ಪ್ರಿಯಾಂಕಾ ಜೊತೆಗಿನ ಕಪ್ಪು ಬಿಳುಪು ಚಿತ್ರ ಹಂಚಿಕೊಂಡ ನಿಕ್; ತಾರಾ ಜೋಡಿಯ ಪ್ರೀತಿಗೆ ಅಭಿಮಾನಿಗಳು ಫಿದಾ

Priyanka Chopra: ಬಾಲಿವುಡ್ ಹಾಗೂ ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಾಸ್ ಈರ್ವರ ಚಿತ್ರವೊಂದನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಪ್ರಿಯಾಂಕಾ ಜೊತೆಗಿನ ಕಪ್ಪು ಬಿಳುಪು ಚಿತ್ರ ಹಂಚಿಕೊಂಡ ನಿಕ್; ತಾರಾ ಜೋಡಿಯ ಪ್ರೀತಿಗೆ ಅಭಿಮಾನಿಗಳು ಫಿದಾ
ನಿಕ್ ಜೋನಾಸ್ ಹಂಚಿಕೊಂಡ ಚಿತ್ರ (ಕೃಪೆ: ನಿಕ್ ಜೋನಾಸ್/ ಇನ್ಸ್ಟಾಗ್ರಾಂ)
Follow us
TV9 Web
| Updated By: shivaprasad.hs

Updated on: Sep 03, 2021 | 12:22 PM

ಬಾಲಿವುಡ್ ಹಾಗೂ ಹಾಲಿವುಡ್​ನಲ್ಲಿ ಮಿಂಚುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಪತಿ ಗಾಯಕ ನಿಕ್ ಜೋನಾಸ್ ಜೊತೆಗಿನ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ನಿಕ್ ಪತ್ನಿಯೊಂದಿಗಿನ ಸುಂದರವಾದ ಕಪ್ಪು ಬಿಳುಪಿನ ಚಿತ್ರವೊಂದನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಅದನ್ನು ನೋಡಿ ಮನಸೋತಿದ್ದಾರೆ. ಚಿತ್ರಕ್ಕೆ ಎಮೋಜಿಯ ಕ್ಯಾಪ್ಶನ್ ಕೂಡ ನೀಡುರುವ ಅವರು, ಹೃದಯದ ಚಿತ್ರವನ್ನು ಹಾಕಿಕೊಂಡಿದ್ದಾರೆ. ಜೊತೆಗೆ ಜೋನಾಸ್ ಸಹೋದರರ ನೂತನ ಆಲ್ಬಂನ ಹೆಸರಾದ ‘ರಿಮೆಂಬರ್ ದಿ ನೇಮ್’ನ ಹ್ಯಾಶ್ ಟ್ಯಾಗ್ ಹಾಕಿಕೊಂಡಿದ್ದಾರೆ.

ಪ್ರಿಯಾಂಕಾ ಹಾಗೂ ನಿಕ್ ಅವರ ಈ ಕಪ್ಪು ಬಿಳುಪಿನ ಚಿತ್ರಕ್ಕೆ ಅಭಿಮಾನಿಗಳು ನಾನಾವಿಧವಾಗಿ ಕಾಮೆಂಟ್ ಮಾಡಿ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ‘ನೀವಿಬ್ಬರು ಹಂಚಿಕೊಳ್ಳುವ ಚಿತ್ರಗಳು ನೈಜ ಪ್ರೀತಿಯನ್ನು ಬಿಂಬಿಸುತ್ತವೆ’ ಎಂದು ಓರ್ವರು ಕಾಮೆಂಟ್ ಮಾಡಿದ್ದರೆ, ಮತ್ತೋರ್ವರು ‘ಎಷ್ಟು ಚಂದನೆಯ ಜೋಡಿ’ ಎಂದು ಬರೆದಿದ್ದಾರೆ.

