AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಮ್ ಇಂಡಿಯಾದ ಈ ಸ್ಟಾರ್ ಆಟಗಾರರ ಎಜುಕೇಷನ್ ಎಷ್ಟು ಗೊತ್ತೇ?: ಕೇಳಿದ್ರೆ ಶಾಕ್ ಆಗ್ತೀರಾ

ಪ್ರಸ್ತುತ ಕ್ರಿಕೆಟ್ ಲೋಕದಲ್ಲಿ ತನ್ನದೆ ಆದ ಚಾಪು ಮೂಡಿಸಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿಶಾಲ್ ಭಾರತ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದವರು. ಇವರು ಇಲ್ಲಿ 12ನೇ ತರಗತಿವರೆಗೆ ಓದಿದ್ದಾರೆ.

ಟೀಮ್ ಇಂಡಿಯಾದ ಈ ಸ್ಟಾರ್ ಆಟಗಾರರ ಎಜುಕೇಷನ್ ಎಷ್ಟು ಗೊತ್ತೇ?: ಕೇಳಿದ್ರೆ ಶಾಕ್ ಆಗ್ತೀರಾ
Indian Cricketer
TV9 Web
| Updated By: Vinay Bhat|

Updated on: Aug 08, 2021 | 12:01 PM

Share

ಕ್ರಿಕೆಟ್ ಜಗತ್ತಿನಲ್ಲಿ ಇಂದು ಮೆರೆಯುತ್ತಿರುವ ಕೆಲವೇ ಕೆಲವು ತಂಡಗಳ ಪೈಕಿ ಟೀಮ್ ಇಂಡಿಯಾ (Indian Cricket Team) ಕೂಡ ಒಂದು. ವಿರಾಟ್ ಕೊಹ್ಲಿ (Virat Kohli), ರೋಹಿತ್ ಶರ್ಮಾ (Rohit Sharma), ಜಸ್​ಪ್ರೀತ್ ಬುಮ್ರಾ, ರವಿಚಂದ್ರನ್ ಅಶ್ವಿನ್ ಸೇರಿದಂತೆ ಅನೇಕ ಶ್ರೇಷ್ಠ ಕ್ರಿಕೆಟಿಗರು ಇಂದು ಭಾರತ ಕ್ರಿಕೆಟ್ ತಂಡದಲ್ಲಿದ್ದಾರೆ. ಇದಕ್ಕೂ ಮುನ್ನ ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ಅನಿಲ್ ಕುಂಬ್ಳೆ, ಜಹೀರ್ ಖಾನ್, ಯುವರಾಜ್ ಸಿಂಗ್, ರಾಹುಲ್ ದ್ರಾವಿಡ್​, ಎಂ ಎಸ್ ಧೋನಿಯಂತಹ ದಿಗ್ಗಜ ಆಟಗಾರರನ್ನೂ ಭಾರತ ಕಂಡಿದೆ. ಟೀಮ್ ಇಂಡಿಯಾ ಇಂದು ವಿಶ್ವ ಮಟ್ಟದಲ್ಲಿ ಬಲಿಷ್ಠ ತಂಡವಾಗಿದೆ ಎಂದರೆ ಅದಕ್ಕೆ ಇವರ ಕೊಡುಗೆ ಅಪಾರ.

ಇಂತಹ ಸ್ಟಾರ್ ಕ್ರಿಕೆಟಿಗರಿಗೆ ಅಭಿಮಾನಿಗಳ ಬಳಗವಂತೂ ತುಂಬಾನೆ ಇದೆ. ಆದರೆ, ಫ್ಯಾನ್ಸ್​ಗಳಿಗೆ ತಮ್ಮ ನೆಚ್ಚಿನ ಆಟಗಾರನ ಖಾಸಗಿ ವಿಷಯ, ಅವರ ಶೈಕ್ಷಣಿಕ ಅರ್ಹತೆ ಬಗ್ಗೆ ತಿಳಿದಿರುವುಲ್ಲ. ಈ ಬಗ್ಗೆ ತಿಳಿಸಿಕೊಡುವ ಪ್ರಯತ್ನವೇ ಇದಾಗಿದೆ.

