ಸೌತ್ ಹೀರೋಗಳಲ್ಲಿ ಅಲ್ಲು ಅರ್ಜುನ್​ ನಂ.1, ಯಶ್​ಗೆ 5ನೇ ಸ್ಥಾನ; ಇದು ಯಾವ​ ಹಣಾಹಣಿ?

Allu Arjun: ಅಲ್ಲು ಅರ್ಜುನ್​ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ 1.3 ಕೋಟಿ ಜನರು ಫಾಲೋ ಮಾಡುತ್ತಿದ್ದಾರೆ. ದಕ್ಷಿಣ ಭಾರತದ ಸಿನಿಮಾ ಹೀರೋಗಳ ಪಟ್ಟಿಯಲ್ಲಿ ವಿಜಯ್​ ದೇವರಕೊಂಡ 2ನೇ ಸ್ಥಾನ ಹಾಗೂ ಯಶ್​ 5ನೇ ಸ್ಥಾನದಲ್ಲಿದ್ದಾರೆ.

ಸೌತ್ ಹೀರೋಗಳಲ್ಲಿ ಅಲ್ಲು ಅರ್ಜುನ್​ ನಂ.1, ಯಶ್​ಗೆ 5ನೇ ಸ್ಥಾನ; ಇದು ಯಾವ​ ಹಣಾಹಣಿ?
ಅಲ್ಲು ಅರ್ಜುನ್​, ಯಶ್​
Follow us
TV9 Web
| Updated By: ಮದನ್​ ಕುಮಾರ್​

Updated on: Aug 31, 2021 | 9:55 AM

ಟಾಲಿವುಡ್​ ನಟ ಅಲ್ಲು ಅರ್ಜುನ್ (Allu Arjun)​ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ದಶಕಗಳಿಂದ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ಅವರ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈಗಂತೂ ಅವರು ಕೇವಲ ತೆಲುಗು ಚಿತ್ರರಂಗಕ್ಕೆ ಮಾತ್ರ ಸೀಮಿತವಲ್ಲ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿರುವ ಅವರು ‘ಪುಷ್ಪ’ (Pushpa) ಸಿನಿಮಾದ ಕೊನೇ ಹಂತದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇದರ ನಡುವೆಯೂ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹೊಸ ಸಾಧನೆ ಮಾಡಿದ್ದಾರೆ. ಬರೋಬ್ಬರಿ 13 ಮಿಲಿಯನ್​ (1.3 ಕೋಟಿ) ಫಾಲೋವರ್ಸ್​ ಹೊಂದುವ ಮೂಲಕ ದಕ್ಷಿಣ ಭಾರತದ ಹೀರೋಗಳ ಪೈಕಿ ನಂಬರ್​ ಒನ್​ ಪಟ್ಟ ಪಡೆದಿದ್ದಾರೆ.

ಅಲ್ಲು ಅರ್ಜುನ್​ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ 1.3 ಕೋಟಿ ಜನರು ಫಾಲೋ ಮಾಡುತ್ತಿದ್ದಾರೆ. ದಕ್ಷಿಣ ಭಾರತದ ಸಿನಿಮಾ ಹೀರೋಗಳ ಪಟ್ಟಿಯಲ್ಲಿ ವಿಜಯ್​ ದೇವರಕೊಂಡ ಅವರಿಗೆ 2ನೇ ಸ್ಥಾನ ಸಿಕ್ಕಿದೆ. ಅವರನ್ನು 12.9 ಮಿಲಿಯನ್​ (1.2 ಕೋಟಿ) ಜನರು ಫಾಲೋ ಮಾಡುತ್ತಿದ್ದಾರೆ. ಮಹೇಶ್​ ಬಾಬು 71 ಲಕ್ಷ​, ಪ್ರಭಾಸ್​ 69 ಲಕ್ಷ​, ಕೆಜಿಎಫ್​ ಸ್ಟಾರ್​ ಯಶ್​ 50 ಲಕ್ಷ​, ವಿಜಯ್​ ಸೇತುಪತಿ 43 ಲಕ್ಷ​, ರಾಮ್​ ಚರಣ್​ 41 ಲಕ್ಷ ಫಾಲೋವರ್ಸ್​ ಹೊಂದಿದ್ದಾರೆ.

ಅಲ್ಲು ಅರ್ಜುನ್​ ನಟನೆಯ ‘ಅಲಾ ವೈಕುಂಟಪುರಮುಲೋ’ ಸಿನಿಮಾ ಕಳೆದ ವರ್ಷ ಸೂಪರ್​ ಹಿಟ್​ ಆಗಿತ್ತು. ಹಾಡುಗಳು ಕೂಡ ದಾಖಲೆ ಬರೆದಿದ್ದವು. ಈಗ ಅವರ ‘ಪುಷ್ಪ’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ವರ್ಷ ಕ್ರಿಸ್​ಮಸ್​ ಹಬ್ಬದ ಪ್ರಯುಕ್ತ ರಿಲೀಸ್​ ಮಾಡುವುದಾಗಿ ತಿಳಿಸಲಾಗಿದೆ. ಅದಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

‘ಪುಷ್ಪ’ ಸಿನಿಮಾದಲ್ಲಿ ಅಲ್ಲು ಅರ್ಜುನ್​ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಪಾತ್ರವರ್ಗದ ಕಾರಣದಿಂದ ಈ ಚಿತ್ರ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಕನ್ನಡದ ಡಾಲಿ ಧನಂಜಯ, ಮಲಯಾಳಂ ಕಲಾವಿದ ಫಹಾದ್​ ಫಾಸಿಲ್, ಜಗಪತಿ ಬಾಬು, ಪ್ರಕಾಶ್​ ರೈ ಸೇರಿದಂತೆ ಅನೇಕ ಘಟಾನುಘಟಿ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದು, ಖ್ಯಾತ ನಿರ್ದೇಶಕ ಸುಕುಮಾರ್​ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಹಾಡುಗಳು ಬಿಡುಗಡೆಯಾಗಿ ಸೌಂಡು ಮಾಡುತ್ತಿವೆ. ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ.

ಇದನ್ನೂ ಓದಿ:

ಮಗಳ ಸಿನಿಮಾ ಶೂಟಿಂಗ್​ ನೋಡಲು ಸೆಟ್​ಗೆ ಬಂದ ಅಲ್ಲು ಅರ್ಜುನ್​ಗೆ ಖುಷಿಯೋ ಖುಷಿ

Allu Arjun: ರಾಕ್ಷಸನಾಗಿ ಅಬ್ಬರಿಸಿದ ನಟ ಅಲ್ಲು ಅರ್ಜುನ್​; ಈ ರೀತಿ ಕೋಪ ತೋರಿಸಿದ್ದು ಯಾರ ಮೇಲೆ?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