ನಿಕ್ ಹಂಚಿಕೊಂಡ ಚಿತ್ರ:

View this post on Instagram

A post shared by Nick Jonas (@nickjonas)

ಇತ್ತೀಚೆಗಷ್ಟೇ ಪ್ರಿಯಾಂಕಾ ಪತಿಯೊಂದಿಗಿನ ಒಂದು ಚಿತ್ರವನ್ನು ಹಂಚಿಕೊಂಡಿದ್ದರು. ಸಖತ್ ಬೋಲ್ಡ್ ಆಗಿದ್ದ ಈ ಚಿತ್ರ ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದರು. ‘ಸ್ನಾಕ್’ ಎಂದು ಕ್ಯಾಪ್ಶನ್ ನೀಡಿದ್ದ ಪ್ರಿಯಾಂಕಾರ ಈ ಚಿತ್ರಕ್ಕೆ ಸಂಬಂಧಿ ಪರಿಣಿತಿ ಚೋಪ್ರಾ ಕೂಡಾ ಅವಾಕ್ಕಾಗಿದ್ದರು. ‘ಕಣ್ಮುಚ್ಚಿಕೊಂಡು ಲೈಕ್ ಬಟನ್ ಒತ್ತುತ್ತಿದ್ದೇನೆ’ ಎಂದು ಅವರು ಹಾಸ್ಯ ಚಟಾಕಿ ಹಾರಿಸಿದ್ದರು.

ಪ್ರಿಯಾಂಕಾ ಹಂಚಿಕೊಂಡಿದ್ದ ಚಿತ್ರ:

ಪ್ರಿಯಾಂಕಾ ಲಂಡನ್​ನಲ್ಲಿ ವಾಸವಿದ್ದಾರೆ. ಬಿಡುವಾದಾಗಲೆಲ್ಲಾ ಅಮೇರಿಕಾಕ್ಕೆ ತೆರಳಿ ಪತಿಯನ್ನು ಭೇಟಿಯಾಗುತ್ತಾರೆ. ನಿಕ್ ಕೂಡ ಬಿಡುವಾದಾಗ ಲಂಡನ್​ಗೆ ಆಗಮಿಸುತ್ತಾರೆ. ಸದ್ಯ ಪ್ರಿಯಾಂಕಾ ಪತಿಯೊಂದಿಗೆ ಅಮೇರಿಕಾದಲ್ಲಿದ್ದಾರೆ. ಹಾಲಿವುಡ್ ಚಿತ್ರಗಳಲ್ಲಿ ಬ್ಯುಸಿಯಿರುವ ಪ್ರಿಯಾಂಕಾ, ಸದ್ಯದಲ್ಲೇ ಬಾಲಿವುಡ್​ಗೆ ಮರಳಲಿದ್ದಾರೆ. ಫರ್ಹಾನ್ ಅಖ್ತರ್ ನಿರ್ದೇಶಿಸಲಿರುವ ರೋಡ್ ಟ್ರಿಪ್ ಚಿತ್ರವಾದ ‘ಜೀ ಲೇ ಜರಾ’(Jee Le Zaraa)ದಲ್ಲಿ ಕತ್ರಿನಾ ಕೈಫ್ ಹಾಗೂ ಆಲಿಯಾ ಭಟ್​ರೊಂದಿಗೆ ಪ್ರಿಯಾಂಕಾ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:

Raayan Raj Sarja: ಚಿರು- ಮೇಘನಾ ಪುತ್ರನಿಗೆ ‘ರಾಯನ್ ರಾಜ್ ಸರ್ಜಾ’ ಎಂದು ನಾಮಕರಣ

ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದ ಸುದೀಪ್​; ಕಿಚ್ಚನ ದರ್ಶನಕ್ಕೆ ಮುಗಿಬಿದ್ದ ಫ್ಯಾನ್ಸ್​

(Nick Jonas shared a cute black and white photo with Priyanka Chopra)

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?