ಈ ಬಗ್ಗೆ ವಾಹಿನಿಯ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತ ಮಾಹಿತಿ ಲಭ್ಯವಾಗಿದ್ದು, ಇಂದು ‘ಹೇಳಿ ಹೋಗು ಕಾರಣ’ ಧಾರಾವಾಹಿಯ ಪ್ರೊಮೊ ಬಿಡುಗಡೆಯಾಗಿದೆ. ಒಂದು ನಿಮಿಷ 20 ಸೆಕೆಂಡ್ ಅವಧಿಯ ಪ್ರೊಮೊ ಹಸಿರು ವಾತಾವರಣದ ಮಧ್ಯೆ, ಮಳೆಯಲ್ಲಿ ಚಿತ್ರೀಕರಣಗೊಂಡಿರುವ ದೃಶ್ಯವನ್ನು ಹೊಂದಿದ್ದು ಕತೆಯ ನಾಯಕ, ನಾಯಕಿಯರಿಬ್ಬರ ಕಿರು ಪರಿಚಯವನ್ನು ಕಟ್ಟಿಕೊಡುವಂತಿದೆ.
ಧಾರಾವಾಹಿ ಪ್ರೊಮೊದಲ್ಲಿನ ಒಂದು ದೃಶ್ಯ
ಕೋರಮಂಗಲ ಅನಿಲ್, ಚೇತನ್ ಆರ್, ಗುರುಪ್ರಸಾದ್ ಎಲೆಕೊಪ್ಪ ಅವರ ತಂಡವು ಭಾವನಾ ಬೆಳೆಗೆರೆ ಅವರಿಗೆ ಈ ಧಾರಾವಾಹಿ ಚಿತ್ರೀಕರಣ ಆರಂಭವಾಗುವ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುವ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿತ್ತು. ಆಗಲೇ ರವಿ ಬೆಳಗೆರೆ ಅವರ ಅಭಿಮಾನಿಗಳು ಪುಳಕಗೊಂಡು ಈ ಧಾರಾವಾಹಿಗೆ ತುದಿಗಾಲಿನಲ್ಲಿ ಕಾಯುತ್ತಿದ್ದೇವೆ ಎಂದು ಹೇಳಿಕೊಂಡಿದ್ದರು. ಇದೀಗ ಪ್ರೊಮೊ ಬಿಡುಗಡೆಯಾದ ಬಳಿಕ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದ್ದು, ಶೀಘ್ರದಲ್ಲೇ ಧಾರಾವಾಹಿ ಆರಂಭಿಸುವ ಸುಳಿವನ್ನು ಸ್ಟಾರ್ ಸುವರ್ಣ ವಾಹಿನಿ ನೀಡಿದೆ.
ಹೇಳಿ ಹೋಗು ಕಾರಣ ಶೀಘ್ರದಲ್ಲೇ ಧಾರಾವಾಹಿ ರೂಪದಲ್ಲಿ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ
ಇತ್ತೀಚಿನ ವರ್ಷಗಳಲ್ಲಿ ಕನ್ನಡ ಕಿರುತೆರೆ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತಿದ್ದು, ಧಾರಾವಾಹಿಗಳ ಕಥಾ ಶೈಲಿ, ನಿರೂಪಣೆ, ತಾಂತ್ರಿಕ ಗುಣಮಟ್ಟ, ನಟನೆ ಎಲ್ಲಾ ವಿಚಾರಗಳೂ ತಾಜಾತನದೊಂದಿಗೆ ಕಾಣಿಸಿಕೊಳ್ಳುತ್ತಿವೆ. ವಾಹಿನಿಗಳ ನಡುವೆ ಪೈಪೋಟಿಯೂ ಹೆಚ್ಚುತ್ತಿದ್ದು ಒಬ್ಬರಿಗಿಂತ ಒಬ್ಬರು ವಿಭಿನ್ನ ಧಾರಾವಾಹಿ, ಕಾರ್ಯಕ್ರಮಗಳನ್ನು ತೆರೆಮೇಲೆ ತರುತ್ತಿದ್ದಾರೆ. ಇದೀಗ ಸ್ಟಾರ್ ಸುವರ್ಣ ವಾಹಿನಿ ರವಿ ಬೆಳಗೆರೆ ಅವರಂಥ ಜನಪ್ರಿಯ ಬರಹಗಾರನ ಕೃತಿಯನ್ನೇ ಧಾರಾವಾಹಿ ಮಾಡುತ್ತಿರುವುದು ಸಹಜವಾಗಿಯೇ ನಿರೀಕ್ಷೆ ಮೂಡಿಸಿದ್ದು, ಕತೆ ಹೇಗೆ ಸಾಗಲಿದೆ. ಮೂಲ ಕತೆಯನ್ನೇ ಇಟ್ಟುಕೊಂಡು ಅದನ್ನು ತೆರೆಮೇಲೆ ತರುತ್ತಾರಾ? ಅಥವಾ ಬದಲಾವಣೆಗಳು ಇರಲಿವೆಯಾ? ಎಂದು ಪ್ರೇಕ್ಷಕರು ಕುತೂಹಲಭರಿತರಾಗಿ ಕಾಯುತ್ತಿದ್ದಾರೆ.
ಶೀಘ್ರದಲ್ಲೇ ಹೊಸ ಧಾರಾವಾಹಿ
ಇದನ್ನೂ ಓದಿ:
ಸಾಮಾಜಿಕ ಸಂದೇಶ ಹೊತ್ತು ಬರುತ್ತಿದ್ದಾರೆ ತನ್ವಿ ರಾವ್; ರಾಧೆ ಶ್ಯಾಮ ಧಾರಾವಾಹಿಯಲ್ಲಿ ಭಿನ್ನ ಪ್ರಯತ್ನ
‘ಡಾ. ರಾಜ್ಕುಮಾರ್ ನೋಡಿ ಮೆಚ್ಚಿದ್ದ ಧಾರಾವಾಹಿ ಅದು’; ಅಪರೂಪದ ಕ್ಷಣ ನೆನಪಿಸಿಕೊಂಡ ಶ್ರೀದೇವಿ
(Ravi Belagere book Heli Hogu Karana coming soon as Kannada serial on Star Suvarna)