AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೌತ್​ ಸ್ಟಾರ್​ ಅಲ್ಲು ಅರ್ಜುನ್​ಗೆ ಧನ್ಯವಾದ ಹೇಳಿದ ಸಿದ್ದಾರ್ಥ್​ ಮಲ್ಹೋತ್ರಾ

‘ಶೇರ್​ಷಾ’ ಬಯೋಪಿಕ್​ ಸಾಕಷ್ಟು ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ. ಕ್ಯಾಪ್ಟನ್​ ವಿಕ್ರಮ್​ ಬಾತ್ರ ಅವರ ಜೀವನ ಆಧರಿಸಿ ಸಿದ್ಧಗೊಂಡ ಈ ಸಿನಿಮಾ ಸಿದ್ದಾರ್ಥ್​ ವೃತ್ತಿ ಜೀವನಕ್ಕೆ ಮೈಲೇಜ್​ ನೀಡಿದೆ.

ಸೌತ್​ ಸ್ಟಾರ್​ ಅಲ್ಲು ಅರ್ಜುನ್​ಗೆ ಧನ್ಯವಾದ ಹೇಳಿದ ಸಿದ್ದಾರ್ಥ್​ ಮಲ್ಹೋತ್ರಾ
ಸೌತ್​ ಸ್ಟಾರ್​ ಅಲ್ಲು ಅರ್ಜುನ್​ಗೆ ಧನ್ಯವಾದ ಹೇಳಿದ ಸಿದ್ದಾರ್ಥ್​ ಮಲ್ಹೋತ್ರಾ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Sep 03, 2021 | 3:23 PM

Share

ಸಿದ್ದಾರ್ಥ್​ ಮಲ್ಹೋತ್ರಾ ಅವರ ನಟನೆಯನ್ನು ಮೆಚ್ಚಿಕೊಂಡವರು ಸಾಕಷ್ಟು ಮಂದಿ ಇದ್ದಾರೆ. ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದಿದೆ. ಕೆಲ ಸ್ಟಾರ್​ ನಟರು ಕೂಡ ಅವರ ನಟನೆಯನ್ನು​ ಮೆಚ್ಚಿಕೊಂಡಿದ್ದಾರೆ. ಇತ್ತೀಚೆಗೆ ಟಾಲಿವುಡ್​ ಸ್ಟಾರ್​ ಅಲ್ಲು ಅರ್ಜುನ್​ ನಟ ಸಿದ್ದಾರ್ಥ್​ ಮಲ್ಹೋತ್ರಾ ಅವರನ್ನು ಪ್ರಶಂಸಿಸಿದ್ದರು. ಈಗ ಇದಕ್ಕೆ ಸಿದ್ದಾರ್ಥ್​ ಧನ್ಯವಾದ ಹೇಳಿದ್ದಾರೆ.

‘ಶೇರ್​ಷಾ’ ಬಯೋಪಿಕ್​ ಸಾಕಷ್ಟು ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ. ಕ್ಯಾಪ್ಟನ್​ ವಿಕ್ರಮ್​ ಬಾತ್ರ ಅವರ ಜೀವನ ಆಧರಿಸಿ ಸಿದ್ಧಗೊಂಡ ಈ ಸಿನಿಮಾ ಸಿದ್ದಾರ್ಥ್​ ವೃತ್ತಿ ಜೀವನಕ್ಕೆ ಮೈಲೇಜ್​ ನೀಡಿದೆ. ಈ ಸಿನಿಮಾ ವೀಕ್ಷಿಸಿದ್ದ ಅಲ್ಲು ಅರ್ಜುನ್​ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಿದ್ದಾರ್ಥ್​ ಮಲ್ಹೋತ್ರಾ ನಟನೆಯನ್ನು ಅವರು ಮನಃಪೂರ್ವಕವಾಗಿ ಹೊಗಳಿದ್ದರು.

