ಮಗಳ ಸಿನಿಮಾ ಶೂಟಿಂಗ್​ ನೋಡಲು ಸೆಟ್​ಗೆ ಬಂದ ಅಲ್ಲು ಅರ್ಜುನ್​ಗೆ ಖುಷಿಯೋ ಖುಷಿ

ಮಗಳ ಸಿನಿಮಾ ಶೂಟಿಂಗ್​ ನೋಡಲು ಸೆಟ್​ಗೆ ಬಂದ ಅಲ್ಲು ಅರ್ಜುನ್​ಗೆ ಖುಷಿಯೋ ಖುಷಿ
ಮಗಳ ಸಿನಿಮಾ ಶೂಟಿಂಗ್​ ನೋಡಲು ಸೆಟ್​ಗೆ ಬಂದ ಅಲ್ಲು ಅರ್ಜುನ್​ಗೆ ಖುಷಿಯೋ ಖುಷಿ

4 ವರ್ಷದ ಪುಟಾಣಿ ಅಲ್ಲು ಅರ್ಹಾ ಶೂಟಿಂಗ್​ ಸೆಟ್​ನಲ್ಲಿ ತಂದೆ ಅಲ್ಲು ಅರ್ಜುನ್​ ಅವರ ಕ್ಯಾರವ್ಯಾನ್​ ಬಳಸುತ್ತಿದ್ದಾಳೆ. ಬಹುಕೋಟಿ ರೂ. ಬೆಲೆಬಾಳುವ ಈ ದುಬಾರಿ ವಾಹನದಲ್ಲೇ ಅರ್ಹಾ ಮೇಕಪ್​ ಮಾಡಿಕೊಳ್ಳುತ್ತಿದ್ದಾಳೆ.

TV9kannada Web Team

| Edited By: Madan Kumar

Aug 07, 2021 | 4:11 PM

ಟಾಲಿವುಡ್​ನ ಖ್ಯಾತ ನಟ ಅಲ್ಲು ಅರ್ಜುನ್ (Allu Arjun) ಅವರ ಪುತ್ರಿ ಅಲ್ಲು ಅರ್ಹಾ  (Allu Arha) ಚಿತ್ರರಂಗಕ್ಕೆ ಕಾಲಿಟ್ಟಿದ್ದಾಳೆ. ಮೊದಲ ಸಿನಿಮಾದಲ್ಲಿ ನಟಿ ಸಮಂತಾ ಅಕ್ಕಿನೇನಿ (Samantha Akkineni) ಜೊತೆ ಅಭಿನಯಿಸುವ ಅವಕಾಶ ಅರ್ಹಾಗೆ ಸಿಕ್ಕಿದೆ. ಇದು ಅಲ್ಲು ಅರ್ಜುನ್​ ಕುಟುಂಬದ ಎಲ್ಲರಿಗೂ ಖುಷಿ ನೀಡಿದೆ. ಈಗಾಗಲೇ ಅರ್ಹಾ ಶೂಟಿಂಗ್​ನಲ್ಲಿ ಪಾಲ್ಗೊಳ್ಳುತ್ತಿದ್ದಾಳೆ. ಇದು ಅಲ್ಲು ಅರ್ಜುನ್​ಗೆ ಹೆಚ್ಚು ಎಗ್ಸೈಟ್​ ಆಗಿರುವಂತಹ ವಿಚಾರ. ಹಾಗಾಗಿ ತಮ್ಮ ಸಿನಿಮಾ ಕೆಲಸಗಳ ನಡುವೆ ಬಿಡುವು ಮಾಡಿಕೊಂಡಿರುವ ಅವರು ಮಗಳ ಶೂಟಿಂಗ್​ ನೋಡಲು ಚಿತ್ರೀಕರಣದ ಸೆಟ್​ಗೆ ತೆರಳಿದ್ದಾರೆ. ಇದು ಪುತ್ರಿಯ ಮೊದಲ ಸಿನಿಮಾ ಆದ್ದರಿಂದ ಅಲ್ಲು ಅರ್ಜುನ್​ಗೆ ಖುಷಿಯೋ ಖುಷಿ.

