‘ನನ್ನ ಕೆಲಸ ಕಿತ್ತುಕೊಳ್ಳಬೇಡಿ’; ಮಂಜು ಪಾವಗಡಗೆ ಸುದೀಪ್ ಹೀಗೆ ಹೇಳಿದ್ದೇಕೆ?​

ಬಿಗ್​ ಬಾಸ್​ ಮಿನಿ ಸೀಸನ್​ ಅಂತಿಮ ಹಂತಕ್ಕೆ ಬಂದಿದ್ದು, ಸುದೀಪ್​ ಇದನ್ನು ನಡೆಸಿಕೊಟ್ಟಿದ್ದಾರೆ. ಈ ವೇಳೆ ಕನ್ನಡ ಬಿಗ್​ ಬಾಸ್​ ಸೀಸನ್​ 8ರ ಬಹುತೇಕ ಸ್ಪರ್ಧಿಗಳು ಆಗಮಿಸಿದ್ದರು. ಮಂಜು ಕೂಡ ಹಾಜರಿ ಹಾಕಿದ್ದರು. ಸುದೀಪ್​ ಅವರ ಜತೆ ಮಂಜು ಮಾತುಕತೆ ನಡೆಸಿದ್ದಾರೆ.

‘ನನ್ನ ಕೆಲಸ ಕಿತ್ತುಕೊಳ್ಳಬೇಡಿ’; ಮಂಜು ಪಾವಗಡಗೆ ಸುದೀಪ್ ಹೀಗೆ ಹೇಳಿದ್ದೇಕೆ?​
ಮಂಜು ಪಾವಗಡ, ಕಿಚ್ಚ ಸುದೀಪ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 04, 2021 | 5:22 PM

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಸುದೀಪ್​ ಹಾಗೂ ಮಂಜು ಪಾವಗಡ ನಡುವೆ ನಡೆದ ಸಂಭಾಷಣೆ ಸಾಕಷ್ಟು ಗಮನ ಸೆಳೆದಿವೆ. ಇಬ್ಬರ ನಡುವೆ ಒಂದೊಳ್ಳೆಯ ಬಾಂಧವ್ಯ ಬೆಳೆದಿದೆ. ಇದೇ ಕಾರಣಕ್ಕೆ ಸುದೀಪ್​ ಅವರು ಮಂಜು ಕಾಲೆಳೆಯುತ್ತಿರುತ್ತಾರೆ. ಇದು ಅನೇಕ ಬಾರಿ ನಡೆದಿದೆ. ಈಗ ಸುದೀಪ್​ ಮತ್ತು ಮಂಜು ಪಾವಗಡ ಮತ್ತೆ ಬಿಗ್​ ಬಾಸ್​ ವೇದಿಕೆ ಏರಿದ್ದಾರೆ. ಇದಕ್ಕೆ ಕಾರಣವಾಗಿದ್ದು, ಬಿಗ್​ ಬಾಸ್​ ಮಿನಿ ಸೀಸನ್​. ಈ ಕಾರ್ಯಕ್ರಮ ಅಂತಿಮ ಹಂತಕ್ಕೆ ಬಂದಿದ್ದು, ಸುದೀಪ್​ ಇದನ್ನು ನಡೆಸಿಕೊಟ್ಟಿದ್ದಾರೆ. ಈ ವೇಳೆ ಕನ್ನಡ ಬಿಗ್​ ಬಾಸ್​ ಸೀಸನ್​ 8ರ ಬಹುತೇಕ ಸ್ಪರ್ಧಿಗಳು ಆಗಮಿಸಿದ್ದರು. ಮಂಜು ಕೂಡ ಹಾಜರಿ ಹಾಕಿದ್ದರು. ಸುದೀಪ್​ ಅವರ ಜತೆ ಮಂಜು ಮಾತುಕತೆ ನಡೆಸಿದ್ದಾರೆ.

