IND vs ENG: ಭಾರತದ ಗೆಲುವಿಗೆ ಮಳೆರಾಯನ ಅಡ್ಡಿ; ಇನ್ನೂ ಆರಂಭವಾಗಿಲ್ಲ ಅಂತಿಮ ದಿನದಾಟ

IND vs ENG: ಇಡೀ ದಿನದ ಆಟ ಉಳಿದಿದೆ ಮತ್ತು ಕೈಯಲ್ಲಿ 9 ವಿಕೆಟ್ ಇದೆ. ಅಂದರೆ, ಪಂದ್ಯವು ಸಂಪೂರ್ಣವಾಗಿ ಭಾರತದ ಪರವಾಗಿದೆ. ಆದರೆ, ನಾಟಿಂಗ್‌ಹ್ಯಾಮ್‌ನ ಹವಾಮಾನವು ಪ್ರಸ್ತುತ ತನ್ನ ಪ್ರಾಬಲ್ಯ ಸಾಧಿಸಿದೆ.

IND vs ENG: ಭಾರತದ ಗೆಲುವಿಗೆ ಮಳೆರಾಯನ ಅಡ್ಡಿ; ಇನ್ನೂ ಆರಂಭವಾಗಿಲ್ಲ ಅಂತಿಮ ದಿನದಾಟ
ನಾಟಿಂಗ್‌ಹ್ಯಾಮ್‌ನ ಹವಾಮಾನ
Follow us
TV9 Web
| Updated By: ಪೃಥ್ವಿಶಂಕರ

Updated on: Aug 08, 2021 | 4:33 PM

ಇಂದು ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ 5 ನೇ ದಿನ. ಭಾರತ ಗೆಲ್ಲಲು 157 ರನ್ ಗಳಿಸಬೇಕಿದೆ. ಇಡೀ ದಿನದ ಆಟ ಉಳಿದಿದೆ ಮತ್ತು ಕೈಯಲ್ಲಿ 9 ವಿಕೆಟ್ ಇದೆ. ಅಂದರೆ, ಪಂದ್ಯವು ಸಂಪೂರ್ಣವಾಗಿ ಭಾರತದ ಪರವಾಗಿದೆ. ಆದರೆ, ನಾಟಿಂಗ್‌ಹ್ಯಾಮ್‌ನ ಹವಾಮಾನವು ಪ್ರಸ್ತುತ ತನ್ನ ಪ್ರಾಬಲ್ಯ ಸಾಧಿಸಿದೆ. ನಾಟಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ, ಕೆಟ್ಟ ಹವಾಮಾನದಿಂದಾಗಿ ಬಹಳಷ್ಟು ಸಮಯ ಧೂಳೀಪಟವಾಗಿವೆ. ಆದರೆ, ಇನ್ನೂ ಟೀಮ್ ಇಂಡಿಯಾ ಪಂದ್ಯವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. 2018 ರಲ್ಲಿ ಜೋಹಾನ್ಸ್‌ಬರ್ಗ್ ಟೆಸ್ಟ್ ನಂತರ ಮೊದಲ ಬಾರಿಗೆ ನಾಟಿಂಗ್‌ಹ್ಯಾಮ್‌ನಲ್ಲಿ ಭಾರತದ ವೇಗದ ಬೌಲರ್‌ಗಳು ಎದುರಾಳಿಯ 20 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರಲ್ಲಿ ಜಸ್ಪ್ರೀತ್ ಬುಮ್ರಾ ಒಬ್ಬರೆ ಗರಿಷ್ಠ 9 ವಿಕೆಟ್ ಪಡೆದಿದ್ದಾರೆ.

