India vs England 1st Test: ಭಾರತದ ಗೆಲುವಿಗೆ ಬೇಕು 157 ರನ್ಸ್: ಈ ಆಟಗಾರ ಇಂದು ಆಡಲೇ ಬೇಕು!
ಭಾರತ ನಾಲ್ಕನೆ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 52 ರನ್ ಗಳಿಸಿದೆ. ಕೆ. ಎಲ್ ರಾಹುಲ್ 26 ರನ್ಗೆ ಔಟ್ ಆಗಿದ್ದು, ರೋಹಿತ್ ಶರ್ಮಾ ಹಾಗೂ ಚೇತೇಶ್ವರ್ ಪೂಜಾರ ತಲಾ 12 ರನ್ ಗಳಿಸಿ ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ನ್ಯಾಟಿಂಗ್ಹ್ಯಾಮ್ನ ಟ್ರೆಂಟ್ಬ್ರಿಡ್ಜ್ ಮೈದಾನದಲ್ಲಿ ಇಂದು ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಮೊದಲ ಟೆಸ್ಟ್ನ (1st Test) ಐದನೇ ದಿನದಾಟ ನಡೆಯಲಿದೆ. ಪಂದ್ಯ ಸರಿಯಾಗಿ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದ್ದು ಅಂತಿಮ ದಿನ ಉಭಯ ತಂಡಗಳ ಗೆಲುವಿಗೆ ಮುಖ್ಯವಾಗಿದೆ. ವಿರಾಟ್ ಕೊಹ್ಲಿ (Virat Kohli) ಪಡೆಯ ಗೆಲುವಿಗೆ ಬೇಕಾಗಿರುವುದು 157 ರನ್ಗಳು. ಆಂಗ್ಲರಿಗೆ ಭಾರತ 9 ವಿಕೆಟ್ ಬೇಕಾಗಿದೆ. ಮಳೆ ಬಂದರೆ ಪಂದ್ಯ ಡ್ರಾ ಆಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಹೀಗೆ ನಾನಾ ಕಾರಣಗಳಿಗೆ ಇಂದಿನ ದಿನದಾಟ ಸಾಕಷ್ಟು ಕುತೂಹಲ ಕೆರಳಿಸಿದೆ.
ಮೊದಲ ಟೆಸ್ಟ್ನಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 65.4 ಓವರ್ನಲ್ಲಿ 183 ರನ್ಗೆ ಆಲೌಟ್ ಆಯಿತು. ನಾಯಕ ಜೋ ರೂಟ್ 64 ರನ್ ಗಳಿಸಿದರೆ ಭಾರತ ಪರ ಜಸ್ಪ್ರೀತ್ ಬುಮ್ರಾ 4 ಹಾಗೂ ಮೊಹಮ್ಮದ್ ಶಮಿ 3 ವಿಕೆಟ್ ಪಡೆದರು. ಇತ್ತ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಕೆ. ಎಲ್ ರಾಹುಲ್ ಅವರ 84 ಹಾಗೂ ರವೀಂದ್ರ ಜಡೇಜಾ ಅವರ 56 ರನ್ಗಳ ನೆರವಿನಿಂದ 278 ರನ್ ಬಾರಿಸಿತು.
95 ರನ್ಗಳ ಹಿನ್ನಡಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ವಿಕೆಟ್ ಕಳೆದುಕೊಂಡು ಸಾಗಿತಾದರೂ ನಾಯಕ ರೂಟ್ ಶತಕ ಸಿಡಿಸಿ ಮತ್ತೆ ತಂಡಕ್ಕೆ ಆಸರೆಯಾದರು. 172 ಎಸೆತಗಳಲ್ಲಿ 109 ರನ್ ಗಳಿಸಿದ ರೂಟ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಇಂಗ್ಲೆಂಡ್ 303 ರನ್ ಗಳಿಸಿ ಭಾರತಕ್ಕೆ 209 ರನ್ಗಳ ಟಾರ್ಗೆಟ್ ನೀಡಿತು. ಭಾರತ ಪರ ಜಸ್ಪ್ರೀತ್ ಬುಮ್ರಾ 5 ವಿಕೆಟ್ ಕಿತ್ತ ಸಾಧನೆ ಮಾಡಿದರು.
ಈ ಗುರಿ ಬೆನ್ನಟ್ಟಿರುವ ಭಾರತ ನಾಲ್ಕನೆ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 52 ರನ್ ಗಳಿಸಿದೆ. ಕೆ. ಎಲ್ ರಾಹುಲ್ 26 ರನ್ಗೆ ಔಟ್ ಆಗಿದ್ದು, ರೋಹಿತ್ ಶರ್ಮಾ ಹಾಗೂ ಚೇತೇಶ್ವರ್ ಪೂಜಾರ ತಲಾ 12 ರನ್ ಗಳಿಸಿ ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಐದನೇ ದಿನದ ಆರಂಭದಲ್ಲಿ ಟೀಮ್ ಇಂಡಿಯಾ ಎಚ್ಚರಿಕೆಯಿಂದ ಬ್ಯಾಟ್ ಬೀಸಬೇಕಿದೆ. ಚೆಂಡು ಹೆಚ್ಚಾಗಿ ಸ್ವಿಂಗ್ ಆಗುವ ಕಾರಣ ವೇಗಿಗಳಿಗೆ ವಿಕೆಟ್ ಒಪ್ಪಿಸದಂತೆ ನೋಡಬೇಕಿದೆ.
ರೋಹಿತ್ ಹಾಗೂ ಪೂಜಾರ ಆಟದ ಮೇಲೆ ಟೀಮ್ ಇಂಡಿಯಾ ಹೆಚ್ಚು ಅವಲಂಬಿತವಾಗಿದೆ. ಇವರಿಬ್ಬರೂ ತಂಡದ ಮೊತ್ತವನ್ನು 150ರ ಗಡಿ ದಾಟಿಸಬೇಕಿದೆ. ಎಲ್ಲಾದರೂ ದಿನದ ಆರಂಭದಲ್ಲೇ ವಿಕೆಟ್ ಕಳೆದುಕೊಂಡರೆ ನಾಯಕ ವಿರಾಟ್ ಕೊಹ್ಲಿ ಸಂಪೂರ್ಣ ಜವಾಬ್ದಾರಿ ಹೊರಬೇಕಿದೆ. ಕಳೆದ ಅನೇಕ ಇನ್ನಿಂಗ್ಸ್ಗಳಲ್ಲಿ ಕೊಹ್ಲಿ ಕಡೆಯಿಂದ ಹೇಳಿಕೊಳ್ಳುವಂತಹ ಬ್ಯಾಟಿಂಗ್ ಪ್ರದರ್ಶನ ಬಂದಿಲ್ಲ. ಹೀಗಾಗಿ ತಂಡವನ್ನು ಗೆಲುವಿನ ದಡ ಸೇರಿಸುವ ಹೊರೆ ಕೊಹ್ಲಿ ಮೇಲೆ ಬರಲಿದೆ.
Mohammad Siraj: ಮೈದಾನದಲ್ಲಿ ಮತ್ತೆ ತಾಳ್ಮೆ ಕಳೆದುಕೊಂಡ ಮೊಹಮ್ಮದ್ ಸಿರಾಜ್ಗೆ ಕೊಹ್ಲಿ ಮಾಡಿದ್ದೇನು ನೋಡಿ
(India vs England Team India need 157 to win 1st Test on 5th day Big final day for Virat Kohli Team)