ಸಾವಿನ ಮನೆಗೆ ಸಾಮಾನ್ಯರು ಓಡಾಡುವ ಕಾರಿನಲ್ಲಿ ಬಂದ ಖ್ಯಾತ ನಟ; ಅದೇ ತಪ್ಪಾಯ್ತು

ಹಿಂದಿ ಬಿಗ್​ ಬಾಸ್​ ಸೀಸನ್​ 13ರ ವಿನ್ನರ್ ಸಿದ್ದಾರ್ಥ್​  ಶುಕ್ಲಾ ಇತ್ತೀಚೆಗೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಅನೇಕರು ಸಿದ್ದಾರ್ಥ್​ ಶುಕ್ಲಾ ತಾಯಿ ಬಳಿ ತೆರಳಿ ಸಾಂತ್ವನ ಹೇಳುತ್ತಿದ್ದಾರೆ.

ಸಾವಿನ ಮನೆಗೆ ಸಾಮಾನ್ಯರು ಓಡಾಡುವ ಕಾರಿನಲ್ಲಿ ಬಂದ ಖ್ಯಾತ ನಟ; ಅದೇ ತಪ್ಪಾಯ್ತು
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 17, 2021 | 6:57 PM

ಸೆಲೆಬ್ರಿಟಿ ಪಟ್ಟ ಸಿಕ್ಕ ನಂತರ ಸಾಕಷ್ಟು ಮಂದಿ ಐಷಾರಾಮಿ ಕಾರು, ಮನೆ ಖರೀದಿ ಮಾಡುತ್ತಾರೆ. ಸೆಲೆಬ್ರಿಟಿ ಆದವರು ಐಷಾರಾಮಿ ಆಗಿ ಇರಲೇಬೇಕು ಎನ್ನುವ ಮನಸ್ಥಿತಿ ಎಲ್ಲರಲ್ಲೂ ಬೆಳೆದಿದೆ. ಸ್ಟಾರ್​ ಆಗಿದ್ದರೂ ಸರಳವಾಗಿ ಜೀವನ ನಡೆಸುತ್ತಿರುವ ಅನೇಕರಿಗೆ ಇದರಿಂದ ತೊಂದರೆ ಆಗುತ್ತಿದೆ. ಈಗ ಹಿಂದಿ ಕಿರುತೆರೆ ನಟನಿಗೆ ಈ ವಿಚಾರಕ್ಕೆ ಅವಮಾನ ಆಗಿದೆ. ಇದಕ್ಕೆ ಅವರು ಕಠಿಣವಾಗಿ ಪ್ರತಿಕ್ರಿಯಿಸಿದ್ದಾರೆ.

ಹಿಂದಿ ಬಿಗ್​ ಬಾಸ್​ ಸೀಸನ್​ 13ರ ವಿನ್ನರ್ ಸಿದ್ದಾರ್ಥ್​  ಶುಕ್ಲಾ ಇತ್ತೀಚೆಗೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಅನೇಕರು ಸಿದ್ದಾರ್ಥ್​ ಶುಕ್ಲಾ ತಾಯಿ ಬಳಿ ತೆರಳಿ ಸಾಂತ್ವನ ಹೇಳುತ್ತಿದ್ದಾರೆ. ನಟ ಕರಣ್​​ವೀರ್ ​ಬೊಹ್ರಾ ಕೂಡ ಸಿದ್ದಾರ್ಥ್​ ತಾಯಿಯನ್ನು ಭೇಟಿ ಆಗಿದ್ದಾರೆ. ಈ ಭೇಟಿಗೆ ತೆರಳುವಾಗ ಅವರು ಮಾರುತಿ ಸುಜುಕಿ ಕಾರನ್ನು ಏರಿ ಹೋಗಿದ್ದಾರೆ. ಅವರು ಬಂದ ಕಾರಿನ ಬೆಲೆ 10 ಲಕ್ಷದ ಆಸುಪಾಸು ಇದೆ. ಇದೇ ವಿಚಾರ ಇಟ್ಟುಕೊಂಡು ಪಾಪರಾಜಿಗಳು ನಟನನ್ನು ಟ್ರೋಲ್​ ಮಾಡಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿ ಅದಕ್ಕೆ ‘ಬಡವ’ ಎನ್ನುವ ಕ್ಯಾಪ್ಶನ್​ ನೀಡಿದ್ದಾರೆ. ಇದು ನಟನಿಗೆ ಸಿಟ್ಟು ತರಿಸಿದೆ. ಈ ವಿಚಾರವಾಗಿ ಅವರು ಆಕ್ರೋಶ ಹೊರ ಹಾಕಿದ್ದಾರೆ.

‘ಅನೇಕ ಯುವಕರು ನನ್ನನ್ನು ಫಾಲೋ ಮಾಡುತ್ತಿರುತ್ತಾರೆ. ಯಾವ ಬಟ್ಟೆ ಧರಿಸಬೇಕು, ಯಾವ ಕಾರನ್ನು ಡ್ರೈವ್​ ಮಾಡಬೇಕು ಎನ್ನುವುದನ್ನು ಯೋಚಿಸುತ್ತಿರುತ್ತಾರೆ. ಅವರೆಲ್ಲರಿಗೂ ನಾನು ಮಾದರಿ ಆಗಬಹುದು. ಸಾಮಾನ್ಯರು ಓಡಾಡುವ​ ಕಾರಿನಲ್ಲಿ ಬಂದರೆ ಸಮಸ್ಯೆ ಏನು? ನಾವು ಅಲ್ಲಿಗೆ ಐಷಾರಾಮಿತನ ತೋರಿಸೋಕೆ ಹೋಗಿಲ್ಲ. ಮೃತನ ತಾಯಿಗೆ ಸಾಂತ್ವನ ಹೇಳೋಕೆ ಹೋಗಿದ್ದೆವು. ಅದಕ್ಕೆ ಈ ರೀತಿ ಹೇಳುವುದು ಎಷ್ಟು ಸರಿ’ ಎಂದು ಕರಣ್​ವೀರ್​ ಪ್ರಶ್ನೆ ಮಾಡಿದ್ದಾರೆ.

ಕರಣ್​​ವೀರ್ ಬಳಿ ಐಷಾರಾಮಿ ಕಾರುಗಳಿವೆ. ಆದರೆ, ಅದನ್ನು ಅವರು ಮಾರಾಟ ಮಾಡಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಹಾಗಂತ ಅವರಿಗೆ ಆರ್ಥಿಕ ಸಮಸ್ಯೆ ಬಂದಿದೆ ಎಂದರ್ಥವಲ್ಲ. ಬದಲಿಗೆ, ಈ ಹಣವನ್ನು ಅವರು ಮಗಳ ಶಿಕ್ಷಣಕ್ಕಾಗಿ ಖರ್ಚು ಮಾಡಲು ನಿರ್ಧರಿಸಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಅಲ್ಲದೆ, ನಟನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ: Megha Shetty: ‘ಜೊತೆ ಜೊತೆಯಲಿ’ ಮೇಘಾ ಶೆಟ್ಟಿ ಸಿನಿಮಾಗಾಗಿ ಕಾಯ್ತಾ ಇದೀರಾ?; ಇಲ್ಲಿದೆ ಗುಡ್​ ನ್ಯೂಸ್

ಕಲರ್ಸ್​ ಕನ್ನಡ ವಾಹಿನಿಯಲ್ಲಿ ಬರುತ್ತಿದೆ ಹೊಸ ಧಾರಾವಾಹಿ; ಎಷ್ಟು ಗಂಟೆಗೆ?

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು