Manoj Bajpayee: ನಾಚಿಕೆಯಿಂದ ಮಹಿಳೆಯರ ವಾಶ್​ರೂಂನಲ್ಲಿ ಅಡಗಿಕೊಂಡಿದ್ದ ಫ್ಯಾಮಿಲಿ ಮ್ಯಾನ್ ನಟ ಮನೋಜ್ ಬಾಜಪೇಯಿ!

Manoj Bajpayee: ಬಾಲಿವುಡ್​ನ ಖ್ಯಾತ ನಟ ಮನೋಜ್ ಬಾಜಪೇಯಿ ತಮ್ಮ ನಾಚಿಕೆಯ ಸ್ವಭಾವದ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ನಾಚಿಕೆಯಿಂದ ಉಂಟಾಗುತ್ತಿದ್ದ ಫಜೀತಿಯ ಕುರಿತೂ ಅವರು ಮುಕ್ತವಾಗಿ ಹೇಳಿಕೊಂಡಿದ್ದಾರೆ.

Manoj Bajpayee: ನಾಚಿಕೆಯಿಂದ ಮಹಿಳೆಯರ ವಾಶ್​ರೂಂನಲ್ಲಿ ಅಡಗಿಕೊಂಡಿದ್ದ ಫ್ಯಾಮಿಲಿ ಮ್ಯಾನ್ ನಟ ಮನೋಜ್ ಬಾಜಪೇಯಿ!
ಸಾಂದರ್ಭಿಕ ಚಿತ್ರ
Follow us
TV9 Web
| Updated By: shivaprasad.hs

Updated on:Aug 08, 2021 | 1:35 PM

ಪ್ರಸ್ತುತ ಬಾಲಿವುಡ್ ಚಿತ್ರರಂಗದಲ್ಲಿ, ವೆಬ್ ಸೀರೀಸ್​ಗಳಲ್ಲಿ ಮಿಂಚುತ್ತಿರುವ ನಟ ಮನೋಜ್ ಬಾಜಪೇಯಿ. ಚಲನಚಿತ್ರಗಳಲ್ಲೂ ಬ್ಯುಸಿಯಾಗಿರುವ ಮನೋಜ್ ಅವರ ಹೊಸ ಚಿತ್ರ ‘ಡಯಲ್ 100’ನ ಎರಡು ದಿನಗಳ ಕೆಳಗಷ್ಟೇ ಜೀ5ನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ನೀನಾ ಗುಪ್ತಾ ಹಾಗೂ ಸಾಕ್ಷಿ ತನ್ವರ್ ಮನೋಜ್ ಬಾಜಪೇಯಿಯವರೊಂದಿಗೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಕ್ಷಿ ತನ್ವರ್ ಅವರು ಮನೋಜ್ ಅವರ ವಿದ್ಯಾರ್ಥಿನಿಯಾಗಿದ್ದರಂತೆ. ಮೊದಲು ದೆಹಲಿಯ ಮಹಿಳಾ ಕಾಲೇಜೊಂದರಲ್ಲಿ ನಟನಾ ಗುರುವಾಗಿದ್ದ ಮನೋಜ್​ ಅವರಿಗೆ ಅಲ್ಲಿಂದಲೇ ಸಾಕ್ಷಿ ಪರಿಚಯವಂತೆ. ಆದರೆ ಮಹಿಳಾ ಕಾಲೇಜಿಗೆ ಪಾಠ ಮಾಡಲು ಹೋಗುತ್ತಿದ್ದ ನಾಚಿಕೆ ಸ್ವಭಾವದ ಮನೋಜ್​ಗೆ ಅಲ್ಲಿ ಆದ ವಿಭಿನ್ನ ಅನುಭವಗಳನ್ನು ತೆರೆದಿಟ್ಟಿದ್ದಾರೆ.

ದೆಹಲಿಯ ಎಲ್​ಎಸ್​ಆರ್(ಲೇಡಿ ಶ್ರೀ ರಾಮ್) ಮಹಿಳಾ ಕಾಲೇಜಿನಲ್ಲಿ ನಟನಾ ಗುರುವಾಗಿದ್ದ ಮನೋಜ್ ಬಾಜಪೇಯಿಗೆ ಆಗ ಸಾಕ್ಷಿ ತನ್ವರ್ ವಿದ್ಯಾರ್ಥಿನಿಯಾಗಿದ್ದರು. ಅಲ್ಲಿಂದ ಸಾಕ್ಷಿಯವರ ಬೆಳವಣಿಗೆಯನ್ನು ತಾನು ಗಮನಿಸುತ್ತಲೇ ಬಂದಿದ್ದೇನೆ. ಯಾವುದೇ ಮಾಧ್ಯಮದ ಮೂಲಕ ನಮ್ಮ ನಡುವೆ ಸಂಪರ್ಕ ಇರದಿದ್ದರೂ ಕೂಡ, ದೂರದಿಂದಲೇ ಸಾಕ್ಷಿ ಬೆಳೆದ ಪರಿಯನ್ನು ಗಮನಿಸಿ ಹರ್ಷಪಟ್ಟವ ನಾನು ಎಂದು ಮನೋಜ್ ಸಾಕ್ಷಿಯವರನ್ನು ಹೊಗಳಿದ್ದಾರೆ.

