ಅಕುಲ್​ ಬಾಲಾಜಿ ಆ್ಯಕ್ಷನ್ ಮೂಲಕ ತೋರಿಸಿದ ಈ ಹಾಡು ಯಾವುದು ಎಂದು ಊಹಿಸ್ತೀರಾ?

ಅಕುಲ್​ ಬಾಲಾಜಿ ನಿರೂಪಣೆ ಮೂಲಕ ಎಲ್ಲರ ಗಮನ ಸೆಳೆದವರು. ಅವರು ಬಿಗ್​ ಬಾಸ್​ ಮನೆಯಲ್ಲಿ ಸಾಕಷ್ಟು ಮನರಂಜನೆ ನೀಡುತ್ತಿದ್ದಾರೆ.

ಅಕುಲ್​ ಬಾಲಾಜಿ ಆ್ಯಕ್ಷನ್ ಮೂಲಕ ತೋರಿಸಿದ ಈ ಹಾಡು ಯಾವುದು ಎಂದು ಊಹಿಸ್ತೀರಾ?
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 03, 2021 | 9:09 PM

‘ಬಿಗ್​ ಬಾಸ್​ ಮಿನಿ ಸೀಸನ್​’ ಇದೇ ಮೊದಲ ಬಾರಿಗೆ ಪ್ರಸಾರಗೊಂಡು ಉತ್ತಮ ಪ್ರತಿಕ್ರಿಯೆ ಗಳಿಸಿಕೊಳ್ಳುತ್ತಿದೆ. ಕಲರ್ಸ್​ ಕನ್ನಡ ವಾಹಿನಿಯ ಧಾರಾವಾಹಿ ಕಲಾವಿದರು ಒಂದೆಡೆ ಸೇರಿ ಸಾಕಷ್ಟು ಮನರಂಜನೆ ನೀಡುತ್ತಿದ್ದಾರೆ. ಮನೆಯಲ್ಲಿ ನಾನಾ ರೀತಿಯ ಟಾಸ್ಕ್​ಗಳನ್ನು ನೀಡಲಾಗುತ್ತಿದೆ. ಈ ಮಧ್ಯೆ ಅಕುಲ್​ ಬಾಲಾಜಿ ಆ್ಯಕ್ಷನ್​ ಮೂಲಕ ತೋರಿಸಿದ ಜನಪ್ರಿಯ ಹಾಡನ್ನು ಗೆಸ್​ ಮಾಡೋಕೆ ಮನೆಯ ಅನೇಕರು ಸೋತಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಸೆಲೆಬ್ರಿಟಿಗಳು ಆರು ದಿನ ಇದ್ದು ಬಂದಿದ್ದಾರೆ. ಅದನ್ನು ಟಿವಿಯಲ್ಲಿ ಕಳೆದ ಕೆಲ ವಾರಗಳಿಂದ ಪ್ರಸಾರ ಮಾಡಲಾಗುತ್ತಿದೆ. ಸುದೀಪ್​ ಜತೆ ಸ್ಪರ್ಧಿಗಳು ಸಂವಾದ ನಡೆಸಿದ ಕಾರ್ಯಕ್ರಮ ಈ ವಾರಾಂತ್ಯದಲ್ಲಿ ಪ್ರಸಾರವಾಗಲಿದೆ. ಇದಕ್ಕಾಗಿ ಅಭಿಮಾನಿಗಳು ಕಾದು ಕೂತಿದ್ದಾರೆ. ಈ ಮಧ್ಯೆ ಮನೆ ಮಂದಿ ಸಾಕಷ್ಟು ಮನರಂಜನೆ ನೀಡುತ್ತಿದ್ದಾರೆ.

ಅಕುಲ್​ ಬಾಲಾಜಿ ನಿರೂಪಣೆ ಮೂಲಕ ಎಲ್ಲರ ಗಮನ ಸೆಳೆದವರು. ಅವರು ಬಿಗ್​ ಬಾಸ್​ ಮನೆಯಲ್ಲಿ ಸಾಕಷ್ಟು ಮನರಂಜನೆ ನೀಡುತ್ತಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಹಾಡುಗಳ ಹೆಸರನ್ನು ಆ್ಯಕ್ಟಿಂಗ್​ ಮಾಡಿ ತೋರಿಸಬೇಕಿತ್ತು. ಈ ವೇಳೆ ಅಕುಲ್​ ಹಾಡೊಂದನ್ನು ಆ್ಯಕ್ಟ್​ ಮಾಡಿ ತೋರಿಸಿದ್ದರು. ಮನೆಯ ಅನೇಕರಿಗೆ ಇದು ಯಾವ ಹಾಡು ಎಂದು ಪತ್ತೆ ಹಚ್ಚೋಕೆ ಸಾಧ್ಯವಾಗಿಲ್ಲ. ಕೆಲವರು ಈ ಹಾಡು ಯಾವುದು ಎಂದು ಪತ್ತೆ ಹಚ್ಚೋಕೆ ಒದ್ದಾಡಿದರು.

ಆಗ ವೈಷ್ಣವಿ ಅವರು ಈ ಹಾಡು ಯಾವುದು ಎಂಬುದನ್ನು ಕಂಡು ಹಿಡಿದರು. ‘ಯಮ್ಮೋ ಯಮ್ಮೋ ನೋಡ್ದೆ..’ ಹಾಡು ಇದು ಎಂದರು. ಅಕುಲ್​ ಹೌದು ಎಂದು ಒಪ್ಪಿಕೊಂಡರು.

ಕಿಚ್ಚ ಸುದೀಪ್​ ನಿರೂಪಣೆ ಮಾಡಲಿರುವ ಎಪಿಸೋಡ್​ ನೋಡೋಕೆ ಅಭಿಮಾನಿಗಳು ಕಾದು ಕೂತಿದ್ದಾರೆ. ಸೀರಿಯಲ್​ ಕಲಾವಿದರ ಜತೆ ಅವರ ಸಂವಾದ ಮಜವಾಗಿತ್ತು ಎಂಬುದು ಈಗಾಗಲೇ ಪ್ರೋಮೋಗಳ ಮೂಲಕ ಸಾಬೀತಾಗಿದೆ. ಶನಿವಾರ (ಸೆಪ್ಟೆಂಬರ್​ 4) ಹಾಗೂ ಭಾನುವಾರ (ಸೆಪ್ಟೆಂಬರ್​ 5) ಮಧ್ಯಾಹ್ನ 3 ಗಂಟೆಗೆ ಈ ಶೋ ಪ್ರಸಾರವಾಗಲಿದೆ.

ಇದನ್ನೂ ಓದಿ: ನಿದ್ರೆಯಲ್ಲಿ ಹುಡುಗಿ ಹೆಸರು ಹೇಳಿ ಹೆಂಡತಿ ಬಳಿ ಸಿಕ್ಕಿ ಬಿದ್ದಿದ್ದ ಅಕುಲ್​ ಬಾಲಾಜಿ; ನಂತರ ಉಳಿಸಿದ್ದು ಯಾರು?

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