ಕೈಯಲ್ಲಿ ಪಂದ್ಯ ಆದರೆ ನಾಟಿಂಗ್ಹ್ಯಾಮ್ ಹವಾಮಾನ ಮೊದಲ ಇನ್ನಿಂಗ್ಸ್​ನಲ್ಲಿ 183 ರನ್ ಗಳಿಸಿದ್ದ ಇಂಗ್ಲೆಂಡ್ ತಂಡ, ಎರಡನೇ ಇನ್ನಿಂಗ್ಸ್ ನಲ್ಲಿ 303 ರನ್ ಗಳಿಸಿತು. ಭಾರತ ತನ್ನ ಮುಂದೆ 209 ರನ್ ಗಳ ಗುರಿಯನ್ನು ಹೊಂದಿದ್ದು ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 95 ರನ್ ಗಳ ಮುನ್ನಡೆ ಸಾಧಿಸಿದೆ. ಎರಡನೇ ಇನ್ನಿಂಗ್ಸ್‌ನಲ್ಲಿಯೂ, ಭಾರತ ನಾಲ್ಕನೇ ದಿನ 1 ವಿಕೆಟ್​ಗೆ 52 ರನ್ ಗಳಿಸಿದೆ. ಪೂಜಾರ ಮತ್ತು ರೋಹಿತ್ ಕ್ರೀಸ್ ನಲ್ಲಿ ಅಜೇಯರಾಗಿದ್ದು, ವಿರಾಟ್, ರಹಾನೆ ಮತ್ತು ಪಂತ್ ರಂತಹ ಯೋಧರು ಇನ್ನಷ್ಟೇ ಬರಬೇಕಿದೆ. ಅಂದರೆ ಪಂದ್ಯವು ಸಂಪೂರ್ಣ ನಿಯಂತ್ರಣದಲ್ಲಿದೆ. ಸದ್ಯಕ್ಕೆ ಭಾರತದ ನಿಯಂತ್ರಣದಲ್ಲಿ ಕಾಣದ ಏಕೈಕ ವಿಷಯವೆಂದರೆ ನಾಟಿಂಗ್ ಹ್ಯಾಮ್ನ ಕೆಟ್ಟ ವಾತಾವರಣ.

ದಿನೇಶ್ ಕಾರ್ತಿಕ್ ಇತ್ತೀಚಿನ ಹವಾಮಾನ ಚಿತ್ರವನ್ನು ಹಂಚಿಕೊಂಡಿದ್ದಾರೆ ಪಂದ್ಯದಲ್ಲಿ ಭಾರತದ ಕಾಮೆಂಟೆಟರ್ ದಿನೇಶ್ ಕಾರ್ತಿಕ್ ಟ್ವೀಟ್ ಮಾಡಿರುವ ಚಿತ್ರದ ಪ್ರಕಾರ ನಾಟಿಂಗ್ ಹ್ಯಾಮ್ ನ ಇತ್ತೀಚಿನ ಹವಾಮಾನ ಸರಿಯಲ್ಲ. ಮಳೆ ಮುಂದುವರಿದಿದೆ. ಆದಾಗ್ಯೂ, ಪಂದ್ಯದ ವೇಳೆಗೆ, ಅದರಲ್ಲಿ ಸ್ವಲ್ಪ ಸುಧಾರಣೆಯಾಗಲಿದೆ ಎಂದು ಕಾರ್ತಿಕ್ ಭರವಸೆ ವ್ಯಕ್ತಪಡಿಸಿದ್ದಾರೆ. ಆದರೆ ಚಿತ್ರದಲ್ಲಿ ಆಕಾಶದಲ್ಲಿ ಗಾಢ ಮೋಡಗಳು ಕಾಣುವ ರೀತಿ, ಟೀಮ್ ಇಂಡಿಯಾ ಪರವಿರುವ ಗೆಲುವನ್ನು ದೂರವಾಗಿಸುವಂತೆ ಕಾಣುತ್ತಿದೆ.

ಇದನ್ನೂ ಓದಿ:IND vs ENG: ಭಾರತ ಗೆಲ್ಲಲು 209 ರನ್ ಗುರಿ ನೀಡಿದ ಇಂಗ್ಲೆಂಡ್; ಭಾರತಕ್ಕೆ ಆರಂಭಿಕ ಆಘಾತ.. ಬೌಲಿಂಗ್​ನಲ್ಲಿ ಮಿಂಚಿದ ಬುಮ್ರಾ