ಸುದೀಪ್​ ಇಲ್ಲದ ಬಿಗ್​ ಬಾಸ್ ಊಹಿಸಿಕೊಳ್ಳಲು ಸಾಧ್ಯವೇ? ಹೇಗಿರತ್ತೆ ನೋಡಿ ಸ್ಪರ್ಧಿಗಳ ಪರಿಸ್ಥಿತಿ

‘ಕಾರಣಾಂತರಗಳಿಂದ ಸುದೀಪ್ ಅವರು ಕೇವಲ ದೂರವಾಣಿ ಮೂಲಕ ಮಾತ್ರ ಈ ಕಾರ್ಯಕ್ರಮಕ್ಕೆ ಬರುತ್ತಾರೆ’ ಎಂದು ಅಕುಲ್​ ಬಾಲಾಜಿ ಹೇಳುತ್ತಿದ್ದಂತೆಯೇ ದೊಡ್ಮನೆಯ ಸದಸ್ಯರ ಮುಖ ಬಾಡಿಹೋಯಿತು.

ಸುದೀಪ್​ ಇಲ್ಲದ ಬಿಗ್​ ಬಾಸ್ ಊಹಿಸಿಕೊಳ್ಳಲು ಸಾಧ್ಯವೇ? ಹೇಗಿರತ್ತೆ ನೋಡಿ ಸ್ಪರ್ಧಿಗಳ ಪರಿಸ್ಥಿತಿ
ಸುದೀಪ್​ ಇಲ್ಲದ ಬಿಗ್​ ಬಾಸ್ ಊಹಿಸಿಕೊಳ್ಳಲು ಸಾಧ್ಯವೇ? ಹೇಗಿರತ್ತೆ ನೋಡಿ ಸ್ಪರ್ಧಿಗಳ ಪರಿಸ್ಥಿತಿ
Follow us
TV9 Web
| Updated By: ಮದನ್​ ಕುಮಾರ್​

Updated on: Sep 04, 2021 | 1:52 PM

ಕನ್ನಡ ಬಿಗ್​ ಬಾಸ್​ ಈವರೆಗೂ 8 ಸೀಸನ್​ಗಳನ್ನು ಯಶಸ್ವಿಯಾಗಿ ಮುಗಿಸಿದೆ. ಪ್ರತಿ ಸೀಸನ್​ನಲ್ಲೂ ಕಿಚ್ಚ ಸುದೀಪ್​ ಅವರು ನಿರೂಪಣೆಯ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಅವರ ನಿರೂಪಣೆ ಎಂದರೆ ಅಭಿಮಾನಿಗಳಿಗೆ ಸಖತ್ ಇಷ್ಟ. ಆ ಕಾರಣಕ್ಕಾಗಿಯೇ ವೀಕೆಂಡ್​ನಲ್ಲಿ ಬಿಗ್​ ಬಾಸ್​ ನೋಡುವವರ ಸಂಖ್ಯೆ ದೊಡ್ಡದಿದೆ. ವೀಕ್ಷಕರಿಗೆ ಮಾತ್ರವಲ್ಲದೆ, ಬಿಗ್​ ಬಾಸ್​ ಸ್ಪರ್ಧಿಗಳಿಗೂ ಕೂಡ ಸುದೀಪ್​ ಇದ್ದರೆ ಉತ್ಸಾಹ ಗರಿಗೆದರುತ್ತದೆ. ಒಂದು ವೇಳೆ ಈ ಶೋನಲ್ಲಿ ಸುದೀಪ್​ ಇಲ್ಲದಿದ್ದರೆ ಪರಿಸ್ಥಿತಿ ಹೇಗಿರುತ್ತದೆ? ಬಿಗ್​ ಬಾಸ್​ ಮಿನಿ ಸೀಸನ್​ನ ವೇದಿಕೆಯಲ್ಲಿ ಇಂಥದ್ದೊಂದು ಪ್ರಶ್ನೆ ಹುಟ್ಟಿಕೊಂಡಿತು.

‘ಬಿಗ್​ ಬಾಸ್​ ಕನ್ನಡ ಸೀಸನ್​ 8’ ಮುಗಿದ ಕೂಡಲೇ ಬಿಗ್​ ಬಾಸ್​ ಮಿನಿ ಸೀಸನ್​ ಆರಂಭ ಆಗಿತ್ತು. ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳ 15 ಸೆಲೆಬ್ರಿಟಿಗಳಿಗೆ ದೊಡ್ಮನೆ ಪ್ರವೇಶಿಸುವ ಅವಕಾಶ ಸಿಕ್ಕಿತ್ತು. 6 ದಿನಗಳ ಕಾಲ ಅವರೆಲ್ಲ ಬಿಗ್​ ಬಾಸ್​ ಮನೆಯಲ್ಲಿ ಕಾಲ ಕಳೆದಿದ್ದಾರೆ. ಅದರ ಫಿನಾಲೆ ಶೋಗೆ ಸುದೀಪ್ ಅವರು ನಿರೂಪಣೆ ಮಾಡುತ್ತಾರೆ ಎಂದು ಮೊದಲೇ ತಿಳಿಸಲಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ಒಂದು ಚಮಕ್​ ನೀಡಲಾಯಿತು.

