ಸಿದ್ದಾರ್ಥ್​ ಶುಕ್ಲಾ ಸಾವಿನ ಬಗ್ಗೆ ನಗುತ್ತಾ ಮಾತನಾಡಿದ್ದ ಸಲ್ಮಾನ್​ ಖಾನ್​: ಶಾಕಿಂಗ್​ ವಿಡಿಯೋ ವೈರಲ್

Salman Khan | Sidharth Shukla: ಸಲ್ಮಾನ್​ ಖಾನ್​ ಆ ವಿಡಿಯೋದಲ್ಲಿ ಅಂದು ತಮಾಷೆಗೆ ಹೇಳಿದ ಮಾತುಗಳು ಇಂದು ಅಕ್ಷರಶಃ ನಿಜವಾಗಿರುವುದು ದುರಂತವೇ ಸರಿ. ಈ ವಿಡಿಯೋ ಬಗ್ಗೆ ಜನರು ಹಲವು ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಸಿದ್ದಾರ್ಥ್​ ಶುಕ್ಲಾ ಸಾವಿನ ಬಗ್ಗೆ ನಗುತ್ತಾ ಮಾತನಾಡಿದ್ದ ಸಲ್ಮಾನ್​ ಖಾನ್​: ಶಾಕಿಂಗ್​ ವಿಡಿಯೋ ವೈರಲ್
ಸಲ್ಮಾನ್​ ಖಾನ್ - ಸಿದ್ದಾರ್ಥ್​​ ಶುಕ್ಲಾ
Follow us
TV9 Web
| Updated By: ಮದನ್​ ಕುಮಾರ್​

Updated on: Sep 04, 2021 | 8:15 AM

ಹಿಂದಿ ಕಿರುತೆರೆಯಲ್ಲಿ ಖ್ಯಾತಿ ಪಡೆದಿದ್ದ ನಟ ಸಿದ್ದಾರ್ಥ್​ ಶುಕ್ಲಾ ಅವರು ಬಿಗ್ ಬಾಸ್​ ಹಿಂದಿ 13ನೇ ಸೀಸನ್​ ವಿನ್ನರ್​ ಆದ ಬಳಿಕ ದೇಶಾದ್ಯಂತ ಜನಪ್ರಿಯತೆ ಪಡೆದುಕೊಂಡಿದ್ದರು. ಸೆ.2ರಂದು ಅವರ ನಿಧನದ ಸುದ್ದಿ ಕೇಳಿ ಎಲ್ಲರಿಗೂ ಶಾಕ್​ ಆಯಿತು. ಮನೆಯಲ್ಲೇ ಅವರಿಗೆ ಹೃದಯಾಘಾತ ಆಯಿತು ಎಂದು ಹೇಳಲಾಗುತ್ತಿದೆಯಾದರೂ ಕೆಲವು ಅನುಮಾನಗಳು ಕೂಡ ಹುಟ್ಟಿಕೊಂಡಿವೆ. ಅದಕ್ಕೆಲ್ಲ ಮರಣೋತ್ತರ ಪರೀಕ್ಷೆಯ ವರದಿಯಲ್ಲೇ ಉತ್ತರ ಸಿಗಬೇಕಿದೆ. ಈ ನಡುವೆ ಸಿದ್ದಾರ್ಥ್​ ಸಾವಿನ ಬಗ್ಗೆ ಸಲ್ಮಾನ್​ ಖಾನ್​ ಅವರು ವರ್ಷಗಳ ಹಿಂದೆಯೇ ನಗುನಗುತ್ತಾ ಮಾತನಾಡಿದ್ದ ವಿಡಿಯೋ ಈಗ ವೈರಲ್​ ಆಗುತ್ತಿದೆ!

