ಬಿಗ್​ ಬಾಸ್​ ಸ್ಪರ್ಧಿ ಸಪ್ನಾ ಸಾವಿನ ವದಂತಿ ಬಳಿಕ ವಿಡಿಯೋ ವೈರಲ್​; RIP ಎಂದವರೆಲ್ಲ ಈಗ ಗಪ್​ಚುಪ್​

TV9 Digital Desk

| Edited By: ಮದನ್​ ಕುಮಾರ್​

Updated on: Sep 11, 2021 | 1:37 PM

ಸಪ್ನಾ ಚೌಧರಿ ಹಂಚಿಕೊಂಡ ವಿಡಿಯೋ ನೋಡಿ ಬಹುತೇಕರು ಗಪ್​ಚುಪ್ ಆಗಿದ್ದಾರೆ. ‘ಅಯ್ಯೋ ನೀವು ಸತ್ತು ಹೋಗಿದ್ದೀರಿ ಅಂತ ಸುದ್ದಿ ನೋಡಿದ್ನಲ್ಲಾ..’ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ.

ಬಿಗ್​ ಬಾಸ್​ ಸ್ಪರ್ಧಿ ಸಪ್ನಾ ಸಾವಿನ ವದಂತಿ ಬಳಿಕ ವಿಡಿಯೋ ವೈರಲ್​; RIP ಎಂದವರೆಲ್ಲ ಈಗ ಗಪ್​ಚುಪ್​
ಸಪ್ನಾ ಚೌಧರಿ
Follow us

ಸೋಶಿಯಲ್​ ಮೀಡಿಯಾದಲ್ಲಿ ಕಿಡಿಗೇಡಿಗಳು ಮಾಡುವ ಕಿತಾಪತಿ ಒಂದೆರಡಲ್ಲ. ಫೇಮಸ್​ ಆಗಿರುವ ವ್ಯಕ್ತಿಗಳ ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವುದನ್ನೇ ಕೆಲವರು ಕಸುಬು ಮಾಡಿಕೊಂಡಿದ್ದಾರೆ. ಯಾರದ್ದಾದರೂ ನಿಧನದ ಸುದ್ದಿ ಹರಿದಾಡಿದರೆ ಅದನ್ನು ಅಷ್ಟು ಸುಲಭವಾಗಿ ನಂಬುವಂತಿಲ್ಲ. ಅದಕ್ಕೆ ಹೊಸ ಉದಾಹರಣೆ ಎಂದರೆ ಬಿಗ್​ ಬಾಸ್ ಮಾಜಿ ಸ್ಪರ್ಧಿ​ ಸಪ್ನಾ ಚೌಧರಿ ಬಗ್ಗೆ ಹರಡಿದ್ದ ವದಂತಿ. ಫೇಮಸ್​ ಡ್ಯಾನ್ಸರ್​​ ಆಗಿರುವ ಸಪ್ನಾ ಚೌಧರಿ ನಿಧನರಾಗಿದ್ದಾರೆ ಎಂದು ಇತ್ತೀಚೆಗೆ ಸೋಶಿಯಲ್​ ಮೀಡಿಯಾದಲ್ಲಿ ಸುದ್ದಿ ಹರಿದಾಡಿತ್ತು. ಆದರೆ ಆ ವದಂತಿಗೆ ಫುಲ್​ಸ್ಟಾಪ್​ ಇಡುವ ರೀತಿಯಲ್ಲಿ ಒಂದು ವಿಡಿಯೋವನ್ನು ಪೋಸ್ಟ್​ ಮಾಡಿಕೊಂಡಿದ್ದಾರೆ ಸಪ್ನಾ!

ಸಪ್ನಾ ಚೌಧರಿ ರಸ್ತೆ ಅಪಘಾತದಲ್ಲಿ ಕೊನೆಯುಸಿರು ಎಳೆದಿದ್ದಾರೆ ಎಂದು ಯಾರೋ ಕಿಡಿಗೇಡಿಗಳು ಸೋಶಿಯಲ್​ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದರು. ಅದನ್ನು ನಂಬಿಕೊಂಡ ಬಹುತೇಕರು RIP (ರೆಸ್ಟ್​ ಇನ್​ ಪೀಸ್​) ಎಂದು ಕಮೆಂಟ್​ ಮಾಡುವ ಮೂಲಕ ಸಪ್ನಾ ಆತ್ಮಕ್ಕೆ ಶಾಂತಿ ಕೋರಿದ್ದರು! ಈ ವದಂತಿ ಕಾಡ್ಗಿಚ್ಚಿನಂತೆ ಹಬ್ಬಿತು. ಆದರೆ ತಮಗೆ ಏನೂ ಆಗಿಲ್ಲ ಎಂಬುದನ್ನು ತಿಳಿಸಲು ಸಪ್ನಾ ಒಂದು ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ.