ಸಮಂತಾ ಅಕ್ಕಿನೇನಿ ಮುಖ್ಯಭೂಮಿಕೆ ನಿಭಾಯಿಸುತ್ತಿರುವ ‘ಶಾಕುಂತಲಂ’ ಚಿತ್ರದಲ್ಲಿ ಶಕುಂತಲೆಯ ಪುತ್ರ ಭರತನ ಪಾತ್ರದಲ್ಲಿ ಅಲ್ಲು ಅರ್ಹಾ ನಟಿಸುತ್ತಿದ್ದಾಳೆ. ಇದು ವಿಶೇಷ ಪಾತ್ರ ಆಗಿರುವುದರಿಂದ ತಮ್ಮ ಪುತ್ರಿ ಹೇಗೆ ನಟಿಸುತ್ತಾಳೆ ಎಂಬುದನ್ನು ತಿಳಿದುಕೊಳ್ಳುವ ಕೌತುಕ ಅಲ್ಲು ಅರ್ಜುನ್​ ಅವರದ್ದು. ಅರ್ಹಾ ಕ್ಯಾಮೆರಾ ಎದುರಿಸುತ್ತಿರುವಾಗ ಮಾನಿಟರ್​ ಮುಂದೆ ಕುಳಿತು ಮಗಳ ಅಭಿನಯವನ್ನು ನೋಡಿ ಅವರು ಖುಷಿಪಟ್ಟಿದ್ದಾರೆ. ಆ ಕ್ಷಣದ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಅಲ್ಲು ಅರ್ಹಾ ಶೂಟಿಂಗ್​ ಸೆಟ್​ನಲ್ಲಿ ತಂದೆಯ ಕ್ಯಾರವ್ಯಾನ್​ ಬಳಸುತ್ತಿದ್ದಾಳೆ. ಬಹುಕೋಟಿ ರೂ. ಬೆಲೆಬಾಳುವ ಈ ದುಬಾರಿ ವಾಹನದಲ್ಲೇ ಅರ್ಹಾ ಮೇಕಪ್​ ಮಾಡಿಕೊಳ್ಳುತ್ತಿದ್ದಾಳೆ. ಶೂಟಿಂಗ್​ ನಡುವಿನ ಬ್ರೇಕ್​ನಲ್ಲಿ ಇದರಲ್ಲೇ ಆಕೆ ಕಾಲ ಕಳೆಯುತ್ತಿದ್ದಾಳೆ. ಒಟ್ಟಿನಲ್ಲಿ ಮಗಳ ಸಿನಿಮಾ ಶೂಟಿಂಗ್​ ನೋಡುತ್ತ ಅಲ್ಲು ಅರ್ಜುನ್​ ಮತ್ತು ಅವರ ಪತ್ನಿ ಸ್ನೇಹಾ ರೆಡ್ಡಿ ಮುಖ ಖುಷಿಯಿಂದ ಅರಳಿದೆ.

ಈ ಸಿನಿಮಾಗೆ ಖ್ಯಾತ ನಿರ್ದೇಶಕ ಗುಣಶೇಖರ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. ಕಾಳಿದಾಸ ಬರೆದ ಶಕುಂತಲೆ ನಾಟಕವನ್ನು ಆಧರಿಸಿ ಈ ಚಿತ್ರ ತಯಾರಾಗುತ್ತಿದೆ. ‘ಶಾಕುಂತಲಂ ಸಿನಿಮಾ ಮೂಲಕ ಅಲ್ಲು ಕುಟುಂಬದ ನಾಲ್ಕನೇ ತಲೆಮಾರಿನ ಅಲ್ಲು ಅರ್ಹಾ ಚಿತ್ರಕ್ಕೆ ಕಾಲಿಡುತ್ತಿರುವುದು ನಮಗೆ ಹೆಮ್ಮೆಯ ಕ್ಷಣ. ಇಂಥ ಸುಂದರ ಸಿನಿಮಾದಲ್ಲಿ ನನ್ನ ಮಗಳಿಗೆ ಚೊಚ್ಚಲ ಅವಕಾಶ ನೀಡಿರುವುದಕ್ಕೆ ನಿರ್ದೇಶಕ ಗುಣಶೇಖರ್ ಅವರಿಗೆ ಧನ್ಯವಾದಗಳು. ನನ್ನ ಮಗಳು ಮೊದಲ ಸಿನಿಮಾದಲ್ಲೇ ಸಮಂತಾ ಅಕ್ಕಿನೇನಿ ಜೊತೆ ಅಭಿನಯಿಸಿದ್ದನ್ನು ನೋಡಲು ಖುಷಿ ಆಗುತ್ತದೆ. ಶಾಕುಂತಲಂ ತಂಡದ ಎಲ್ಲ ಕಲಾವಿದರು ಮತ್ತು ತಾಂತ್ರಿಕ ವರ್ಗಕ್ಕೆ ನನ್ನ ಶುಭ ಹಾರೈಕೆಗಳು’ ಎಂದು ಅಲ್ಲು ಅರ್ಜುನ್​ ಅವರು ಕಳೆದ ತಿಂಗಳು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದರು.

ಇದನ್ನೂ ಓದಿ:

Pushpa: ‘ಪುಷ್ಪ’ ರಿಲೀಸ್​ ಡೇಟ್​ ಜೊತೆಗೆ ಮತ್ತೊಂದು ಮುಖ್ಯ ವಿಚಾರಕ್ಕೆ ಸ್ಪಷ್ಟನೆ ನೀಡಿದ ಅಲ್ಲು ಅರ್ಜುನ್​

‘ಅವರು ಪರ್ಫೆಕ್ಷನಿಸ್ಟ್​’; ಅಲ್ಲು ಅರ್ಜುನ್​ ಬಗ್ಗೆ ಡಾಲಿ ಧನಂಜಯ ಮನಸ್ಸಿನ ಮಾತು

Follow us on

Related Stories

Most Read Stories

Click on your DTH Provider to Add TV9 Kannada