IPL 2021: ಐಪಿಎಲ್ ಹೊಸ ಅಪ್ಡೇಡ್: ಆಟಗಾರರಿಗೆ ಬಿಗ್ ರಿಲೀಫ್
IPL 2021 New Schedule: ದ್ವಿತಿಯಾರ್ಧದಲ್ಲಿ ಒಟ್ಟು 31 ಪಂದ್ಯಗಳು ನಡೆಯಲಿದ್ದು, ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂ ಮೊದಲ ಕ್ವಾಲಿಫೈಯರ್ ಮತ್ತು ಫೈನಲ್ ಸೇರಿದಂತೆ 13 ಪಂದ್ಯಗಳು ನಡೆಯಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ನ ದ್ವಿತಿಯಾರ್ಧದ ಆರಂಭಕ್ಕೆ ಸಿದ್ಧತೆಗಳು ಶುರುವಾಗಿದೆ. ಮೊದಲಾರ್ಧದಲ್ಲಿ 29 ಪಂದ್ಯಗಳನ್ನು ನಡೆಸಲಾಗಿತ್ತು. ಸೆಪ್ಟೆಂಬರ್ 19 ರಂದು ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಐಪಿಎಲ್ ಪುನರಾರಂಭವಾಗಲಿದ್ದು, ಅಕ್ಟೋಬರ್ 15 ರಂದು ಇದೇ ಮೈದಾನದಲ್ಲಿ ಫೈನಲ್ ನಡೆಯಲಿದೆ. ಯುಎಇನ ಶಾರ್ಜಾ, ಅಬುಧಾಬಿ ಹಾಗೂ ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಐಪಿಎಲ್ ಉಳಿದ 31 ಪಂದ್ಯಗಳು ಜರುಗಲಿದೆ. ಟೂರ್ನಿ ಆಯೋಜನೆಗೆ ಬೇಕಾದ ಸೌಲಭ್ಯಗಳಿಗಾಗಿ ಈಗಾಗಲೇ ಯುಎಇ ಸರ್ಕಾರದೊಂದಿಗೆ ಮಾತುಕತೆ ನಡೆಸಿರುವ ಬಿಸಿಸಿಐ ವಿಶೇಷ ಅನುಮತಿಗಳನ್ನು ಪಡೆದುಕೊಂಡಿದೆ. ಅದರಂತೆ ಐಪಿಎಲ್ನ ಉಳಿದ ಪಂದ್ಯಗಳಿಗೆ ಆಗಮಿಸುವ ಬಹುತೇಕ ಆಟಗಾರರಿಗೆ ಕ್ವಾರಂಟೈನ್ ನಿಯಮ ಅನ್ವಯವಾಗುವುದಿಲ್ಲ.
ಅಂದರೆ ವಾಕ್ಸಿನೇಶನ್ ಮಾಡಿಕೊಂಡಿರುವ ಆಟಗಾರರು ಯಾವುದಾದರೂ ಸರಣಿ ಆಡುತ್ತಿದ್ದರೆ ನೇರವಾಗಿ ಐಪಿಎಲ್ ಬಯೋಬಬಲ್ ಪ್ರವೇಶಿಸಬಹುದು. ಈ ಮೂಲಕ ಬಯೋಬಬಲ್ ಟು ಬಯೋಬಬಲ್ ಪ್ರವೇಶಿಸುವ ಅವಕಾಶವನ್ನು ಬಿಸಿಸಿಐ ಮಾಡಿಕೊಟ್ಟಿದೆ. ಸೆಪ್ಟೆಂಬರ್ ವೇಳೆ ಇಂಗ್ಲೆಂಡ್, ವೆಸ್ಟ್ ಇಂಡೀಸ್, ಭಾರತ ಹಾಗೂ ಶ್ರೀಲಂಕಾ ಆಟಗಾರರು ಸರಣಿ ಆಡಲಿದ್ದು, ಈ ಸರಣಿ ಬೆನ್ನಲ್ಲೇ ಯಾವುದೇ ಕ್ವಾರಂಟೈನ್ ಇಲ್ಲದೆ ತಮ್ಮ ತಮ್ಮ ಐಪಿಎಲ್ ತಂಡಗಳನ್ನು ಕೂಡಿಕೊಳ್ಳಬಹುದು. ಹಾಗೆಯೇ ಕೆರಿಬಿಯನ್ ಪ್ರೀಮಿಯರ್ ಲೀಗ್ ಮುಕ್ತಾಯದ ಬೆನ್ನಲ್ಲೇ ಐಪಿಎಲ್ ತಂಡವನ್ನು ಸೇರಿಕೊಳ್ಳುವ ಆಟಗಾರರು ಕೂಡ ಕ್ವಾರಂಟೈನ್ನಲ್ಲಿ ಇರಬೇಕಿಲ್ಲ. ಇದರ ಹೊರತಾಗಿ ರಾಷ್ಟ್ರೀಯ ತಂಡದಿಂದ (ಬಯೋಬಬಲ್ನಿಂದ) ಹೊರಗುಳಿದಿರುವ ಆಟಗಾರರು ಯುಎಇನಲ್ಲಿ ಕ್ವಾರಂಟೈನ್ಗೆ ಒಳಗಾಗಬೇಕಾಗುತ್ತದೆ.