ಯಾವುದೋ ಶೋ ಸಲುವಾಗಿ ಮೇಕಪ್​ ಮಾಡಿಕೊಳ್ಳುತ್ತ ಕನ್ನಡಿ ಮುಂದೆ ಕುಳಿತಿರುವ ಸಪ್ನಾ ಚೌಧರಿ ಅವರು ಸೆಲ್ಫೀ ವಿಡಿಯೋ ಮಾಡಿಕೊಂಡು ಅದನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಆ ಮೂಲಕ ತಮಗೆ ಏನೂ ಆಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ‘ಅಯ್ಯೋ ನೀವು ಸತ್ತು ಹೋಗಿದ್ದೀರಿ ಅಂತ ಸುದ್ದಿ ನೋಡಿದ್ನಲ್ಲಾ..’ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ. ಈ ಮೊದಲು RIP ಎಂದು ಕಮೆಂಟ್​ ಮಾಡಿದ್ದವರೆಲ್ಲ ಈಗ ಈ ವಿಡಿಯೋ ನೋಡಿ ಗಪ್​ಚುಪ್​ ಆಗಿದ್ದಾರೆ.

ಹಿಂದಿ ಬಿಗ್​ ಬಾಸ್​ ಸೀಸನ್​ 10ರಲ್ಲಿ ಕಾಮನರ್​ ಆಗಿ ಸ್ಪರ್ಧಿಸಿದ್ದ ಸಪ್ನಾ ಚೌಧರಿ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿತು. ಆ ಬಳಿಕ ಅವರ ಜೀವನ ಶೈಲಿಯೇ ಬದಲಾಯಿತು. ಜನಸಾಮಾನ್ಯ ವ್ಯಕ್ತಿಯಾಗಿ ಬಿಗ್​ ಬಾಸ್​ ಪ್ರವೇಶಿಸಿದ್ದ ಅವರು ಆ ಶೋ ಮುಗಿಯುವುದರೊಳಗೆ ಸೆಲೆಬ್ರಿಟಿ ಆಗಿಬಿಟ್ಟರು. ಈಗ ಅವರಿಗೆ ಸೋಶಿಯಲ್​ ಮೀಡಿಯಾದಲ್ಲಿ ದೊಡ್ಡ ಫ್ಯಾನ್​ ಫಾಲೋಯಿಂಗ್​ ಇದೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು ಬರೋಬ್ಬರಿ 34 ಲಕ್ಷಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ. 2020ರ ಜನವರಿಯಲ್ಲಿ ತಮ್ಮ ಬಹುಕಾಲದ ಗೆಳೆಯ ವೀರ್​ ಸಾಹು ಜೊತೆ ಸಪ್ನಾ ಚೌಧರಿ ಮದುವೆಯಾದರು. ಅಕ್ಟೋಬರ್​ನಲ್ಲಿ ಅವರಿಗೆ ಮೊದಲ ಮಗು ಜನಿಸಿತು.

ಇದನ್ನೂ ಓದಿ:

ಖ್ಯಾತ ಹಾಸ್ಯ ನಟ ಪರೇಶ್​ ರಾವಲ್​ ಸಾವಿನ ವದಂತಿ; ಬೆಳಗ್ಗೆ 7 ಗಂಟೆಗೆ ಏನಾಗಿತ್ತು?

ದೃಶ್ಯಂ ಸಿನಿಮಾ ನಿರ್ದೇಶಕರ ಸಾವಿನ ಸುದ್ದಿ ಕೇವಲ ವದಂತಿ ಎಂದ ಸ್ನೇಹಿತರು

ತಾಜಾ ಸುದ್ದಿ

Related Stories

Click on your DTH Provider to Add TV9 Kannada