ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರುತ್ತಿದೆ ಹೊಸ ಧಾರಾವಾಹಿ; ಎಷ್ಟು ಗಂಟೆಗೆ?
ಮೂಲ ಧಾರಾವಾಹಿಯಲ್ಲಿ ಈ ಕಥೆ ಸಾಗೋದು ಪಶ್ಚಿಮ ಬಂಗಾಳದಲ್ಲಿ. ಈ ಕಥೆ ನಡೆಯೋದು ಸ್ವಾತಂತ್ರ್ಯೋತ್ಸವಕ್ಕೂ ಮೊದಲು. ಕನ್ನಡದಲ್ಲಿ ಈ ಊರೂಗಳ ಹೆಸರನ್ನು ಬದಲಿಸಿ, ನೇಟಿವಿಟಿಗೆ ತಕ್ಕಂತೆ ಡಬ್ ಮಾಡುವ ಸಾಧ್ಯತೆ ಇದೆ.
ವೀಕ್ಷಕರನ್ನು ಸೆಳೆಯೋಕೆ ವಾಹಿನಿಗಳ ಮಧ್ಯೆ ಕಾಂಪಿಟೇಷನ್ ಇದ್ದೇ ಇರುತ್ತದೆ. ಈ ಕಾರಣಕ್ಕೆ ಹೊಸಹೊಸ ಧಾರಾವಾಹಿಗಳ ಮೂಲಕ ವಾಹಿನಿಗಳು ವೀಕ್ಷಕರ ಎದುರು ಬರುತ್ತಿವೆ. ಇನ್ನು, ಅನೇಕ ಧಾರಾವಾಹಿಗಳು ಬೇರೆ ಭಾಷೆಯಿಂದ ಡಬ್ ಆಗಿ ಕನ್ನಡದಲ್ಲಿ ಪ್ರಸಾರ ಆಗುತ್ತಿವೆ. ಈಗ ಕಲರ್ಸ್ ಕನ್ನಡ ವಾಹಿನಿ ಹೊಸ ಧಾರಾವಾಹಿ ಜತೆಗೆ ವೀಕ್ಷಕರ ಎದುರು ಬರುತ್ತಿದೆ. ಇದರ ಪ್ರೋಮೋವನ್ನು ವಾಹಿನಿ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.
‘ಚಿಕ್ಕೆಜಮಾನಿ’ ಧಾರಾವಾಹಿ ಸೆಪ್ಟೆಂಬರ್ 20ರಿಂದ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆರಂಭಿಸಲಿದೆ. ಅಂದಹಾಗೆ, ಇದು ಡಬ್ ಧಾರಾವಾಹಿ. ಹಿಂದಿಯಲ್ಲಿ ‘ಬ್ಯಾರಿಸ್ಟರ್ ಬಾಬು’ ಹೆಸರಿನ ಧಾರಾವಾಹಿ ಕಳೆದ ವರ್ಷ ಫೆಬ್ರವರಿ 11ರಂದು ಪ್ರಸಾರ ಆರಂಭಿಸಿತ್ತು. ಬಾಂಧಿತಾ ದಾಸ್ ಎಂಬ ಬಾಲಕಿಯನ್ನು ಬ್ಯಾರಿಸ್ಟರ್ ಅನಿರುದ್ಧ್ ರಾಯ್ ಚೌಧರಿ ಮದುವೆ ಆಗುತ್ತಾನೆ. ಅನಿರುದ್ಧ್ ಸಮಾಜದ ವಿರುದ್ಧ ಹೋರಾಡುತ್ತಾನೆ. ಈ ಧಾರಾವಾಹಿಯಲ್ಲಿ ಬಾಲಕಿಯ ವಯಸ್ಸು ಕೇವಲ 11 ವರ್ಷ. ಈ ಮೂಲಕ ಸಮಾಜದ ಅನೇಕ ಕೆಟ್ಟ ಸಂಪ್ರದಾಯಗಳ ವಿರುದ್ಧ ಹೋರಾಡಲು ಈ ಧಾರಾವಾಹಿ ಸ್ಫೂರ್ತಿದಾಯಕವಾಗಲಿದೆ.
