₹ 16 ಕೋಟಿ ಮೌಲ್ಯದ ಲಸಿಕೆ ಅಗತ್ಯವಿದ್ದ ಮಗುವಿಗೆ ಸಹಾಯ ಮಾಡುವುದಾಗಿ ಕೆಬಿಸಿ ವೇದಿಕೆಯಲ್ಲೇ ಘೋಷಿಸಿದ ಅಮಿತಾಭ್

Amitabh Bachchan: 17 ವರ್ಷದ ಮಗುವೊಂದಕ್ಕೆ ಬೇಕಾಗಿರುವ ₹ 16 ಕೋಟಿ ಮೊತ್ತದ ವಿಶ್ವದ ಅತ್ಯಂತ ದುಬಾರಿ ಲಸಿಕೆಗೆ ಸಹಾಯ ಮಾಡುತ್ತೇನೆಂದು ಅಮಿತಾಭ್ ಕೆಬಿಸಿ ವೇದಿಕೆಯಿಂದ ಘೋಷಿಸಿದ್ದಾರೆ.

₹ 16 ಕೋಟಿ ಮೌಲ್ಯದ ಲಸಿಕೆ ಅಗತ್ಯವಿದ್ದ ಮಗುವಿಗೆ ಸಹಾಯ ಮಾಡುವುದಾಗಿ ಕೆಬಿಸಿ ವೇದಿಕೆಯಲ್ಲೇ ಘೋಷಿಸಿದ ಅಮಿತಾಭ್
ಕೆಬಿಸಿಯಲ್ಲಿ ಅಮಿತಾಭ್ ಬಚ್ಚನ್
Follow us
TV9 Web
| Updated By: shivaprasad.hs

Updated on:Sep 11, 2021 | 5:56 PM

KBC 13: ಅಮಿತಾಬ್ ಬಚ್ಚನ್ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್​ಪತಿ’ಯ ಶುಕ್ರವಾರದ ಸಂಚಿಕೆಯನ್ನು ವಿಶೇಷವಾಗಿ ‘ಶಾನ್ದಾರ್ ಶುಕ್ರವಾರ್’ ಎನ್ನಲಾಗುತ್ತದೆ. ಅಂದು ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ, ಚಾರಿಟಿಯ(ದಾನ) ಉದ್ದೇಶದಿಂದ ಆಟವಾಡುತ್ತಾರೆ. ನಿನ್ನೆ (ಸೆಪ್ಟೆಂಬರ್ 10) ಬಾಲಿವುಡ್​ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಹಾಗೂ ನಿರ್ದೇಶಕಿ ಫರಾಹ್ ಖಾನ್ ಭಾಗವಹಿಸಿದ್ದರು. ಕಾರ್ಯಕ್ರಮದ ನಡುವೆ ಫರಾಹ್ ಖಾನ್ ತಾವು ಆಟವಾಡುತ್ತಿರುವ ಉದ್ದೇಶವನ್ನು ತಿಳಿಸಿದ್ದು, ಅಮಿತಾಭ್ ಸೇರಿದಂತೆ ವೀಕ್ಷಕರು ಭಾವುಕರಾದರು.

ಫರಾಹ್ ಖಾನ್ ಅವರು ತಾವು ಗೆಲ್ಲುವ ಹಣವು ಒಂದು ಮಗುವಿನ ಚಿಕಿತ್ಸೆಗಾಗಿ ಎಂದು ತಿಳಿಸಿದ್ದರು. ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುವ ಅಪರೂಪದ ಕಾಯಿಲೆಯಾದ ‘ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ’ (SMA) ಯಿಂದ ಬಳಲುತ್ತಿರುವ ಮಗುವಿಗೆ ಅತ್ಯಂತ ದುಬಾರಿ ಚುಚ್ಚುಮದ್ದನ್ನು ಖರೀದಿಸಲು ಆಟದಿಂದ ಗೆದ್ದ ಹಣವನ್ನು ನೀಡುತ್ತೇನೆ ಎಂದು ಫರಾಹ್ ಖಾನ್ ನುಡಿದಿದ್ದರು. ಆ ಕಾಯಿಲೆ ಹಾಗೂ ಚುಚ್ಚುಮದ್ದಿಗೆ ಖರ್ಚಾಗುವ ಮೊತ್ತವನ್ನು ಕೂಡ ವೇದಿಕೆಯಲ್ಲಿ ಫರಾಹ್ ತಿಳಿಸಿದ್ದರು.