ರಾಹುಲ್ ದ್ರಾವಿಡ್: ನಮ್ಮ ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮೊದಲಿಗೆ ಶಿಕ್ಷಣ ಪಡೆದಿದ್ದು ಸೆಂಟ್‍ಜೋಸೆಫ್ ಶಾಲೆಯಲ್ಲಿ. ಇಲ್ಲಿ ವಾಣಿಜ್ಯಶಾಸ್ತ್ರ ವಿಷಯದಲ್ಲಿ ಪದವಿ ಪಡೆದವರು. ಭಾರತೀಯ ಕ್ರಿಕೆಟ್ ತಂಡಕ್ಕೆ ಆಮಂತ್ರಣ ಬರುವ ಮೊದಲು ಸೆಂಟ್‍ಜೋಸೆಫ್ ಕಾಲೇಜ್ ಆಫ್ ಬ್ಸುಸ್‍ನೆಸ್ ಅಡ್ಮಿನಿಸ್ಟ್ರೇಷನ್‍ನಲ್ಲಿ ಎಂಬಿಎ ವಿದ್ಯಾರ್ಥಿ ಕೂಡ ಹೌದು. ಟೀಮ್ ಇಂಡಿಯಾದ ಬಾಗಿಲು ತೆರೆದಾಗ ಓದನ್ನು ಅರ್ಧಕ್ಕೆ ಬಿಟ್ಟು ಕ್ರಿಕೆಟ್ ಲೋಕಕ್ಕೆ ಪದಾರ್ಪಣೆ ಮಾಡಿದರು. ನಂತರ ನಡೆದಿದ್ದು ಮಾತ್ರ ಇಂದು ದಾಖಲೆಯಾಗಿ ಉಳಿದಿದೆ.

ಸಚಿನ್ ತೆಂಡೂಲ್ಕರ್: ತನ್ನ 16ನೇ ವಯಸ್ಸಿಗೆ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟ ಸಚಿನ್ ತೆಂಡೂಲ್ಕರ್ ಮಾಸ್ಟರ್ ಬ್ಲಾಸ್ಟರ್ ಆಗಿ ಹೊರಹೊಮ್ಮಿದರು. ಸಚಿನ್ ವೃತ್ತಿಪರ ಕ್ರಿಕೆಟ್‍ಗೆ ಪದಾರ್ಪಣೆ ಮಾಡುವ ಮೊದಲು ಶಾರದಾಶ್ರಮ ವಿದ್ಯಾಮಂದಿರದಲ್ಲಿ 12ನೇ ತರಗತಿವರೆಗೆ ಮಾತ್ರ ಓದಿದ್ದಾರೆ.

ಸೌರವ್ ಗಂಗೂಲಿ: ವಿಶ್ವ ಕ್ರಿಕೆಟ್ ತಂಡ ಶ್ರೇಷ್ಠ ಆಟಗಾರ ಬಂಗಾಲದ ಹುಲಿ ಸೌರವ್ ಗಂಗೂಲಿ. ಇವರು ಪ್ರತಿಷ್ಠಿತ ಸೆಂಟ್ ಕ್ಸೇವಿಯರ್ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ನಂತರ ಗೌರವ ಪಿಎಚ್‍ಡಿ (ಡಾಕ್ಟರೇಟ್) ಕೂಡ ನೀಡಲಾಯಿತು. ಸದ್ಯ ದಾದಾ ಬಿಸಿಸಿಐ ಅಧ್ಯಕ್ಷ ಪಟ್ಟದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ.

ವೀರೇಂದ್ರ ಸೆಹ್ವಾಗ್: ಟೀಂ ಇಂಡಿಯಾದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಕ್ರಿಕೆಟ್‍ಗೆ ಬರುವ ಮೊದಲು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಪದವಿ ಮುಗಿಸಿದ್ದರು.

ವಿ. ವಿ. ಎಸ್ ಲಕ್ಷ್ಮಣ್: ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಪಡೆದಿದ್ದ ವಿ. ವಿ. ಎಸ್ ಲಕ್ಷ್ಮಣ್ ಅತಿ ಹೆಚ್ಚು ಶೈಕ್ಷಣಿಕ ಅರ್ಹತೆ ಹೊಂದಿದ ಕ್ರಿಕೆಟರ್. ಇವರು ಎಂಬಿಬಿಎಸ್ ಪದವೀಧರ ಎಂದರೆ ನಂಬಲೇ ಬೇಕು.

ಯುವರಾಜ್ ಸಿಂಗ್: ಸಿಕ್ಸರ್ ಕಿಂಗ್ ಡಿಎವಿ ಪಬ್ಲಿಕ್ ಶಾಲೆಯಲ್ಲಿ 12ನೇ ತರಗತಿ ಮುಗಿಸುವಷ್ಟರಲ್ಲೇ ತನ್ನ ಶಾಲಾದಿನದಲ್ಲೇ ಒಬ್ಬ ಚಾಂಪಿಯನ್ ಆಟಗಾರನಾಗಿ ಹೊರಹೊಮ್ಮಿದ್ದರು. ಕ್ಯಾನ್ಸರ್‍ನಿಂದ ಬಳಲುತಿದ್ದರೂ ಹೋರಾಡಿ, ಉತ್ತಮ ಆಟ ಪ್ರದರ್ಶಿಸಿ ಭಾರತಕ್ಕೆ ವಿಶ್ವಕಪ್ ತಂದಿತ್ತ ಯುವರಾಜ ಓದಿದ್ದು ಮಾತ್ರ 12ನೇ ತರಗತಿ ಮಾತ್ರ.