ಮೂಲ ಧಾರಾವಾಹಿಯಲ್ಲಿ ಈ ಕಥೆ ಸಾಗೋದು ಪಶ್ಚಿಮ ಬಂಗಾಳದಲ್ಲಿ. ಈ ಕಥೆ ನಡೆಯೋದು ಸ್ವಾತಂತ್ರ್ಯ ಪೂರ್ವದಲ್ಲಿ. ಕನ್ನಡದಲ್ಲಿ ಈ ಊರೂಗಳ ಹೆಸರನ್ನು ಬದಲಿಸಿ, ನೇಟಿವಿಟಿಗೆ ತಕ್ಕಂತೆ ಡಬ್ ಮಾಡುವ ಸಾಧ್ಯತೆ ಇದೆ. ಸದ್ಯ, ಕಲರ್ಸ್ ಕನ್ನಡ ವಾಹಿನಿ ‘ಚಿಕ್ಕೆಜಮಾನಿ’ ಧಾರಾವಾಹಿಯ ಪ್ರೋಮೋ ಹಂಚಿಕೊಂಡಿದೆ. ಈ ಪ್ರೋಮೋಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೆಲವರು ಡಬ್ ಮಾಡಿ ಧಾರಾವಾಹಿ ಪ್ರಸಾರ ಮಾಡಿರುವುದನ್ನು ವಿರೋಧಿಸಿದ್ದಾರೆ. ಪ್ರತಿದಿನ ಮಧ್ಯಾಹ್ನ 2 ಗಂಟೆಗೆ ‘ಚಿಕ್ಕೆಜಮಾನಿ’ ಪ್ರಸಾರವಾಗಲಿದೆ.
View this post on Instagram
ಕೊವಿಡ್ ಮೊದಲನೇ ಅಲೆ ಕಾಣಿಸಿಕೊಂಡ ನಂತರದಲ್ಲಿ ಧಾರಾವಾಹಿ ಶೂಟಿಂಗ್ ನಿಂತಿತ್ತು. ಈ ವೇಳೆ ವಾಹಿನಿಗಳಿಗೆ ಧಾರಾವಾಹಿ ಪ್ರಸಾರ ಮಾಡೋಕೆ ಸಾಧ್ಯವಾಗಿರಲಿಲ್ಲ. ಆಗ, ವಾಹಿನಿಗಳು ಡಬ್ಬಿಂಗ್ ಕಾನ್ಸೆಪ್ಟ್ಗೆ ಹೆಚ್ಚು ಒತ್ತು ನೀಡಿದವು. ಬೇರೆಬೇರೆ ಭಾಷೆಯ ಜನಪ್ರಿಯ ಧಾರಾವಾಹಿಗಳನ್ನು ಡಬ್ ಮಾಡಿ ಪ್ರಸಾರ ಮಾಡೋಕೆ ಆರಂಭಿಸಿವೆ. ಇದನ್ನು ಅನೇಕರು ವಿರೋಧಿಸಿದ್ದಾರೆ ಕೂಡ.
ಇದನ್ನೂ ಓದಿ: ‘ಡಾ. ರಾಜ್ಕುಮಾರ್ ನೋಡಿ ಮೆಚ್ಚಿದ್ದ ಧಾರಾವಾಹಿ ಅದು’; ಅಪರೂಪದ ಕ್ಷಣ ನೆನಪಿಸಿಕೊಂಡ ಶ್ರೀದೇವಿ
ರವಿ ಬೆಳಗೆರೆ ಅವರ ‘ಹೇಳಿ ಹೋಗು ಕಾರಣ’ ಅತಿ ಶೀಘ್ರದಲ್ಲೇ ಧಾರಾವಾಹಿಯಾಗಿ ಪ್ರಸಾರ; ಕುತೂಹಲ ಹುಟ್ಟಿಸಿದ ಪ್ರೊಮೊ
Published On - 8:43 pm, Sat, 11 September 21