ಅದೇ ಸಂದರ್ಭದಲ್ಲಿ ಎಲ್​ಎಸ್​ವಿ ಕಾಲೇಜಿಗೆ ಪಾಠ ಮಾಡಲು ಹೋಗುತ್ತಿದ್ದ ಸಂದರ್ಭವನ್ನು ನೆನಪಿಸಿಕೊಂಡ ಮನೀಜ್ ಬಾಜಪೇಯಿ ಆಗಿನ ಅವರ ನಾಚಿಕೆಯ ಪ್ರವೃತ್ತಿಯ ಕುರಿತು ಹೇಳಿಕೊಂಡಿದ್ದಾರೆ. ಹುಡುಗಿಯರ ಕಾಲೇಜಿನಲ್ಲಿ ಎಲ್ಲೆರುದುರು ಓಡಾಡಲು, ಒಬ್ಬರೇ ಹೋಗಲು ಮನೋಜ್ ಅವರಿಗೆ ನಾಚಿಕೆಯಾಗುತ್ತಿತ್ತಂತೆ. ಆದ್ದರಿಂದಲೇ ಅವರು ಕಾಲೇಜಿನ ಗೇಟಿನ ಬಳಿ ಕೆಲವರಿಗೆ ಬಂದು ಕಾಯಲು ಹೇಳುತ್ತಿದ್ದರಂತೆ. ಒಂದು ದಿನ ಮನೋಜ್ ಹೊರಗಿದ್ದರೂ ಯಾರೂ ಬಂದಿರಲಿಲ್ಲ. ಆಗ ತಾನು ಸಮೀಪದ ಡಾಬಾವೊಂದಕ್ಕೆ ಹೋಗಿ ಅಲ್ಲಿ ಕುಳಿತು ಕಾಲಹರಣ ಮಾಡಿದನೇ ಹೊರತು ಒಬ್ಬನೇ ಕಾಲೇಜನ್ನು ಪ್ರವೇಶಿಸಲಿಲ್ಲ ಎಂದಿದ್ದಾರೆ. ಅಂತಹ ಒಂದು ಸಂದರ್ಭದಲ್ಲಿ ತಾನು ಅಡಗಿಕೊಳ್ಳಲು ಮಹಿಳೆಯರ ವಾಶ್​ ರೂಂ ಪ್ರವೇಶಿಸಿದ್ದೆ. ಆಗ ಕೆಲವರು ಅಲ್ಲಿಗೆ ಬಂದರು. ಅವರೆಲ್ಲರೂ ತೆರಳುವವರೆಗೆ ತಾನು ಅಲ್ಲಿಯೇ ಕಾಯಬೇಕಾಯಿತು ಎಂದಿದ್ದಾರೆ ಮನೋಜ್ ಬಾಜಪೇಯಿ.

2021 ಮನೋಜ್ ಬಾಜಪೇಯಿಯವರ ವೃತ್ತಿ ಜೀವನದಲ್ಲಿ ಬಹಳ ಯಶಸ್ಸನ್ನು ತಂದುಕೊಟ್ಟ ವರ್ಷವೆನ್ನಬಹುದು. ಜೀ5ನಲ್ಲಿ ಈ ವರ್ಷ ಬಿಡುಗಡೆಯಾದ ಮನೋಜ್ ಅವರ ಎರಡನೇ ಚಿತ್ರ ಡಯಲ್ 100. ಈ ಮೊದಲು ‘ಸೈಲೆನ್ಸ್… ಕ್ಯಾನ್ ಯು ಹಿಯರ್ ಇಟ್’ ಬಿಡುಗಡೆಯಾಗಿತ್ತು. ಇವುಗಳಲ್ಲದೇ ನೆಟ್​ಫ್ಲಿಕ್ಸ್​ನಲ್ಲಿ ‘ರೇ’ ಆಂಥಾಲಜಿ ಸೀರೀಸ್​ನ ಚಿತ್ರವೊಂದರಲ್ಲಿ ಅವರು ಕಾಣಿಸಿಕೊಂಡಿದ್ದರು. ಅಮೆಜಾನ್ ಪ್ರೈಮ್​ನಲ್ಲಿ ಫ್ಯಾಮಿಲಿ ಮ್ಯಾನ್ 2 ಬಿಡುಗಡೆಯಾಗಿ ಅಪಾರ ಯಶಸ್ಸನ್ನೂ ಮನೋಜ್ ಅವರಿಗೆ ತಂದುಕೊಟ್ಟಿದ್ದು ಕೂಡಾ ಇದೇ ವರ್ಷ.

ಇದನ್ನೂ ಓದಿ: 

ಟೀಮ್ ಇಂಡಿಯಾದ ಈ ಸ್ಟಾರ್ ಆಟಗಾರರ ಎಜುಕೇಷನ್ ಎಷ್ಟು ಗೊತ್ತೇ?: ಕೇಳಿದ್ರೆ ಶಾಕ್ ಆಗ್ತೀರಾ

(Manoj Bajpayee says that he is too shy in begining of his career)

Published On - 1:34 pm, Sun, 8 August 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