ಖ್ಯಾತ ಹಾಸ್ಯ ನಟ ಪರೇಶ್ ರಾವಲ್ ಸಾವಿನ ವದಂತಿ; ಬೆಳಗ್ಗೆ 7 ಗಂಟೆಗೆ ಏನಾಗಿತ್ತು?
Paresh Rawal | Death Hoax: ‘ಇಂದು ಮುಂಜಾನೆ 7 ಗಂಟೆಗೆ ಹಿಂದಿ ಚಿತ್ರರಂಗದ ಖ್ಯಾತ ನಟ ಪರೇಶ್ ರಾವಲ್ ನಿಧನರಾದರು’ ಎಂದು ಲಾಫ್ಟರ್ ಹೌಸ್ ಎಂಬ ಫೇಸ್ಬುಕ್ ಪೇಜ್ನಲ್ಲಿ ಸುದ್ದಿ ಪೋಸ್ಟ್ ಮಾಡಲಾಗಿತ್ತು. ಅದಕ್ಕೆ ಕಂಡು ಒಮ್ಮೆಲೇ ಎಲ್ಲರಿಗೂ ಶಾಕ್ ಆಯಿತು. ಕೆಲವೇ ಕ್ಷಣಗಳಲ್ಲಿ ಆ ಪೋಸ್ಟ್ ವೈರಲ್ ಆಯಿತು.
ಕೊರೊನಾ ವೈರಸ್ ಸೃಷ್ಟಿಸಿರುವ ಅನಾಹುತದಿಂದಾಗಿ ಪ್ರತಿದಿನ ಕೆಟ್ಟ ಸುದ್ದಿಗಳು ಕೇಳಿಬರುತ್ತಿರುವುದು ನಿಜ. ಸೆಲೆಬ್ರಿಟಿಗಳ ವಲಯದಲ್ಲಿ ಅನೇಕರು ಸಾವಿನ ಮನೆ ಸೇರುತ್ತಿದ್ದಾರೆ. ಆದರೆ ಈ ಸಂದರ್ಭವನ್ನು ಕೆಲವು ಕಿಡಿಗೇಡಿಗಳು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹೆಚ್ಚು ಲೈಕ್ಸ್ ಮತ್ತು ಫಾಲೋವರ್ಸ್ ಪಡೆಯುವ ಉದ್ದೇಶದಿಂದ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳ ನಿಧನದ ವದಂತಿಯನ್ನು ಹರಡಿಸಲಾಗುತ್ತಿದೆ. ಇತ್ತೀಚೆಗೆ ನಟ ಪರೇಶ್ ರಾವಲ್ ಬಗ್ಗೆ ಒಂದು ಸುಳ್ಳು ಸುದ್ದಿ ಹಬ್ಬಿತ್ತು. ಅದಕ್ಕೆ ಸ್ವತಃ ಪರೇಶ್ ರಾವಲ್ ಪ್ರತಿಕ್ರಿಯೆ ನೀಡಿದ್ದಾರೆ.
‘ಇಂದು ಮುಂಜಾನೆ 7 ಗಂಟೆಗೆ ಹಿಂದಿ ಚಿತ್ರರಂಗದ ಖ್ಯಾತ ನಟ ಪರೇಶ್ ರಾವಲ್ ನಿಧನರಾದರು’ ಎಂದು ಲಾಫ್ಟರ್ ಹೌಸ್ ಎಂಬ ಫೇಸ್ಬುಕ್ ಪೇಜ್ನಲ್ಲಿ ಸುದ್ದಿ ಪೋಸ್ಟ್ ಮಾಡಲಾಗಿತ್ತು. ಅದಕ್ಕೆ ಕಂಡು ಒಮ್ಮೆಲೇ ಎಲ್ಲರಿಗೂ ಶಾಕ್ ಆಯಿತು. ಕೆಲವೇ ಕ್ಷಣಗಳಲ್ಲಿ ಆ ಪೋಸ್ಟ್ ವೈರಲ್ ಆಯಿತು. ಅದು ಸುಳ್ಳು ಸುದ್ದಿ ಎಂಬುದು ಗೊತ್ತಾಗುತ್ತಿದ್ದಂತೆಯೇ ಕಮೆಂಟ್ ಮೂಲಕ ಎಲ್ಲರೂ ಎಚ್ಚರಿಕೆ ನೀಡಿದ್ದಾರೆ. ಇಂತ ವದಂತಿ ಹಬ್ಬಿಸುವವರ ವಿರುದ್ಧ ದೂರು ದಾಖಲಿಸುವುದಾಗಿ ಪರೇಶ್ ರಾವಲ್ ಅಭಿಮಾನಿಗಳು ತಿಳಿಸಿದ್ದಾರೆ.
ಈ ಪೋಸ್ಟ್ ಪರೇಶ್ ರಾವಲ್ ಗಮನಕ್ಕೂ ಬಂದಿದೆ. ಅದರ ಸ್ಕ್ರೀನ್ ಶಾಟ್ ಶೇರ್ ಮಾಡಿಕೊಂಡಿರುವ ಅವರು ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. ‘7 ಗಂಟೆ ನಂತರ ನಾನು ಮಲಗಿಕೊಂಡಿದ್ದೆ. ಅದನ್ನೇ ತಪ್ಪು ತಿಳಿದುಕೊಂಡಿದ್ದೀರಿ’ ಎಂದು ಹಾಸ್ಯದ ದಾಟಿಯಲ್ಲೇ ಅವರು ಉತ್ತರ ನೀಡಿದ್ದಾರೆ.
?…Sorry for the misunderstanding as I slept past 7am …! pic.twitter.com/3m7j8J54NF
— Paresh Rawal (@SirPareshRawal) May 14, 2021
ಪರೇಶ್ ರಾವಲ್ ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳ ವಿಚಾರದಲ್ಲೂ ಹೀಗೆಯೇ ಆಗುತ್ತಿದೆ. ಕೆಲವೇ ದಿನಗಳ ಹಿಂದೆ ನಟ ಅನುಪಮ್ ಖೇರ್ ಅವರ ಪತ್ನಿ, ಖ್ಯಾತ ನಟಿ ಕಿರಣ್ ಖೇರ್ ಅವರು ನಿಧನರಾಗಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗಿತ್ತು. ನಂತರ ಅದನ್ನು ಅನುಪಮ್ ಖೇರ್ ತಳ್ಳಿ ಹಾಕಿದರು. ಗಾಯಕ ಲಕ್ಕಿ ಅಲಿ, ಶಕ್ತಿಮಾನ್ ಖ್ಯಾತಿಯ ನಟ ಮುಕೇಶ್ ಖನ್ನಾ ಸಾವಿನ ಬಗ್ಗೆಯೂ ವದಂತಿ ಹಬ್ಬಿಸಲಾಗಿತ್ತು.
ಇದನ್ನೂ ಓದಿ:
Kirron Kher: ಅನುಪಮ್ ಖೇರ್ ಪತ್ನಿ, ಖ್ಯಾತ ನಟಿ ಕಿರಣ್ ಖೇರ್ ನಿಧನದ ವದಂತಿಗೆ ಬ್ರೇಕ್
Lucky Ali Death Hoax: ಗಾಯಕ ಲಕ್ಕಿ ಅಲಿ ನಿಧನರಾಗಿದ್ದಾರೆ ಎಂಬುದು ಸುಳ್ಳುಸುದ್ದಿ: ನಫೀಸಾ ಅಲಿ