‘ಮಂಜು ಹೇಗಿದ್ದೀರಿ? ಬಿಗ್​ ಬಾಸ್ ಮುಗಿಸಿದ ಒಂದು ವಾರ ಹೇಗಿತ್ತು?’ ಎಂದು ಪ್ರಶ್ನೆ ಮಾಡಿದ್ದಾರೆ ಸುದೀಪ್​. ಇದಕ್ಕೆ ಉತ್ತರಿಸಿದ ಮಂಜು ‘ಹೊಸ ಜಗತ್ತನ್ನೇ ನೋಡಿದಂತಾಗುತ್ತಿದೆ. ಮಾಧ್ಯಮಗಳಿಗೆ ಸಂದರ್ಶನ ಕೊಡುತ್ತಿರುವುದು, ನನಗೆ ಸನ್ಮಾನ ಮಾಡುತ್ತಿರುವುದು ಎಲ್ಲವೂ ಖುಷಿ ನೀಡುತ್ತಿದೆ’ ಎಂದರು. ಈ ವೇಳೆ ಮಂಜು ಕೆಂಪು ಬಣ್ಣದ ಉದ್ದನೆಯ ಕೋಟ್​ ಹಾಕಿ ಬಂದಿದ್ದರು. ಇದು ಎಲ್ಲರ ಗಮನ ಸೆಳೆಯುತ್ತಿತ್ತು. ಸುದೀಪ್​ ಕೂಡ ಇದನ್ನು ಇಷ್ಟಪಟ್ಟರು. ಅಲ್ಲದೆ, ಮಂಜು ಅವರನ್ನು ವೇದಿಕೆ ಮೇಲೆ ಕರೆದರು.

‘ಮುಂದಿನ ಯೋಜನೆಗಳು ಏನು?’ ಎಂದು ಸುದೀಪ್​ ಅವರು ಮಂಜುನ ಕೇಳಿದರು. ಮಂಜು ಸಿನಿಮಾದಲ್ಲಿ ನಟಿಸಬೇಕು ಎಂದುಕೊಂಡವರು. ಈ ಮೊದಲು ಕೂಡ ಆ ಬಗ್ಗೆ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಇದೇ ಮಾತನ್ನು ಅವರು ವೇದಿಕೆ ಮೇಲೆ ಮತ್ತೆ ಹೇಳಿದ್ದಾರೆ. ಆದರೆ, ಒಂದು ಮಾತನ್ನು ಹೆಚ್ಚಾಗಿ ಸೇರಿಸಿದ್ದಾರೆ. ‘ಸಿನಿಮಾದಲ್ಲಿ ನಟಿಸಬೇಕು ಎನ್ನುವ ಆಸೆ ಇದೆ. ಒಳ್ಳೆಯ ಪಾತ್ರಗಳನ್ನು ಮಾಡಬೇಕು. ನಿಮ್ಮಂಥ ದೊಡ್ಡ ನಟರ ಜತೆ ನಾನು ತೆರೆ ಹಂಚಿಕೊಳ್ಳಬೇಕು’ ಎಂದರು ಮಂಜು​. ಈ ಮಾತನ್ನು ಕೇಳಿದ ಕಿಚ್ಚ​, ‘ನನ್ನ ಬುಡಕ್ಕೆ ಯಾಕೆ ಕೈ ಹಾಕ್ತೀರಾ? ನೀವು ಅಲ್ಲಿ ಬರೋದು, ನನ್ನ ಕೆಲಸ ಹೋಗೋದು ಯಾಕೆ ಬೇಕು? ನಿಮ್ಮ ಡ್ರೆಸ್​ ನೋಡಿದ್ರೆ ಹಾಗೆ ಅನಿಸುತ್ತದೆ’ ಎಂದು ನಕ್ಕರು.

ಇದನ್ನೂ ಓದಿ: ಸುದೀಪ್​ ಇಲ್ಲದ ಬಿಗ್​ ಬಾಸ್ ಊಹಿಸಿಕೊಳ್ಳಲು ಸಾಧ್ಯವೇ? ಹೇಗಿರತ್ತೆ ನೋಡಿ ಸ್ಪರ್ಧಿಗಳ ಪರಿಸ್ಥಿತಿ

Manju Pavagada: ಧರ್ಮಸ್ಥಳ ಮಂಜುನಾಥನ ಆಶೀರ್ವಾದ ಪಡೆದ ಮಂಜು ಪಾವಗಡ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್