ಸಿದ್ದಾರ್ಥ್​ ಶುಕ್ಲಾ ಅನುಮಾನಾಸ್ಪದ ಸಾವು: ಗೆಳತಿ ಫೋನ್​ ಆಫ್​; ಮರಣೋತ್ತರ ಪರೀಕ್ಷೆ ವರದಿ ಮೇಲೆ ಎಲ್ಲರ ಕಣ್ಣು

ಸಿದ್ದಾರ್ಥ್ ಶುಕ್ಲಾ ನಿಧನದ ಸುದ್ದಿ ಕೇಳಿ ಅವರ ಆಪ್ತ ಸ್ನೇಹಿತೆ ಶೆಹನಾಜ್​ ಗಿಲ್​ ಮಾನಸಿಕವಾಗಿ ಕುಸಿದು ಹೋಗಿದ್ದಾರೆ. ಹಾಗಾಗಿ ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆಗಳು ಇನ್ನೂ ನಡೆಯುತ್ತಿವೆ.

ಸಿದ್ದಾರ್ಥ್​ ಶುಕ್ಲಾ ಅನುಮಾನಾಸ್ಪದ ಸಾವು: ಗೆಳತಿ ಫೋನ್​ ಆಫ್​; ಮರಣೋತ್ತರ ಪರೀಕ್ಷೆ ವರದಿ ಮೇಲೆ ಎಲ್ಲರ ಕಣ್ಣು
ಸಿದ್ದಾರ್ಥ್​​ ಶುಕ್ಲಾ - ಶೆಹನಾಜ್​ ಗಿಲ್​
Follow us
TV9 Web
| Updated By: ಮದನ್​ ಕುಮಾರ್​

Updated on: Sep 03, 2021 | 8:59 AM

ಬಿಗ್ ಬಾಸ್​ ಹಿಂದಿ 13ನೇ ಸೀಸನ್​ ವಿನ್ನರ್​ ಸಿದ್ದಾರ್ಥ್ ​ಶುಕ್ಲಾ ಗುರುವಾರ (ಸೆ.2) ಮುಂಜಾನೆ ನಿಧನರಾದರು. ಹೃದಯಾಘಾತದಿಂದ ಅವರು ಕೊನೆಯುಸಿರು ಎಳೆದರು ಎಂದು ಹೇಳಲಾಗಿದೆ. ಆದರೆ ಕೆಲವರು ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಸಿದ್ದಾರ್ಥ್ ಅವರಿಗೆ 40 ವರ್ಷ ವಯಸ್ಸಾಗಿತ್ತು. ಬುಧವಾರ ರಾತ್ರಿ ಮಲಗುವಾಗು ಅವರು ಯಾವುದೋ ಔಷಧಿ ಸೇವಿಸಿದ್ದರು. ಆದರೆ ಗುರುವಾರ ಬೆಳಗ್ಗೆಯೊಳಗೆ ಅವರು ನಿಧನರಾಗಿದ್ದಾರೆ ಎಂದು ಮುಂಬೈನ ಕೂಪರ್​ ಆಸ್ಪತ್ರೆ ಮೂಲಗಳು ತಿಳಿಸಿವೆ. ಈಗ ಮರಣೋತ್ತರ ಪರೀಕ್ಷೆಯ ವರದಿಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಈ ಘಟನೆ ಬಳಿಕ ಸಿದ್ದಾರ್ಥ್ ​ ಗೆಳತಿ ಶೆಹನಾಜ್ ಗಿಲ್​ ಮೊಬೈಲ್​ ಫೋನ್​ ಸ್ವಿಚ್​ಆಫ್​ ಆಗಿದೆ!

ಸಿದ್ದಾರ್ಥ್ ನಿಧನದ ಸುದ್ದಿ ಕೇಳಿ ಅವರ ಆಪ್ತ ಸ್ನೇಹಿತೆ ಶೆಹನಾಜ್​ ಗಿಲ್​ ಮಾನಸಿಕವಾಗಿ ಕುಸಿದು ಹೋಗಿದ್ದಾರೆ. ಹಾಗಾಗಿ ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಅವರ ಮೊಬೈಲ್​ ಫೋನ್​ ಸ್ವಿಚ್​ ಆಫ್​ ಆಗಿದೆ. ಇನ್ನೂ ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆಗಳು ನಡೆಯುತ್ತಿವೆ. ಆಸ್ಪತ್ರೆಯವರು ಮೃತದೇಹವನ್ನು ನೀಡಿದ ಬಳಿಕ ಇಂದು (ಸೆ.3) ಅಂತ್ಯ ಸಂಸ್ಕಾರ ನಡೆಯಲಿದೆ.