ಬಿಗ್​ ಬಾಸ್​ ನಡೆಯುತ್ತಿದ್ದ ಸಂದರ್ಭದಲ್ಲಿ ಸಿದ್ದಾರ್ಥ್​ ಶುಕ್ಲಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆ ಬಂದಿತ್ತು. ಆಗ ಶೋ ನಿರೂಪಣೆ ಮಾಡುತ್ತಿದ್ದ ಸಲ್ಮಾನ್​ ಖಾನ್​ ಅವರು ವಿಡಿಯೋ ಕಾಲ್​ ಮೂಲಕ ಮಾತನಾಡಿದ್ದರು. ಆ ಸಂದರ್ಭದಲ್ಲಿ ಸಿದ್ದಾರ್ಥ್​ರ ಸಾವಿನ ಕುರಿತು ಸಲ್ಮಾನ್​ ತಮಾಷೆ ಮಾಡಿದ್ದರು. ಆದರೆ ಅಂದು ಮಾಡಿದ ತಮಾಷೆ ಇಂದು ನಿಜವಾಗಿದೆ! ಆ ಕಾರಣದಿಂದ ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಸಲ್ಮಾನ್​ ಖಾನ್​ ಆ ವಿಡಿಯೋದಲ್ಲಿ ಅಂದು ತಮಾಷೆಗೆ ಹೇಳಿದ ಮಾತುಗಳು ಇಂದು ಅಕ್ಷರಶಃ ನಿಜವಾಗಿರುವುದು ದುರಂತವೇ ಸರಿ. ‘ಅಭಿಮಾನಿಗಳು ನಿಮ್ಮನ್ನು ಕಾಪಾಡಿದ್ದಾರೆ. ಆದರೆ ಮೇಲಿರುವ ದೇವರು ಕಾಪಾಡದಿದ್ದರೆ ಎಲ್ಲರೂ ಅಳುತ್ತಾರೆ. ಏನೇ ಅಂದರೂ ಒಳ್ಳೆಯ ಮನುಷ್ಯ ಆಗಿದ್ದ ಎನ್ನುತ್ತಾರೆ. ಕೂಗಾಡುತ್ತಿದ್ದ, ನೇರವಾಗಿ ಮಾತನಾಡುತ್ತಿದ್ದ. ಆದರೂ ಒಳ್ಳೆಯ ಮನಸ್ಸಿನ ವ್ಯಕ್ತಿ ಆಗಿದ್ದ ಅಂತ ಜನರು ಕಣ್ಣೀರು ಹಾಕುತ್ತಾರೆ’ ಎಂದು ತಮಾಷೆಯಾಗಿ ಮಾತನಾಡುತ್ತ ಸಲ್ಮಾನ್​ ಖಾನ್​ ನಕ್ಕಿದ್ದರು.

ಸಲ್ಮಾನ್​ ಮಾಡಿದ ಈ ತಮಾಷೆಗೆ ಸಿದ್ದಾರ್ಥ್​ ಶುಕ್ಲಾ ಕೂಡ ಮನಸಾರೆ ನಕ್ಕಿದ್ದರು. ‘ಕೆಲವರಿಗೆ ಬಿಗ್​ ಬಾಸ್​ ಮನೆಯಲ್ಲಿ ಪ್ರೀತಿ ಆಯಿತು. ಕೆಲವರಿಗೆ ಮದುವೆ ಆಯಿತು. ಕೆಲವರು ಬಿಗ್​ ಬಾಸ್​ ಮನೆಯಲ್ಲೇ ಸತ್ತು ಹೋಗಿಬಿಟ್ಟರು ಎನ್ನುವಂತಾಗುತ್ತದೆ’ ಎಂದು ಸಲ್ಲು ತಮಾಷೆ ಮಾಡುತ್ತ ಬಿದ್ದುಬಿದ್ದು ನಕ್ಕಿದ್ದರು. ಈ ವಿಡಿಯೋ ಬಗ್ಗೆ ಜನರು ಹಲವು ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ತಮಾಷೆಗೂ ಯಾರ ಸಾವಿನ ಬಗ್ಗೆಯೂ ಮಾತನಾಡಬೇಡಿ. ಮುಂದೊಂದು ದಿನ ಅದು ನಿಜವಾಗಬಹುದು ಎಂಬ ಕಮೆಂಟ್​ಗಳು ಬರುತ್ತಿವೆ.

ಇದನ್ನೂ ಓದಿ:

ಸಿದ್ದಾರ್ಥ್​ ಶುಕ್ಲಾ ಅನುಮಾನಾಸ್ಪದ ಸಾವು: ಗೆಳತಿ ಫೋನ್​ ಆಫ್​; ಮರಣೋತ್ತರ ಪರೀಕ್ಷೆ ವರದಿ ಮೇಲೆ ಎಲ್ಲರ ಕಣ್ಣು

ಪ್ರೇಯಸಿ ಮಡಿಲಲ್ಲೇ ಪ್ರಾಣ ಬಿಟ್ರಾ ಸಿದ್ದಾರ್ಥ್​? ಹೃದಯಾಘಾತ ಆಗೋದಕ್ಕೂ ಮುನ್ನ ನಡೆದಿದ್ದೇನು? ಇಲ್ಲಿದೆ ವಿವರ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