ಅನಾರೋಗ್ಯದಿಂದ ಬಳಲುತ್ತಿರುವ ಅಯಾನ್ಶ್ ಎಂಬ 17 ತಿಂಗಳ ಮಗುವಿನ ಚಿಕಿತ್ಸೆಗೆ ಹಣವನ್ನು ಒದಗಿಸಿಕೊಡುವ ಉದ್ದೇಶ ಫರಾಹ್ ಖಾನ್ ಅವರದ್ದಾಗಿತ್ತು. ಆ ಮಗುವಿನ ಪರಿಸ್ಥಿತಿಯನ್ನು ವಿವರಿಸಿದ ನಿರ್ದೇಶಕಿ, “ಅಯಾನ್ಶ್ ಎರಡು ವರ್ಷ ತುಂಬುವ ಹೊತ್ತಿಗೆ, ವಿಶ್ವದ ಅತ್ಯಂತ ದುಬಾರಿ ಇಂಜೆಕ್ಷನ್ ಆಗಿರುವ ‘ಜೋಲ್ಗೆನ್ಸ್ಮಾ’ ಎಂಬ ಔಷಧವನ್ನು ನೀಡಬೇಕಾಗುತ್ತದೆ. ಅದು ಆತನ ಜೀವವನ್ನು ಉಳಿಸಬಹುದು. ಆ ಇಂಜೆಕ್ಷನ್ ಬೆಲೆ ₹ 16 ಕೋಟಿ.  ನಾವು ಈ ಮಗುವನ್ನು ಉಳಿಸಲು ಬಯಸುತ್ತೇವೆ’’ ಎಂದು ಹೇಳಿದ್ದರು.

ಚಾನೆಲ್ ಹಂಚಿಕೊಂಡಿದ್ದ ಪ್ರೋಮೊ:

ಮಗುವಿನ ಸ್ಥಿತಿಗೆ ಮರುಗಿದ ಅಮಿತಾಭ್ ಮಗುವಿಗಾಗಿ ತಾವೂ ಕೂಡ ದೇಣಿಗೆ ನೀಡಲು ಸ್ಥಳದಲ್ಲೇ ನಿರ್ಧರಿಸಿದರು. “ನಾನು ಇದನ್ನು ಈ ವೇದಿಕೆಯಲ್ಲಿ ತಿಳಿಸಬೇಕೆ ಎಂದು ನನಗೆ ಗೊತ್ತಿಲ್ಲ. ಆದರೆ ಮಗುವಿಗಾಗಿ ಕೊಡುಗೆ ನೀಡಲು ಬಯಸುತ್ತೇನೆ. ಮೊತ್ತವನ್ನು ನಾನು ನಂತರ ಹೇಳುತ್ತೇನೆ, ಅದನ್ನು ಇಲ್ಲಿ ಚರ್ಚಿಸಲು ಬಯಸುವುದಿಲ್ಲ” ಎಂದು ಅಮಿತಾಭ್ ನುಡಿದು, ಮಗುವಿಗಾಗಿ ವೀಕ್ಷಕರು ಕೂಡ ಸಹಾಯ ಮಾಡುವಂತೆ ಕೋರಿಕೊಂಡರು. ಇದನ್ನು ಕೇಳಿದ ಫರಾಹ್, ಕೈಮುಗಿದು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ವೇದಿಕೆಯಲ್ಲೇ ಸಹಾಯ ಮಾಡುವುದಾಗಿ ಘೋಷಿಸಿದ ಅಮಿತಾಭ್ ನಡೆ ಈಗ ಅಭಿಮಾನಿಗಳ ಮನಗೆದ್ದಿದ್ದು, ಅವರ ಸಹಾಯ ಮಾಡುವ ಮನಸ್ಥಿತಿಯನ್ನು ಹೊಗಳುತ್ತಿದ್ದಾರೆ.

ಇದನ್ನೂ ಓದಿ:

ಕೆಲವೊಮ್ಮೆ ರೈತರ ಪರವಾಗಿ ನಿಂತರೂ ವಿಲನ್​ ಆಗುತ್ತೇವೆ; ಸತೀಶ್​ ನೀನಾಸಂ ನೇರ ಮಾತು

ಮತ್ತೊಂದು ಹುಡುಗಿ ಜತೆ ಆಪ್ತತೆ; ಮುರಿದು ಬಿತ್ತು ಶಮಿತಾ ಶೆಟ್ಟಿ-ರಾಕೇಶ್ ಬಾಪಟ್ ಸಂಬಂಧ

(Amitabh Bachchan decides in the set of KBC 13 to help a child who wants 16Cr rs injection)

Published On - 5:50 pm, Sat, 11 September 21

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM