ರಸ್ತೆ ಮಧ್ಯೆ ಕೂತು ಸ್ನಾನ ಮಾಡಿದ ನಟ ಮಿಲಿಂದ್​ ಸೋಮನ್​; ವಿಡಿಯೋ ವೈರಲ್

ರಸ್ತೆ ಮಧ್ಯೆ ಕೂತು ಸ್ನಾನ ಮಾಡಿದ ನಟ ಮಿಲಿಂದ್​ ಸೋಮನ್​; ವಿಡಿಯೋ ವೈರಲ್
ನಟ ಮಿಲಿಂದ್ ಸೋಮನ್

Milind Soman: ನಟ ಮಿಲಿಂದ್ ಸೋಮನ್ ನಡುರಸ್ತೆಯಲ್ಲೇ ಕುಳಿತು ಸ್ನಾನ ಮಾಡಿದ ವಿಡಿಯೊ ಈಗ ವೈರಲ್ ಆಗಿದೆ. ಸ್ವತಃ ಮಿಲಿಂದ್ ಹಂಚಿಕೊಂಡಿರುವ ಈ ವಿಡಿಯೊಕ್ಕೆ, ‘ಚಿತ್ರೀಕರಣ ಎಷ್ಟು ಭಿನ್ನವಾದ ಅನುಭವಗಳನ್ನು ನೀಡುತ್ತದೆ’ ಎಂದು ಅವರು ಬರೆದುಕೊಂಡಿದ್ದಾರೆ.

TV9kannada Web Team

| Edited By: shivaprasad.hs

Aug 07, 2021 | 5:58 PM

ನಟ ಮಿಲಿಂದ್ ಸೋಮನ್​ಗೆ 55 ವರ್ಷವಾದರೂ ಸಹ ಯುವಕರನ್ನೂ ನಾಚಿಸುವಂತೆ ತಮ್ಮ ದೇಹವನ್ನು ಕಾಪಿಟ್ಟುಕೊಂಡಿದ್ದಾರೆ. ಫಿಟ್​ನೆಸ್ ಬಗ್ಗೆ ಅತೀವ ಕಾಳಜಿ ಹೊಂದಿರುವ ಅವರು, ಮ್ಯಾರಥಾನ್ ರನ್ನರ್ ಕೂಡಾ ಹೌದು. ತಮ್ಮ ವರ್ಕ್​ಔಟ್ ಫೊಟೊಗಳನ್ನು ಮತ್ತು ವಿಡಿಯೊಗಳನ್ನು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ನಗೆಯುಕ್ಕಿಸುವ ಟೈಮಿಂಗ್ ಹಾಗೂ ವಿಡಿಯೊಗಳಿಂದಲೂ ಮಿಲಿಂದ್ ಸದ್ದು ಮಾಡುತ್ತಿರುತ್ತಾರೆ. ಅಂಥದ್ದೇ ಒಂದು ವಿಡಿಯೊವೊಂದನ್ನು ಅವರು ಹಂಚಿಕೊಂಡಿದ್ದು, ಅದರಲ್ಲಿ ನಡು ರಸ್ತೆಯಲ್ಲೇ ಸ್ನಾನ ಮಾಡುತ್ತಿದ್ದಾರೆ. ಈಗ ಆ ವಿಡಿಯೊ ಇಂಟರ್ನೆಟ್​ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ.

ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೊದಲ್ಲಿ, ರೋಡ್ ಮಧ್ಯ ಕುಳಿತಿರುವ ಮಿಲಿಂದ್, ಬಕೆಟ್​ನಿಂದ ನೀರನ್ನು ತೆಗೆದುಕೊಂಡು ಮೈಮೇಲೆ ಹೊಯ್ದುಕೊಳ್ಳುತ್ತಿದ್ದಾರೆ. ಅತ್ಯಂತ ಜನಪ್ರಿಯ ಹಿಂದಿ ಗೀತೆ ‘ಥಂಡೆ ಥಂಡೆ ಪಾನಿ ಸೇ ನಹಾನಾ ಚಾಹಿಯೆ’ ಹಾಡನ್ನೂ ಜೊತೆಯಲ್ಲಿ ಗುನುಗಿಕೊಳ್ಳುತ್ತಾ, ಅವರು ಭರ್ಜರಿ ಸ್ನಾನ ಮಾಡಿದ್ದಾರೆ. ಅದಕ್ಕೆ ಮಜವಾದ ಅಡಿ ಬರಹವನ್ನೂ ಬರೆದಿರುವ ಅವರು, ‘‘ಬಿಸಿ ನೀರು, ತಣ್ಣನೆಯ ಮಳೆ, ಮಧ್ಯರಾತ್ರಿಯ ಮಾನ್ಸೂನ್.. ಶೂಟಿಂಗ್ ನಿಜವಾಗಲೂ ಖುಷಿಕೊಡುತ್ತದೆ. ಯಾರೆಲ್ಲಾ ನಾನು ಪುಶಪ್ಸ್ ಹೊರತಾಗಿ ಬೇರೇನು ಮಾಡುತ್ತೇನೆ ಎಂದು ಯೋಚಿಸುತ್ತಿದ್ದೀರೋ, ಅವರಿಗಿದು. ನನ್ನ ಹೊಸ ಚಿತ್ರ ಬರಲಿದೆ’’ ಎಂದು ಮಿಲಿಂದ್ ಸೋಮನ್ ಬರೆದುಕೊಂಡಿದ್ದಾರೆ.

ಮಿಲಿಂದ್ ಹಂಚಿಕೊಂಡ ವಿಡಿಯೊ ಇಲ್ಲಿದೆ:

ಈ ಮೂಲಕ ತಮ್ಮ ಹೊಸ ಚಿತ್ರದ ಸುಳಿವನ್ನೂ ಬಿಟ್ಟುಕೊಟ್ಟಿರುವ ಮಿಲಿಂದ್, ಅದರಲ್ಲಿನ ಅವರ ಪಾತ್ರ ಹೇಗಿರಲಿದೆ ಎಂಬ ಮಾಹಿತಿಯನ್ನು ನೀಡಿದಂತಾಗಿದೆ. ಮಿಲಿಂದ್ ತಮ್ಮ ಚಲನಚಿತ್ರಗಳ ವಿಚಾರಗಳಲ್ಲದೆ, ವಿವಾದಗಳಿಂದಲೂ ಆಗೀಗ ಸುದ್ದಿಯಾಗುತ್ತಿರುತ್ತಾರೆ. ಅವರ ಚಿತ್ರದ ವಿಚಾರಕ್ಕೆ ಬಂದರೆ, ‘ಬಾಜಿರಾವ್ ಮಸ್ತಾನಿ’, ‘16 ಡಿಸೆಂಬರ್’ ಸೇರಿದಂತೆ ಕೆಲವು ಖ್ಯಾತ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಇವುಗಳಲ್ಲದೆ, ದಕ್ಷಿಣ ಭಾರತದ ಚಿತ್ರಗಳಲ್ಲೂ ಕಾಣಿಸಿಕೊಂಡಿರುವ ಅವರು, ‘ಸತ್ಯಮೇವ ಜಯತೇ’, ‘ಅಲೆಕ್ಸ್ ಪಾಂಡಿಯನ್’ ಮೊದಲಾದ ಚಿತ್ರಗಳಲ್ಲಿನ ತಮ್ಮ ಅಭಿನಯದಿಂದಾಗಿ ಗಮನ ಸೆಳೆದಿದ್ದಾರೆ. ಇವುಗಳೊಂದಿಗೆ ಮರಾಠಿ ಚಿತ್ರಗಳಲ್ಲೂ ಮಿಲಿಂದ್ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:

ಕೂದಲೆಳೆಯಲ್ಲಿ ಸೋಲು ಅನುಭವಿಸಿದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಮೂಲತಃ ಬಾಗಲಕೋಟೆಯವರು; ಇನ್ನಷ್ಟು ವಿವರ ಇಲ್ಲಿದೆ

Viral Video: ಬೈಕ್ ಸವಾರನ ಜೊತೆ ಬಾಲಿವುಡ್ ಹಾಡಿಗೆ ಸಖತ್ತಾಗಿ ಸ್ಟೆಪ್ ಹಾಕಿದ ಪೊಲೀಸ್; ವೈರಲ್ ವಿಡಿಯೋ ಇಲ್ಲಿದೆ

(Milind Soman Shares the video of bathing in the middle of the road)

Follow us on

Related Stories

Most Read Stories

Click on your DTH Provider to Add TV9 Kannada