ಅನಿಲ್ ಕುಂಬ್ಳೆ: ಕರ್ನಾಟಕದ ಮತ್ತೊಬ್ಬ ಹೆಮ್ಮೆಯ ಕ್ರಿಕೆಟಿಗ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಪ್ರಾರ್ಥಮಿಕ ಶಿಕ್ಷಣವವನ್ನು ಹೋಲಿ ಸೆಂಟ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಮುಗಿಸಿದರು. ನಂತರ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಓದಿ ಮೆಕನಿಕಲ್ ಇಂಜಿನಿಯರಿಂಗ್ ವಿಷಯದಲ್ಲಿ ಬಿಇ ಪದವಿಯನ್ನು ಪಡೆದರು.

ಜಾವಗಲ್ ಶ್ರೀನಿನಾಥ್: ಜಾವಗಲ್ ಎಕ್ಸಪ್ರೆಸ್ ಜಾವಗಲ್ ಶ್ರೀನಾಥ್ ಒಬ್ಬ ಇಂಜಿನಿಯರ್. ಮೈಸೂರಿನ ಜಯಚಾಮರಾಜೆಂದ್ರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇನ್ಸ್ಟ್ರುಮೆಂಟೇಷನ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

ಜಹೀರ್ ಖಾನ್: ಶ್ರೀರಾಂಪುರದಲ್ಲಿ ಶಾಲಾ ವಿದ್ಯಾಭ್ಯಾಸ ಮಾಡಿದ ಜಹೀರ್ ಖಾನ್ ನಂತರ ಇಂಜಿನಿಯರಿಂಗ್ ಪದವಿ ಮಾಡಲು ಮುಂದಾಗುತ್ತಾರೆ. ಓದುವುದರಲ್ಲಿ ಆಸಕ್ತಿ ಇದ್ದರೂ ಕ್ರಿಕೆಟ್ ಲೋಕ ಕೈ ಬೀಸಿ ಕರೆಯಿತು. ಹೀಗೆ ಓದುವುದನ್ನು ಅರ್ಧದಲ್ಲೆ ಬಿಟ್ಟು ಬಂದ ಜಹೀರ್ ಬಹುಕಾಲ ಭಾರತ ಕ್ರಿಕೆಟ್‍ನ ಬೌಲಿಂಗ್ ಮುಂದಾಳತ್ವವನ್ನು ವಹಿಸಿದ್ದರು.

ಎಂ. ಎಸ್ ಧೋನಿ: ಭಾರತ ಕ್ರಿಕೆಟ್ ಕಂಡ ಯಶಸ್ವಿ ನಾಯಕ ಎಂ. ಎಸ್ ಧೋನಿ ಕ್ರಿಕೆಟ್‍ಗೆ ಬರುವ ಮೊದಲು ಓದಿನಲ್ಲಿ ಆಸಕ್ತಿಯಿದ್ದರೂ ಕನಿಷ್ಠ 10ನೇ ತರಗತಿ ಓದುವುದು ಕಷ್ಟವಾಗಿತ್ತು, ಆದರೆ ನಂತರದಲ್ಲಿ 12ನೇ ತರಗತಿ ಹಾಗೂ ಬಿ.ಕಾಂ ಪದವಿಯನ್ನು ಸೆಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಪಡೆಯುತ್ತಾರೆ.

ವಿರಾಟ್ ಕೋಹ್ಲಿ: ಪ್ರಸ್ತುತ ಕ್ರಿಕೆಟ್ ಲೋಕದಲ್ಲಿ ತನ್ನದೆ ಆದ ಚಾಪು ಮೂಡಿಸಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿಶಾಲ್ ಭಾರತ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದವರು. ಇವರು ಇಲ್ಲಿ 12ನೇ ತರಗತಿವರೆಗೆ ಓದಿದ್ದಾರೆ. ಓದಿನಲ್ಲಿ ಚುರುಕಾಗಿದ್ದರೂ ಕ್ರಿಕೆಟ್ ಕಡೆಗಿನ ಆಸಕ್ತಿ ಇಡೀ ವಿಶ್ವವೇ ಇವರತ್ತ ನೋಡುವಂತೆ ಮಾಡಿದೆ.

India vs England 1st Test: ಭಾರತದ ಗೆಲುವಿಗೆ ಬೇಕು 157 ರನ್ಸ್: ಈ ಆಟಗಾರ ಇಂದು ಆಡಲೇ ಬೇಕು!

Mohammad Siraj: ಮೈದಾನದಲ್ಲಿ ಮತ್ತೆ ತಾಳ್ಮೆ ಕಳೆದುಕೊಂಡ ಮೊಹಮ್ಮದ್ ಸಿರಾಜ್​ಗೆ ಕೊಹ್ಲಿ ಮಾಡಿದ್ದೇನು ನೋಡಿ

(Here is the Kohli Dhoni Famous Popular Indian Cricketers And Their Educational Qualifications)

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