ಸಿದ್ದಾರ್ಥ್​-ಶೆಹನಾಜ್​ ನಡುವೆ ಇತ್ತು ಆಪ್ತತೆ:

ಬಿಗ್​ ಬಾಸ್​ ಸೀಸನ್​ 13ರಲ್ಲಿ ಶೆಹನಾಜ್​ ಗಿಲ್​ ಮತ್ತು ಸಿದ್ದಾರ್ಥ್​ ಶುಕ್ಲಾ ಜೊತೆಯಾಗಿ ಸ್ಪರ್ಧಿಸಿದ್ದರು. ಬಿಗ್​ ಬಾಸ್​ ಮನೆಯಲ್ಲಿ ಇದ್ದಷ್ಟು ದಿನ ಅವರಿಬ್ಬರು ಜೊತೆಯಾಗಿ ಹೆಚ್ಚು ಕಾಲ ಕಳೆಯುತ್ತಿದ್ದರು. ದೊಡ್ಮನೆಯಿಂದ ಹೊರಬಂದ ಬಳಿಕವೂ ಅವರ ನಡುವಿನ ಗೆಳೆತನ ಮುಂದುವರಿದಿತ್ತು. ಇತ್ತೀಚೆಗೆ ಹಲವು ಬಾರಿ ಅವರು ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದರು. ಕೆಲವು ರಿಯಾಲಿಟಿ ಶೋಗಳಲ್ಲಿ ಜೊತೆಯಾಗಿ ಪರ್ಫಾಮ್​ ಮಾಡಿದ್ದರು. ಒಂದೆರಡು ಮ್ಯೂಸಿಕ್​ ವಿಡಿಯೋಗಳಲ್ಲೂ ಅವರು ಜೋಡಿ ಆಗಿದ್ದರು. ಆದರೆ ಈಗ ಗೆಳೆಯನನ್ನು ಕಳೆದುಕೊಂಡು ಶೆಹನಾಜ್​ ಒಂಟಿ ಆಗಿದ್ದಾರೆ.

ಶೆಹನಾಜ್​ಗೆ ಧೈರ್ಯ ತುಂಬುತ್ತಿರುವ ಕುಟುಂಬ:

ಮಾಧ್ಯಮವೊಂದಕ್ಕೆ ಅವರ ತಂದೆ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಈಗ ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಆಗಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಶೆಹನಾಜ್​ ಜೊತೆ ಮಾತನಾಡಿದ್ದೇನೆ. ಆಕೆಯ ಪರಿಸ್ಥಿತಿ ಚೆನ್ನಾಗಿಲ್ಲ. ಅವಳ ಜೊತೆ ಇರಲು ನನ್ನ ಮಗ ಈಗ ಮುಂಬೈಗೆ ತೆರಳುತ್ತಿದ್ದಾನೆ. ನಂತರ ನಾನು ಕೂಡ ಅಲ್ಲಿಗೆ ಹೋಗುತ್ತೇನೆ’ ಎಂದು ಶೆಹನಾಜ್​ ತಂದೆ ಹೇಳಿದ್ದಾರೆ. ಈವರೆಗೂ ಶೆಹನಾಜ್​ ಗಿಲ್​ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ:

ಸಿದ್ಧಾರ್ಥ್​ ಶುಕ್ಲಾದು ಸಹಜ ಸಾವೇ? ಮುಂಬೈ ಪೊಲೀಸರಿಗೆ ಕುಟುಂಬದವರು ಹೇಳಿದ್ದೇನು?

ಸಿದ್ಧಾರ್ಥ್​ ಶುಕ್ಲಾ ಜೊತೆ ಕೆಲಸ ಮಾಡಿದ್ದ ಸಂಜನಾ ಗಲ್ರಾನಿ; ಜೀವನ ಇಷ್ಟೇನಾ ಎಂದ ನಟಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