‘ಸಂಪೂರ್ಣ ‘ಶೇರ್​​ಷಾ’ ತಂಡಕ್ಕೆ ಅಭಿನಂದನೆಗಳು. ಹೃದಯ ಮುಟ್ಟುವ ಚಿತ್ರ. ಸಿದ್ದಾರ್ಥ್​ ವೃತ್ತಿಜೀವನದಲ್ಲೇ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇಡೀ ಶೋ ಅವರದ್ದೇ. ಕಿಯಾರಾ ಕೂಡ ಅದ್ಭುತವಾಗಿ ನಟಿಸಿದ್ದಾರೆ. ಚಿತ್ರದ ಎಲ್ಲಾ ತಂತ್ರಜ್ಞರಿಗೆ ನನ್ನ ಗೌರವ’ ಎಂದಿದ್ದರು ಅಲ್ಲು.

ಈ ಟ್ವೀಟ್​​ಅನ್ನು ಸಿದ್ದಾರ್ಥ್​ ರೀ-ಟ್ವೀಟ್​ ಮಾಡಿಕೊಂಡಿದ್ದಾರೆ. ಅಲ್ಲದೆ, ಅವರು ಸಿದ್ದಾರ್ಥ್​ಗೆ ಧನ್ಯವಾದ ಹೇಳಿದ್ದಾರೆ. ಸದ್ಯ, ಈ ಟ್ವೀಟ್​ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ.

ಸಿದ್ದಾರ್ಥ್​ ಹಾಗೂ ಅಲ್ಲು ಅರ್ಜುನ್​ ಮುಂಬರುವ ಸಿನಿಮಾಗೆ ಒಂದು ಸಾಮ್ಯತೆ ಇದೆ. ಇಬ್ಬರ ಚಿತ್ರಕ್ಕೂ ರಶ್ಮಿಕಾ ನಾಯಕಿ. ಸಿದ್ದಾರ್ಥ್​ ಮಲ್ಹೋತ್ರಾ ಅಭಿನಯದ ‘ಮಿಷನ್​ ಮಜ್ನು’ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್​ ನಟನೆಯ ‘ಪುಷ್ಪ ಪಾರ್ಟ್​ 1’ಗೂ ರಶ್ಮಿಕಾ ಹೀರೋಯಿನ್.

‘ಸ್ಟುಡೆಂಟ್​ ಆಫ್​ ದಿ ಇಯರ್​’ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದ ಸಿದ್ದಾರ್ಥ್​, ನಂತರ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಅವರ ನಟನೆಯನ್ನು ಇಷ್ಟು ದೊಡ್ಡ ಮಟ್ಟಕ್ಕೆ ಹೊಗಳುವಂತೆ ಮಾಡಿದ್ದು ‘ಶೇರ್​ಷಾ’ ಸಿನಿಮಾ. ಇದಾದ ನಂತರದಲ್ಲಿ ಅವರಿಗೆ ಬರುತ್ತಿರೋ ಆಫರ್​ಗಳ ಸಂಖ್ಯೆ ಹೆಚ್ಚಿದೆ.

ಇದನ್ನೂ ಓದಿ: ಪ್ರೇಯಸಿ ಮಡಿಲಲ್ಲೇ ಪ್ರಾಣ ಬಿಟ್ರಾ ಸಿದ್ದಾರ್ಥ್​? ಹೃದಯಾಘಾತ ಆಗೋದಕ್ಕೂ ಮುನ್ನ ನಡೆದಿದ್ದೇನು? ಇಲ್ಲಿದೆ ವಿವರ

ಸೌತ್ ಹೀರೋಗಳಲ್ಲಿ ಅಲ್ಲು ಅರ್ಜುನ್​ ನಂ.1, ಯಶ್​ಗೆ 5ನೇ ಸ್ಥಾನ; ಇದು ಯಾವ​ ಹಣಾಹಣಿ?

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು