AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಬಿಸಿಯಲ್ಲಿ ಗೆದ್ದು ಲಕ್ಷಾಧಿಪತಿಯಾದ ರಾಜಸ್ಥಾನದ ಸರ್ಕಾರಿ ಶಾಲಾ ಶಿಕ್ಷಕಿ ಆಯೆಷಾ; ಪ್ರಶಸ್ತಿಯ ಮೊತ್ತವನ್ನು ಏನು ಮಾಡುತ್ತಾರಂತೆ?

Amitabh Bachchan: ರಾಜಸ್ಥಾನದ ಭರತ್​ಪುರದ ಸರ್ಕಾರಿ ಶಾಲಾ ಶಿಕ್ಷಕಿಯಾದ ಆಯೆಷಾ, ಅಮಿತಾಭ್ ನಡೆಸಿಕೊಡುವ ಕೆಬಿಸಿಯ ಹಾಟ್​ಸೀಟ್​ನಲ್ಲಿ ಕುಳಿತು ಲಕ್ಷಾಧಿಪತಿಯಾಗಿದ್ದಾರೆ. ಇದೇ ವೇಳೆ ಅವರು ತಮ್ಮ ಶಾಲೆ, ಹಳ್ಳಿ, ಮನೆಯ ಕುರಿತು ಹಲವು ಕುತೂಹಲಕರ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಕೆಬಿಸಿಯಲ್ಲಿ ಗೆದ್ದು ಲಕ್ಷಾಧಿಪತಿಯಾದ ರಾಜಸ್ಥಾನದ ಸರ್ಕಾರಿ ಶಾಲಾ ಶಿಕ್ಷಕಿ ಆಯೆಷಾ; ಪ್ರಶಸ್ತಿಯ ಮೊತ್ತವನ್ನು ಏನು ಮಾಡುತ್ತಾರಂತೆ?
ಆಯೆಷಾ, ಅಮಿತಾಭ್ ಬಚ್ಚನ್
TV9 Web
| Edited By: |

Updated on:Sep 03, 2021 | 10:08 AM

Share

ಅಮಿತಾಭ್ ಬಚ್ಚನ್ ನಡೆಸಿಕೊಡುತ್ತಿರುವ ಕೌನ್ ಬನೇಗಾ ಕರೋಡ್​ಪತಿ ಹಲವು ಅಭೂತಪೂರ್ವ ಕ್ಷಣಗಳಿಗೆ ಸಾಕ್ಷಿಯಾಗುತ್ತದೆ. ಹಾಟ್​ಸೀಟ್​ನಲ್ಲಿ ಕುಳಿತ ಸ್ಪರ್ಧಿಗಳ ಅಸಂಖ್ಯ ಕನಸುಗಳಿಗೆ ಜೀವ ತುಂಬಿ, ಬದುಕಿನ ದಿಕ್ಕನ್ನೇ ಬದಲಿಸಿದ ಉದಾಹರಣೆಗಳು ಈ ಹಿಂದೆ ಕೆಬಿಸಿ ಇತಿಹಾಸದಲ್ಲಿ ದಾಖಲಾಗಿವೆ. ಇತ್ತೀಚಿನ ಎಪಿಸೋಡ್​ ಕೂಡ ಇಂಥದ್ದೇ ಒಂದು ಸುಂದರ ಕ್ಷಣಕ್ಕೆ ಸಾಕ್ಷಿಯಾಗಿದೆ. ರಾಜಸ್ಥಾನದ ಭರತ್​ಪುರದ ಸರ್ಕಾರಿ ಶಾಲಾ ಶಿಕ್ಷಕಿಯಾದ ಆಯೆಷಾ, ಹಾಟ್​ಸೀಟ್​ನಲ್ಲಿ ಕುಳಿತು ಲಕ್ಷಾಧಿಪತಿಯಾಗಿದ್ದಾರೆ. 

ಆಯೆಷಾ ತಮ್ಮ ಶಾಲೆಯಲ್ಲಿ ಹತ್ತನೇ ತರಗತಿಯವರೆಗಿನ ಮಕ್ಕಳಿಗೆ ಜೀವಶಾಸ್ತ್ರವನ್ನು(Biology) ಕಲಿಸುತ್ತಾರೆ. ಬಿಗ್​​ಬಿ ಹಾಟ್​ಸೀಟ್​ಗೆ ಆಯೆಷಾ ಆಯ್ಕೆಯಾಗಿರುವುದನ್ನು ತಿಳಿಸಿದಾಗ ಆಕೆ ಭಾವುಕರಾದರು. ನಂತರ ಅವರ ಊರಿನ ಸಾಮಾಜಿಕ ಪರಿಸ್ಥಿತಿಯನ್ನು ತೆರೆದಿಟ್ಟ ಅವರು, ಅಲ್ಲಿನ ಲಿಂಗಾಧಾರಿತ ತಾರತಮ್ಯವನ್ನು ವಿವರಿಸಿದರು. ಹತ್ತನೇ ತರಗತಿ ಆದ ನಂತರ ಹೆಣ್ಣು ಮಕ್ಕಳಿಗೆ ವಿಜ್ಞಾನ ವಿಷಯವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವೇ ಅಲ್ಲಿ ಇಲ್ಲವಂತೆ. ಅದಕ್ಕೆ ಹೆಚ್ಚು ವೆಚ್ಚವಾಗುತ್ತದೆ ಎಂಬ ಮನಸ್ಥಿತಿ ಅಲ್ಲಿ ಬೇರೂರಿರುವುದೇ ಇದಕ್ಕೆ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.

ಆಯೆಷಾ, ಪ್ರೀತಿಸಿ ಮದುವೆಯಾದ ತಮ್ಮ ದಾಂಪತ್ಯದ ಕುರಿತು ಇದೇ ಸಂದರ್ಭದಲ್ಲಿ ತಿಳಿಸಿದರು. 2003ರಲ್ಲಿ ಕೋಚಿಂಗ್ ಸಂದರ್ಭದಲ್ಲಿ ಭೇಟಿಯಾದ ನೀರಜ್​ರನ್ನು ಕಳೆದ ವರ್ಷದಲ್ಲಿ ಆಯೆಷಾ ಮದುವೆಯಾದರು. ಪ್ರೀತಿಸಿದರೂ ಮದುವೆಯಾಗಲು 17 ವರ್ಷಗಳ ಕಾಲ ಕಾಯಬೇಕಾದ ಕಾರಣವನ್ನು ತಿಳಿಸಿದ ಅವರು, ತಾವು ಮುಸ್ಲಿಂ ಕುಟುಂಬಕ್ಕೆ ಸೇರಿದ್ದು, ಪತಿ ಹಿಂದೂವಾಗಿದ್ದಾರೆ. ಆದ್ದರಿಂದ ವಿವಾಹವಾಗಲು ಇಷ್ಟು ಸಮಯ ಬೇಕಾಯಿತು ಎಂದಿದ್ಧಾರೆ.

ಕೆಬಿಸಿಯ ಪ್ರಶ್ನೋತ್ತರವನ್ನು ಬಹಳ ಆತ್ಮವಿಶ್ವಾಸದಿಂದ ಆಯೆಷಾ ಎದುರಿಸಿದರು. ಮೊದಲ ಏಳು ಪ್ರಶ್ನೆಗಳಿಗೆ ಸರಿ ಉತ್ತರವನ್ನು ನೀಡಿ ಆಯೆಷಾ ₹ 1.6 ಲಕ್ಷ ಗಳಿಸಿದರು. ಆದರೆ ಈ ವೇಳೆಗೆ ಅವರ ಎಲ್ಲಾ ಲೈಫ್ ಲೈನ್ ಖಾಲಿಯಾಗಿತ್ತು. ನಂತರದ ಪ್ರಶ್ನೆಗಳಿಗೆ ಸ್ವತಃ ಉತ್ತರಿಸಿದ ಆಯೆಷಾ, ₹ 6.4 ಲಕ್ಷ ಗಳಿಸಿದರು. ಆದರೆ, ₹ 12.5 ಲಕ್ಷದ ಹತ್ತನೇ ಪ್ರಶ್ನೆಗೆ ಅವರಿಗೆ ಉತ್ತರ ಖಚಿತವಾಗಿ ಗೊತ್ತಿರದ ಕಾರಣ, ಕ್ವಿಟ್ ಮಾಡಿದರು. ನಂತರ ನೋಡಿದಾಗ, ಅವರು ಊಹಿಸಿದ ಉತ್ತರ ಸರಿಯಾಗಿತ್ತು. ಅಂತಿಮವಾಗಿ ಆಯೆಷಾ ಖಾತೆಗೆ ₹ 6.4 ಲಕ್ಷ ಸಂದಾಯವಾಯಿತು.

ಪ್ರಶಸ್ತಿ ಗೆದ್ದ ಹಣವನ್ನು ಏನು ಮಾಡುತ್ತೀರಿ ಎಂದು ಅಮಿತಾಭ್ ಕೇಳಿದಾಗ, ತಮ್ಮ ಶಾಲೆಗೆ ಹಾಗೂ ಕೊವಿಡ್ 19 ನಿಧಿಗೆ ಒಂದಷ್ಟು ಮೊತ್ತವನ್ನು ನೀಡುತ್ತೇನೆ. ಒಂದು ವೇಳೆ ಹಣ ಉಳಿದರೆ, ಪತಿಯೊಂದಿಗೆ ಹನಿಮೂನ್​ ತೆರಳುವುದಾಗಿ ಆಯೆಷಾ ನಕ್ಕರು.

ಕೆಬಿಸಿಯಲ್ಲಿ ಇಂದು ಬಿಗ್​ಬಿಯೊಂದಿಗೆ ವೀರೇಂದ್ರ ಸೆಹ್ವಾಗ್ ಹಾಗೂ ಸೌರವ್ ಗಂಗೂಲಿ ಭಾಗವಹಿಸಿದ್ದ ಕಾರ್ಯಕ್ರಮ ಪ್ರಸಾರವಾಗಲಿದೆ.

ಇದನ್ನೂ ಓದಿ:

ಪ್ರೇಯಸಿ ಮಡಿಲಲ್ಲೇ ಪ್ರಾಣ ಬಿಟ್ರಾ ಸಿದ್ದಾರ್ಥ್​? ಹೃದಯಾಘಾತ ಆಗೋದಕ್ಕೂ ಮುನ್ನ ನಡೆದಿದ್ದೇನು? ಇಲ್ಲಿದೆ ವಿವರ

ಸಿದ್ದಾರ್ಥ್​ ಶುಕ್ಲಾ ಅನುಮಾನಾಸ್ಪದ ಸಾವು: ಗೆಳತಿ ಫೋನ್​ ಆಫ್​; ಮರಣೋತ್ತರ ಪರೀಕ್ಷೆ ವರದಿ ಮೇಲೆ ಎಲ್ಲರ ಕಣ್ಣು

(A government school teacher Ayesha from Rajasthan won Rs 6 4L in KBC 13)

Published On - 10:00 am, Fri, 3 September 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್