ಇನ್ನು ಟೂರ್ನಿಯಲ್ಲಿ ಭಾಗವಹಿಸಬೇಕಾದರೆ ಪ್ರತಿಯೊಬ್ಬ ಆಟಗಾರರು ಕೊರೋನಾ ಲಸಿಕೆ ಪಡೆದಿರಬೇಕು ಎಂದು ಬಿಸಿಸಿಐ ತಿಳಿಸಿದೆ. ವಾಕ್ಸಿನೇಷನ್ ಮಾಡಿಕೊಂಡ ಆಟಗಾರರಿಗೆ ಮಾತ್ರ ಐಪಿಎಲ್ನ ದ್ವಿತಿಯಾರ್ಧದಲ್ಲಿ ಅವಕಾಶ ದೊರೆಯಲಿದೆ. ಅದರಂತೆ ಸೆಪ್ಟೆಂಬರ್ ವೇಳೆಗೆ 8 ತಂಡಗಳ ಆಟಗಾರರು ವಾಕ್ಸಿನೇಷನ್ ಪ್ರಕ್ರಿಯೆಯನ್ನು ಮುಗಿಸಿರಬೇಕು ಎಂದು ಬಿಸಿಸಿಐ ಸೂಚಿಸಿದೆ.
ದ್ವಿತಿಯಾರ್ಧದಲ್ಲಿ ಒಟ್ಟು 31 ಪಂದ್ಯಗಳು ನಡೆಯಲಿದ್ದು, ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂ ಮೊದಲ ಕ್ವಾಲಿಫೈಯರ್ ಮತ್ತು ಫೈನಲ್ ಸೇರಿದಂತೆ 13 ಪಂದ್ಯಗಳು ನಡೆಯಲಿದೆ. ಅದೇ ರೀತಿ ಎಲಿಮಿನೇಟರ್ ಮತ್ತು ಎರಡನೇ ಕ್ವಾಲಿಫೈಯರ್ ಪಂದ್ಯ ಸೇರಿದಂತೆ ಶಾರ್ಜಾದಲ್ಲಿ ಒಟ್ಟು 10 ಪಂದ್ಯಗಳನ್ನು ಆಯೋಜಿಸಲಿದೆ. ಹಾಗೆಯೇ 8 ಪಂದ್ಯಗಳಿಗೆ ಅಬುಧಾಬಿ ಸ್ಟೇಡಿಯಂ ಆತಿಥ್ಯವಹಿಸಲಿದೆ. ಸೆಪ್ಟೆಂಬರ್ 25ರಿಂದ ಡಬಲ್ ಹೆಡರ್ಗಳು ಆರಂಭವಾಗಲಿದ್ದು, ಒಟ್ಟು ಏಳು ಡಬಲ್ ಹೆಡರ್ಗಳು ಇರಲಿದೆ. ಭಾರತೀಯ ಕಾಲಮಾನ ರಾತ್ರಿ 7.30ಕ್ಕೆ ಪಂದ್ಯಗಳು ನಡೆಯಲಿದ್ದು, ಎರಡು ಪಂದಗಳಿದ್ದಾಗ ಮೊದಲ ಪಂದ್ಯವು ಮಧ್ಯಾಹ್ನ 3.30ಕ್ಕೆ ಶುರುವಾಗಲಿದೆ.
ಇದನ್ನೂ ಓದಿ: Tokyo Olympics 2020: ಭಾರತ ಸೋಲುತ್ತಿದ್ದಂತೆ ರೆಫರಿಗೆ ಬಿತ್ತು ಏಟು..!
ಇದನ್ನೂ ಓದಿ: Neeraj Chopra: ಆಸ್ಪತ್ರೆಯ ಬೆಡ್ನಿಂದ ಚಿನ್ನದ ಬೇಟೆ ತನಕ: ನೀರಜ್ ಚೋಪ್ರಾ ಎಂಬ ಗೋಲ್ಡನ್ ಸ್ಟಾರ್
ಇದನ್ನೂ ಓದಿ: ಬ್ಲೂಟೂತ್ ಹೆಡ್ಫೋನ್ ಸ್ಪೋಟ, ಯುವಕ ಸಾವು..!