‘ಕಾರಣಾಂತರಗಳಿಂದ ಸುದೀಪ್ ಅವರು ಕೇವಲ ದೂರವಾಣಿ ಮೂಲಕ ಮಾತ್ರ ಈ ಕಾರ್ಯಕ್ರಮಕ್ಕೆ ಬರುತ್ತಾರೆ’ ಎಂದು ಅಕುಲ್​ ಬಾಲಾಜಿ ಹೇಳುತ್ತಿದ್ದಂತೆಯೇ ದೊಡ್ಮನೆಯ ಸದಸ್ಯರ ಮುಖ ಬಾಡಿಹೋಯಿತು. ಫಿನಾಲೆ ವೇದಿಕೆಯಲ್ಲಿ ಸುದೀಪ್​ ಅವರನ್ನು ನೋಡಬೇಕು, ಅವರೊಂದಿಗೆ ಮಾತನಾಡಬೇಕು ಎಂದುಕೊಂಡಿದ್ದ ಎಲ್ಲ ಸ್ಪರ್ಧಿಗಳಿಗೂ ತೀವ್ರ ನಿರಾಸೆ ಆಯಿತು. ಆದರೆ ಅದು ಸ್ವಲ್ಪ ಹೊತ್ತು ಮಾತ್ರ. ಸುಮ್ಮನೆ ಪ್ರ್ಯಾಂಕ್​ ಮಾಡಲು ಹೀಗೆ ಹೇಳಲಾಗಿತ್ತು ಎಂಬುದನ್ನು ನಂತರ ತಿಳಿಸಲಾಯಿತು. ಆಗ ಬಿಗ್​ ಬಾಸ್​ ಸ್ಪರ್ಧಿಗಳ ಮುಖ ಅರಳಿತು.

ಬಿಗ್​ ಬಾಸ್​ ಮಿನಿ ಸೀಸನ್​ನ ಫಿನಾಲೆ ಎಪಿಸೋಡ್​ಗಳು ಶನಿವಾರ (ಸೆಪ್ಟೆಂಬರ್​ 4) ಮತ್ತು ಭಾನುವಾರ (ಸೆಪ್ಟೆಂಬರ್​ 5) ಮಧ್ಯಾಹ್ನ 3 ಗಂಟೆಗೆ ಪ್ರಸಾರ ಆಗುತ್ತಿವೆ. ಕಿರಣ್​ ರಾಜ್​, ಕೌಸ್ತುಭ, ಗಗನ್​ ಚಿನ್ನಪ್ಪ, ವೈಷ್ಣವಿ, ನಿರಂಜನ್ ದೇಶಪಾಂಡೆ, ಅಕುಲ್​ ಬಾಲಾಜಿ, ರಮೋಲಾ ಸೇರಿದಂತೆ ಅನೇಕರು ಈ ಮಿನಿ ಸೀಸನ್​ನಲ್ಲಿ ಪಾಲ್ಗೊಂಡಿದ್ದಾರೆ. ಅದ್ದೂರಿ ವೇದಿಕೆಯಲ್ಲಿ ಫಿನಾಲೆ ಕಾರ್ಯಕ್ರಮ ನಡೆದಿದೆ. ಸೀಸನ್​ 8ರ ಸ್ಪರ್ಧಿಗಳು ಈ ಸಂಚಿಕೆಯಲ್ಲಿ ಡ್ಯಾನ್ಸ್​, ಹಾಡಿನ ಮೂಲಕ ಭರ್ಜರಿ ಮನರಂಜನೆ ನೀಡಿದ್ದಾರೆ.

ಇದನ್ನೂ ಓದಿ:

ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದ ಸುದೀಪ್​; ಕಿಚ್ಚನ ದರ್ಶನಕ್ಕೆ ಮುಗಿಬಿದ್ದ ಫ್ಯಾನ್ಸ್​

ಕಿಚ್ಚ ಸುದೀಪ್​ ಜನ್ಮದಿನ: ಬರಬೇಡಿ ಎಂದರೂ ಮನೆ ಬಾಗಿಲಿಗೆ ಬಂದು ಕಾದ ಫ್ಯಾನ್ಸ್​

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್