AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಜು-ದಿವ್ಯಾ ಜೋಡಿಗೆ ಪ್ರೀತಿಯಿಂದ ಹೊಸ ಹೆಸರಿಟ್ಟ ಅಭಿಮಾನಿಗಳು

ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ.ಪಿ. ಪ್ರೀತಿ ವಿಚಾರ ಬಿಗ್​ ಬಾಸ್​ ಮನೆಯಲ್ಲಿ ಸಾಕಷ್ಟು ಸುದ್ದಿ ಆಗಿತ್ತು. ಈ ಜೋಡಿ ನೋಡಿ ಅನೇಕರು ಖುಷಿ ಪಟ್ಟಿದ್ದರು.

ಮಂಜು-ದಿವ್ಯಾ ಜೋಡಿಗೆ ಪ್ರೀತಿಯಿಂದ ಹೊಸ ಹೆಸರಿಟ್ಟ ಅಭಿಮಾನಿಗಳು
ಮಂಜು-ದಿವ್ಯಾಗೆ ಜೋಡಿಗೆ ಪ್ರೀತಿಯಿಂದ ಹೊಸ ಹೆಸರಿಟ್ಟ ಅಭಿಮಾನಿಗಳು
TV9 Web
| Edited By: |

Updated on: Sep 11, 2021 | 10:34 PM

Share

ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್​ ಜೋಡಿ ಬಿಗ್​ ಬಾಸ್​ ಸೀಸನ್​ 8ರಲ್ಲಿ ಹೈಲೈಟ್​ ಆಗಿತ್ತು. ಮಂಜು-ದಿವ್ಯಾ ತುಂಬಾನೇ ಕ್ಲೋಸ್ ಆಗಿದ್ದರಿಂದ ಇವರ ನಡುವೆ ಪ್ರೀತಿ ಇದೆ ಎಂದೇ ಹೇಳಲಾಗಿತ್ತು. ಆದರೆ, ದಿವ್ಯಾ ತಾವು ಖ್ಯಾತಿ ಗಳಿಸಿಕೊಳ್ಳಲು ಮಂಜು ಅವರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದೇ ಎಲ್ಲರೂ ಹೇಳಿದ್ದರು. ಆದರೆ, ಇದು ಸುಳ್ಳಾಗಿದೆ. ಬಿಗ್​ ಬಾಸ್​ನಿಂದ ಹೊರ ಬಂದ ನಂತರದಲ್ಲಿಯೂ ಈ ಜೋಡಿ ಒಟ್ಟಾಗಿ ಅನೇಕ ಬಾರಿ ಕಾಣಿಸಿಕೊಂಡಿದೆ. ಇದನ್ನು ನೋಡಿ ಅಭಿಮಾನಿಗಳು ಈ ಜೋಡಿಗೆ ಹೊಸ ಹೆಸರು ಇಟ್ಟಿದ್ದಾರೆ.

ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ.ಪಿ. ಪ್ರೀತಿ ವಿಚಾರ ಬಿಗ್​ ಬಾಸ್​ ಮನೆಯಲ್ಲಿ ಸಾಕಷ್ಟು ಸುದ್ದಿ ಆಗಿತ್ತು. ಈ ಜೋಡಿ ನೋಡಿ ಅನೇಕರು ಖುಷಿ ಪಟ್ಟಿದ್ದರು. ಅಲ್ಲದೆ, ಇವರಿಗೆ ದೊಡ್ಡ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಪ್ರೀತಿಯಿಂದ ಈ ಜೋಡಿಯನ್ನು ‘ಅರವಿಯಾ’ ಎಂದು ಕರೆಯಲಾಗುತ್ತಿದೆ. ಅರವಿಂದ್​ ಹೆಸರಿನ ಮೊದಲಾರ್ಧ ಹಾಗೂ ದಿವ್ಯಾ ಹೆಸರಿನ ಕೊನೆಯ ಅಕ್ಷರವನ್ನು ಬಳಕೆ ಮಾಡಿಕೊಂಡು ಅರವಿಯಾ ಎಂದು ಕರೆಯಲಾಗುತ್ತಿದೆ.

ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್​ ಬಿಗ್​ ಬಾಸ್​ಮನೆಯಲ್ಲಿ ಅಷ್ಟು ಕ್ಲೋಸ್​ ಆಗಿದ್ದರೂ ಕೂಡ ಅವರಿಗೆ ಫ್ಯಾನ್ಸ್​ ಹೆಸರು ಕೊಟ್ಟಿರಲಿಲ್ಲ. ಇಬ್ಬರೂ ಬಿಗ್​ ಬಾಸ್​ ಮನೆಯಿಂದ ಹೊರ ಬಂದ ನಂತರದಲ್ಲಿ ಆಪ್ತರಾಗಿದ್ದಾರೆ. ಸಾಕಷ್ಟು ಬಾರಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದು ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಕಾರಣಕ್ಕೆ ಪ್ರೀತಿಯಿಂದ ಇವರಿಗೆ ಹೊಸ ಹೆಸರು ನೀಡಲಾಗಿದೆ.

ಮಂಜು ಮತ್ತು ದಿವ್ಯಾಗೆ ಮನ್​ವ್ಯಾ ಎಂದು ಕರೆಯಲಾಗುತ್ತಿದೆ. ಈ ಬಗ್ಗೆ ಅಭಿಮಾನಿಗಳು ಕಮೆಂಟ್​ ಮಾಡುತ್ತಿದ್ದಾರೆ. ಸದ್ಯ ಈ ಹೊಸ ಹೆಸರು ವೈರಲ್​ ಆಗುತ್ತಿದೆ. ಕಲರ್ಸ್​ ಕನ್ನಡ ವಾಹಿನಿ ಏರ್ಪಡಿಸಿದ್ದ ‘ಬಿಗ್ ಗಣೇಶೋತ್ಸವ’ ಹಾಗೂ ಬಿಗ್​ ಬಾಸ್​ ಮಿನಿ ಸೀಸನ್​ ಕೊನೆಯ ದಿನ ಮಂಜು ಹಾಗೂ ದಿವ್ಯಾ ಒಟ್ಟಾಗಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ‘ನನ್ನ ಕೆಲಸ ಕಿತ್ತುಕೊಳ್ಳಬೇಡಿ’; ಮಂಜು ಪಾವಗಡಗೆ ಸುದೀಪ್ ಹೀಗೆ ಹೇಳಿದ್ದೇಕೆ?​

ದಿವ್ಯಾ ಸುರೇಶ್​ ಮನೆಯಲ್ಲೇ ಮಂಜುಗೆ ಗಣಪನ ಹಬ್ಬ; ‘ಆದಷ್ಟು ಬೇಗ ಮದುವೆ ಆಗಿ’ ಅಂದಿದ್ದು ಯಾರು?

Follow Us
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