AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mohammad Siraj: ಮೈದಾನದಲ್ಲಿ ಮತ್ತೆ ತಾಳ್ಮೆ ಕಳೆದುಕೊಂಡ ಮೊಹಮ್ಮದ್ ಸಿರಾಜ್​ಗೆ ಕೊಹ್ಲಿ ಮಾಡಿದ್ದೇನು ನೋಡಿ

India vs England: ನಾಲ್ಕನೇ ದಿನದಾಟದಲ್ಲಿ ಭಾರತೀಯ ಬೌಲರ್​ಗಳು ಆಕ್ರಮಣಕಾರಿ ಬೌಲಿಂಗ್ ಪ್ರದರ್ಶನ ನೀಡಿದರು. ಇದು ಮೊಹಮ್ಮದ್ ಸಿರಾಜ್ ಹಾಗೂ ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕುರ್ರನ್ ನಡುವೆ ಮಾಹಿನ ಚಕಮಕಿ ನಡೆಯುವ ವರೆಗೆ ಹೋಯಿತು.

Mohammad Siraj: ಮೈದಾನದಲ್ಲಿ ಮತ್ತೆ ತಾಳ್ಮೆ ಕಳೆದುಕೊಂಡ ಮೊಹಮ್ಮದ್ ಸಿರಾಜ್​ಗೆ ಕೊಹ್ಲಿ ಮಾಡಿದ್ದೇನು ನೋಡಿ
Mohammed Siraj and Sam Curran
TV9 Web
| Edited By: |

Updated on: Aug 08, 2021 | 10:07 AM

Share

ನ್ಯಾಟಿಂಗ್​ಹ್ಯಾಮ್​ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಮೊದಲ ಟೆಸ್ಟ್ ಪಂದ್ಯ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಇಂಗ್ಲೆಂಡ್ ತಂಡವನ್ನು ಎರಡನೇ ಇನ್ನಿಂಗ್ಸ್​ನಲ್ಲಿ 303 ರನ್​ಗೆ ಆಲೌಟ್ ಮಾಡಿ 209 ರನ್ ಟಾರ್ಗೆಟ್ ಪಡೆದಿದ್ದ ಟೀಮ್ ಇಂಡಿಯಾ (Team India) ನಾಲ್ಕನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 52 ರನ್ ಗಳಿಸಿದೆ. ಕೊಹ್ಲಿ (Virat kohli) ಪಡೆಯ ಗೆಲುವಿಗೆ ಇನ್ನೂ 157 ರನ್​ಗಳ ಅವಶ್ಯಕತೆಯಿದೆ. ಹೀಗಾಗಿ ಅಂತಿಮ ದಿನದಾಟದ ಮೇಲೆ ಉಭಯ ತಂಡಗಳು ಕಣ್ಣಿಟ್ಟಿದೆ.

ನಾಲ್ಕನೇ ದಿನದಾಟದಲ್ಲಿ ಭಾರತೀಯ ಬೌಲರ್​ಗಳು ಆಕ್ರಮಣಕಾರಿ ಬೌಲಿಂಗ್ ಪ್ರದರ್ಶನ ನೀಡಿದರು. ಇದು ಮೊಹಮ್ಮದ್ ಸಿರಾಜ್ ಹಾಗೂ ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕುರ್ರನ್ ನಡುವೆ ಮಾಹಿನ ಚಕಮಕಿ ನಡೆಯುವ ವರೆಗೆ ಹೋಯಿತು.

ಅದು ಇಂಗ್ಲೆಂಡ್ ಬ್ಯಾಟಿಂಗ್​ನ ಎರಡನೇ ಇನ್ನಿಂಗ್ಸ್​ನ 74ನೇ ಓವರ್. ಒಂದುಕಡೆ ನಾಯಕ ಜೋ ರೂಟ್ ಶತಕ ಬಾರಿಸಿ ತಂಡಕ್ಕೆ ಆಸರೆಯಾಗಿದ್ದರೆ, ಇತ್ತ ಸ್ಯಾಮ್​ ಕುರ್ರನ್ ಸಾಥ್ ನೀಡುತ್ತಿದ್ದರು. ಇವರ ಜೊತೆಯಾಟವನ್ನು ಮುರಿಯುವುದು ಭಾರತಕ್ಕೆ ಮುಖ್ಯವಾಗಿತ್ತು. ಇದೇವೇಳೆ 74ನೇ ಓವರ್​ ಬೌಲಿಂಗ್ ಮಾಡಲು ಬಂದ ಮೊಹಮ್ಮದ್ ಸಿರಾಜ್ ಅವರು ಕುರ್ರನ್​ಗೆ ಶಾರ್ಟ್​ ಮತ್ತು ವೈಡ್ ಬಾಲ್ ಎಸೆದರು. ಆದರೆ, ಇದು ಚೆಂಡು ಬೌಂಡರಿ ಗೆರೆ ತಲುಪಿತು. ಇದರಿಂದ ಕುಪಿತಗೊಂಡ ಸಿರಾಜ್ ಅವರು ಕುರ್ರನ್ ಬಳಿ ತೆರಳಿ ಮಾತಿಗಿಳಿದರು. ಇತ್ತ ಕುರ್ರನ್ ಕೂಡ ಮಾತಿಗೆ ಮಾತು ಬೆಳೆಸಿದರು.

