್ನಿಕೃಷ್ಣನ್​ ಜೀವನ ಆಧರಿಸಿ ಮೇಜರ್​ ಸಿನಿಮಾ ಮಾಡಲಾಗುತ್ತಿದೆ. ಹಿಂದಿ, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. ಈಗ ಚಿತ್ರದ ಟೀಸರ್​ ಅನ್ನು ಹಿಂದಿಯಲ್ಲಿ ಸಲ್ಮಾನ್​ ಖಾನ್, ತೆಲುಗಿನಲ್ಲಿ ಮಹೇಶ್​​ […]

Major Teaser: ಜೀವ ಲೆಕ್ಕಿಸದೇ ಜನರ ರಕ್ಷಿಸಿದ: ಮುಂಬೈ ದಾಳಿಯಲ್ಲಿ ಸಂದೀಪ್ ಉನ್ನಿಕೃಷ್ಣನ್ ಮಾಡಿದ ತ್ಯಾಗ ನೆನಪಿಸುವ ‘ಮೇಜರ್’ ಟೀಸರ್
ಮೇಜರ್​ ಸಂದೀಪ್​ ಪಾತ್ರದಲ್ಲಿ ಅದಿವಿ ಶೇಷ್
ರಾಜೇಶ್ ದುಗ್ಗುಮನೆ
|

Updated on: Apr 12, 2021 | 7:13 PM

Share

ಮುಂಬೈ ದಾಳಿ ವೇಳೆ ವೀರ ಮರಣ ಹೊಂದಿದ್ದ ಮೇಜರ್​​ ಸಂದೀಪ್​ ಉನ್ನಿಕೃಷ್ಣನ್ ಅವರ ಜೀವನಾಧಾರಿತ ಸಿನಿಮಾ ‘ಮೇಜರ್’ ಟೀಸರ್​ ರಿಲೀಸ್​ ಆಗಿದೆ. ಅವರು ಬಾಲ್ಯದಲ್ಲಿ ಕಂಡ ಕನಸನ್ನು ಹೇಗೆ ನನಸು ಮಾಡಿಕೊಂಡರು, ಮುಂಬೈ ದಾಳಿ ವೇಳೆ ಹೇಗೆ ಹೋರಾಡಿದರು ಎಂಬಿತ್ಯಾದಿ ವಿಚಾರಗಳನ್ನು ಟೀಸರ್​ನಲ್ಲಿ ಕಟ್ಟಿಕೊಡಲಾಗಿದೆ.

ಸಂದೀಪ್​ ಉನ್ನಿಕೃಷ್ಣನ್​ ಜೀವನ ಆಧರಿಸಿ ಮೇಜರ್​ ಸಿನಿಮಾ ಮಾಡಲಾಗುತ್ತಿದೆ. ಹಿಂದಿ, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. ಈಗ ಚಿತ್ರದ ಟೀಸರ್​ ಅನ್ನು ಹಿಂದಿಯಲ್ಲಿ ಸಲ್ಮಾನ್​ ಖಾನ್, ತೆಲುಗಿನಲ್ಲಿ ಮಹೇಶ್​​ ಬಾಬು ಹಾಗೂ ಮಲಯಾಳಂನಲ್ಲಿ ಪೃಥ್ವಿರಾಜ್​ ಟೀಸರ್​ ಲಾಂಚ್ ಮಾಡಿದ್ದಾರೆ.

ಸಂದೀಪ್​ ಅವರ ಬಾಲ್ಯ ಹೇಗಿತ್ತು, ಗಡಿಯಲ್ಲಿರುವಾಗ ಅವರ ಜೀವನ ಯಾವ ರೀತಿ ಇತ್ತು, ಅವರ ವೈವಾಹಿಕ ಜೀವನ, ಮುಂಬೈ ದಾಳಿಯನ್ನು ಅವರು ಅದನ್ನು ಹೇಗೆ ಎದುರಿಸಿದರು ಎನ್ನುವುದನ್ನು ಟೀಸರ್​ನಲ್ಲಿ ತೋರಿಸಲಾಗಿದೆ.

ಸಂದೀಪ್​ ಅವರ ಪಾತ್ರದಲ್ಲಿ ಅದಿವಿ ಶೇಷ್​​ ನಟಿಸುತ್ತಿದ್ದಾರೆ. ಇತ್ತೀಚೆಗೆ ಸಿನಿಮಾದ ಫಸ್ಟ್​ ಲುಕ್​ ಬಿಡುಗಡೆ ಆಗಿತ್ತು. ಇದನ್ನು ನೋಡಿ ಅಭಿಮಾನಿಗಳು ತುಂಬಾನೇ ಖುಷಿಯಾಗಿದ್ದರು. 2008ರಲ್ಲಿ ಮುಂಬೈ ದಾಳಿ ನಡೆದಿತ್ತು. ಈ ದಾಳೆ ವೇಳೆ ಮೇಜರ್​ ಸಂದೀಪ್​ ಹುತಾತ್ಮರಾಗಿದ್ದರು. ಹಿಂದಿ, ತೆಲುಗು ಹಾಗೂ ಮಲಯಾಳಂನಲ್ಲಿ ಸಿನಿಮಾ ರಿಲೀಸ್​ ಆಗುತ್ತಿದೆ. ಶಶಿ ಕಿರಣ್​ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಇತ್ತೀಚೆಗೆ ಪ್ಯಾನ್​ ಇಂಡಿಯಾ ಸಿನಿಮಾಗಳು ಸಾಕಷ್ಟು ತೆರೆಗೆ ಬರುತ್ತಿವೆ. ಬೇರೆ ಬೇರೆ ಭಾಷೆಯ ಪ್ರೇಕ್ಷಕರನ್ನು ಸೆಳೆಯಲು ಪ್ಯಾನ್​ ಇಂಡಿಯಾ ಸಿನಿಮಾ ಸಹಕಾರಿ. ಸಂದೀಪ್​ ಖ್ಯಾತಿ ಇಡೀ ದೇಶಾದ್ಯಂತ ಹಬ್ಬಿದೆ. ಹೀಗಾಗಿ, ಮೂರು ಭಾಷೆಗಳಲ್ಲಿ ಸಿನಿಮಾ ರಿಲೀಸ್​ ಮಾಡುವ ಮೂಲಕ ಹೆಚ್ಚು ಪ್ರೇಕ್ಷಕರನ್ನು ತಲುಪುವ ಆಲೋಚನೆ ನಿರ್ದೇಶಕರದ್ದು.

ಇದನ್ನೂ ಓದಿ: ಅಭಿಮಾನಿಗಳಿಗೆ ಗುಡ್​ ನ್ಯೂಸ್​; ಸಿನಿಮಾಕ್ಕಾಗಿ ಒಂದಾದ ಸಲ್ಮಾನ್​ ಖಾನ್​, ಮಹೇಶ್​ ಬಾಬು, ಪೃಥ್ವಿರಾಜ್!

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More