ಸೆಟ್ನಲ್ಲೇ ತಲೆತಿರುಗಿ ಬಿದ್ದ ಬಾಲಿವುಡ್ ನಟಿ; ಸಮಸ್ಯೆಗೆ ಕಾರಣ ಬಿಚ್ಚಿಟ್ಟ ವೈದ್ಯರು
ನುಸ್ರತ್ ಹೋಟೆಲ್ ಒಂದರಲ್ಲಿ ತಂಗಿದ್ದರು. ಸಿನಿಮಾ ಸೆಟ್ಗೆ ಸಮೀಪವಾಗುತ್ತದೆ ಎನ್ನುವ ಕಾರಣಕ್ಕೆ ನುಸ್ರತ್ ಈ ಆಯ್ಕೆ ಮಾಡಿಕೊಂಡಿದ್ದರು. ಕಳೆದ ಮೂರು ವಾರಗಳಿಂದ ನುಸ್ರತ್ ನಿರಂತರವಾಗಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.
ಬಾಲಿವುಡ್ ನಟಿ ನುಸ್ರತ್ ಬರುಚಾ ಕೈಯಲ್ಲಿ ಸದ್ಯ ಮೂರು ಚಿತ್ರಗಳಿವೆ. ‘ಚೋರಿ’ ಸಿನಿಮಾ ಶೂಟಿಂಗ್ ಪೂರ್ಣಗೊಂಡಿದೆ. ಸದ್ಯ ಅವರು ಲವ್ ರಂಜನ್ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾಗೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಈ ಚಿತ್ರದ ಶೂಟಿಂಗ್ ವೇಳೆ ನುಸ್ರತ್ ತಲೆ ತಿರುಗಿ ಬಿದ್ದಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನುಸ್ರತ್ ಹೋಟೆಲ್ ಒಂದರಲ್ಲಿ ತಂಗಿದ್ದರು. ಸಿನಿಮಾ ಸೆಟ್ಗೆ ಸಮೀಪವಾಗುತ್ತದೆ ಎನ್ನುವ ಕಾರಣಕ್ಕೆ ನುಸ್ರತ್ ಈ ಆಯ್ಕೆ ಮಾಡಿಕೊಂಡಿದ್ದರು. ಕಳೆದ ಮೂರು ವಾರಗಳಿಂದ ನುಸ್ರತ್ ನಿರಂತರವಾಗಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಆದರೆ, ಕಳೆದ ಕೆಲ ದಿನಗಳಿಂದ ಅವರಿಗೆ ನಿಶ್ಶಕ್ತಿ ಕಾಡಿತ್ತು. ಹೀಗಾಗಿ, ಎರಡು ದಿನ ಶೂಟ್ನಲ್ಲಿ ಭಾಗಿಯಾಗಿರಲಿಲ್ಲ ಎನ್ನಲಾಗಿದೆ.
ಎರಡು ಮೂರು ದಿನಗಳಲ್ಲಿ ಎಲ್ಲವೂ ಸರಿಯಾಗಬಹುದು ಎನ್ನುವುದು ನುಸ್ರತ್ ಆಲೋಚನೆ ಆಗಿತ್ತು. ಹೀಗಾಗಿ ಎರಡು ದಿನ ಬಿಟ್ಟು ಅವರು ಸೆಟ್ಗೆ ತೆರಳಿದ್ದಾರೆ. ಈ ವೇಳೆ ಅವರಿಗೆ ತಲೆ ತಿರುಗಿದೆ. ಹೀಗಾಗಿ, ಅವರನ್ನು ಮುಂಬೈನ ಹಿಂದುಜಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಕ್ತದೊತ್ತಡ 60/65ಕ್ಕೆ ಕುಸಿದಿತ್ತು ಎನ್ನಲಾಗಿದೆ.
ವೈದ್ಯರು ನುಸ್ರತ್ ದೇಹವನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಅಲ್ಲದೆ, 15 ದಿನ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಕಳೆದ ಹಲವು ದಿನಗಳಿಂದ ಅವರು ನಿರಂತರವಾಗಿ ಶೂಟಿಂಗ್ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಒತ್ತಡದಿಂದ ಈ ರೀತಿ ಆಗಿದೆ ಎಂದು ತಿಳಿದು ಬಂದಿದೆ. ಸದ್ಯ, ಸಿನಿಮಾ ಶೂಟಿಂಗ್ ನಿಲ್ಲಿಸಲಾಗಿದೆ. ಬಹುತೇಕ ದೃಶ್ಯಕ್ಕೆ ನುಸ್ರತ್ ಅಗತ್ಯವಿದೆ. ಈ ಕಾರಣಕ್ಕೆ ಚಿತ್ರೀಕರಣ ನಿಲ್ಲಿಸದೆ ಬೇರೆ ದಾರಿ ಚಿತ್ರತಂಡಕ್ಕೆ ಇಲ್ಲದಾಗಿದೆ.
ಬಾಲಿವುಡ್ನಲ್ಲಿ ನುಸ್ರತ್ ಬರುಚಾ ತಮ್ಮ ನಟನೆ ಮೂಲಕ ಛಾಪು ಮೂಡಿಸಿದ್ದಾರೆ. ‘ಸೋನು ಕೆ ಟಿಟ್ಟೂ ಕಿ ಸ್ವೀಟಿ’ ಸಿನಿಮಾ ಮೂಲಕ ಖ್ಯಾತಿ ಹೆಚ್ಚಿಸಿಕೊಂಡ ಅವರು ನಂತರ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡರು. ಅಕ್ಷಯ್ ಕುಮಾರ್ ನಟನೆಯ ರಾಮ್ಸೇತು ಸಿನಿಮಾದಲ್ಲಿ ನುಸ್ರತ್ ಬರೂಚಾ ನಟಿಸುತ್ತಿದ್ದಾರೆ. ಈ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಚೋರಿ ಸಿನಿಮಾದಲ್ಲೂ ನುಸ್ರತ್ ನಟಿಸುತ್ತಿದ್ದಾರೆ.
ಇದನ್ನೂ ಓದಿ: Bigg Boss Kannada 8 Finale: ಬಿಗ್ ಬಾಸ್ ಸೀಸನ್ 8 ವಿನ್ನರ್ ಇವರೇನಾ? ಇಲ್ಲಿದೆ ಲೆಕ್ಕಾಚಾರ