ಈ ಸಂದರ್ಭ ಮಧ್ಯ ಪ್ರವೇಶಿಸಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಸಿರಾಜ್ ಅವರನ್ನು ಕರೆಸಿ ಸಮಾಧಾನ ಪಡಿಸಿದರು. ಕೊನೆಗೂ ಸಿರಾಜ್​ಗೆ ಕುರ್ರನ್ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಆದರೆ, ಬುಮ್ರಾ ಬೌಲಿಂಗ್​ನಲ್ಲಿ ಸಿರಾಜ್ ಅವರು ಕುರ್ರನ್ ಕ್ಯಾಚ್ ಹಿಡಿದು ತೃಪ್ತಿಪಟ್ಟುಕೊಂಡರು.

ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್​ನಲ್ಲಿ 183 ರನ್​ಗೆ ಆಲೌಟ್ ಆಯಿತು. ಇತ್ತ ಭಾರತ ಕೆ. ಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ಅವರ ಆಟದ ಫಲದಿಂದ 278 ರನ್ ಕಲೆಹಾಕಿತು. ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಇಂಗ್ಲೆಂಡ್​ಗೆ ನಾಯಕ ಜೋ ರೂಟ್ (109) ಬಿಟ್ಟರೆ ಮತ್ಯಾವ ಬ್ಯಾಟ್ಸ್​ಮನ್​ಗಳು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಪರಿಣಾಮ ಇಂಗ್ಲೆಂಡ್ 303 ರನ್​ಗೆ ಸರ್ವಪತನ ಕಂಡಿತು.

ಹೀಗಾಗಿ 209 ರನ್​ಗಳ ಟಾರ್ಗೆಟ್ ಪಡೆದ ಭಾರತ ನಾಲ್ಕನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 52 ರನ್ ಬಾರಿಸಿದೆ. ಅಂತಿಮ ದಿನದಲ್ಲಿ ಭಾರತ ಗೆಲುವಿಗಾಗಿ 157 ರನ್ ಗಳಿಸಬೇಕಿದೆ. ರೋಹಿತ್ ಶರ್ಮಾ ಹಾಗೂ ಚೇತೇಶ್ವರ್ ಪೂಜಾರ ತಲಾ 12 ರನ್ ಗಳಿಸಿ ಕ್ರೀಸ್​ನಲ್ಲಿದ್ದಾರೆ.

ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದ ನೀರಜ್​ ಚೋಪ್ರಾಗೆ ಜೀವಿತಾವಧಿ ಕೊಡುಗೆ ನೀಡಿದ ಕೆಎಸ್​ಆರ್​ಟಿಸಿ; ಕನ್ನಡತಿ ಅದಿತಿ ಅಶೋಕ್​ಗೂ ಗೌರವ

Neeraj Chopra: ಗಣಿನಾಡಿನಲ್ಲಿ ತರಬೇತಿ ಪಡೆದ ನೀರಜ್ ಚೋಪ್ರಾ: ಚಿನ್ನದ ಹುಡುಗನಿಗೆ ಜಿಂದಾಲ್ ಪ್ರಾಯೋಜಕತ್ವ

(India vs England Mohammad Siraj and Sam Curran involved in argument after that Virat Kohli plays pacifier)

ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಸ್ವಂತ ಮನೆ ಕನಸು ನನಸಾಗಲು ಏನು ಮಾಡಬೇಕು ನೋಡಿ
ಸ್ವಂತ ಮನೆ ಕನಸು ನನಸಾಗಲು ಏನು ಮಾಡಬೇಕು ನೋಡಿ