AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೂದಲೆಳೆಯಲ್ಲಿ ಸೋಲು ಅನುಭವಿಸಿದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಮೂಲತಃ ಬಾಗಲಕೋಟೆಯವರು; ಇನ್ನಷ್ಟು ವಿವರ ಇಲ್ಲಿದೆ

ಕೊನೆ ಅಂತರದಲ್ಲಿ ಸೋತವರಿಗೂ ಸಮಾಧಾನ ಹೇಳಿ ಮುಂದೆ ಅವಕಾಶ ಇದೆ ಎಂದು ಬೆನ್ನು ತಟ್ಟುತ್ತಿದ್ದಾರೆ. ಒಲಿಂಪಿಕ್​ನಲ್ಲಿ ‌ನಮ್ಮ ಮಹಿಳೆಯರ ಸಾಧನೆ ಕೂಡ ಮೆಚ್ಚುವಂತದ್ದು. ಹಾಕಿ, ಬ್ಯಾಡ್ಮಿಂಟನ್​ನಲ್ಲಿ ಈಗಾಗಲೇ ಯುವತಿಯರು ಸಾಧನೆಗೈದು ದೇಶಕ್ಕೆ ಕೀರ್ತಿ ತಂದಿದ್ದಾರೆ.

ಕೂದಲೆಳೆಯಲ್ಲಿ ಸೋಲು ಅನುಭವಿಸಿದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಮೂಲತಃ ಬಾಗಲಕೋಟೆಯವರು; ಇನ್ನಷ್ಟು ವಿವರ ಇಲ್ಲಿದೆ
ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್
TV9 Web
| Updated By: sandhya thejappa|

Updated on:Aug 07, 2021 | 5:02 PM

Share

ಬಾಗಲಕೋಟೆ: ಸದ್ಯ ಟೋಕಿಯೋ ಒಲಿಂಪಿಕ್ನಲ್ಲಿ (Tokyo Olympics) ಭಾರತೀಯ ಕ್ರೀಡಾಪಟುಗಳು ಇನ್ನಿಲ್ಲದ ಸಾಧನೆ ಮಾಡುತ್ತಿದ್ದಾರೆ. ಆಟಗಾರರ ಸಾಧನೆಗೆ ಸ್ವತಃ ಪ್ರಧಾನಿ ಮೋದಿ ಪ್ರೋತ್ಸಾಹ ನೀಡಿ ಹುರುಪು ತುಂಬುತ್ತಿದ್ದಾರೆ. ಕೊನೆ ಅಂತರದಲ್ಲಿ ಸೋತವರಿಗೂ ಸಮಾಧಾನ ಹೇಳಿ ಮುಂದೆ ಅವಕಾಶ ಇದೆ ಎಂದು ಬೆನ್ನು ತಟ್ಟುತ್ತಿದ್ದಾರೆ. ಒಲಿಂಪಿಕ್​ನಲ್ಲಿ ‌ನಮ್ಮ ಮಹಿಳೆಯರ ಸಾಧನೆ ಕೂಡ ಮೆಚ್ಚುವಂತದ್ದು. ಹಾಕಿ, ಬ್ಯಾಡ್ಮಿಂಟನ್​ನಲ್ಲಿ ಈಗಾಗಲೇ ಯುವತಿಯರು ಸಾಧನೆಗೈದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಈಗ ಅಂತಹ ಮಹಿಳೆಯರ ಸಾಲಿಗೆ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಕೂಡ ಸೇರ್ಪಡೆಯಾಗಿದ್ದಾರೆ. ಕೂದಲೆಳೆಯಲ್ಲಿ ಸೋಲು ಅನುಭವಿಸಿದ ಅದಿತಿ ಮೂಲತಃ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದವರು. ಅವರ ತಂದೆ ಅಶೋಕ್. ಹುಟ್ಟಿದ್ದು, ಬೆಳೆದಿದ್ದು ಎಲ್ಲವೂ ಜಮಖಂಡಿ‌ ನಗರದಲ್ಲೇ. ಅಶೋಕ್ ಅವರು ಉದ್ಯಮಿಯಾಗಿದ್ದು, ಕಳೆದ ಇಪ್ಪತ್ತು ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬೆಂಗಳೂರಲ್ಲಿಯೇ ಅದಿತಿ ಹುಟ್ಟಿದ್ದು, ಬೆಂಗಳೂರು ಹುಡುಗಿ ಎಂದು ಪರಿಚಿತರಾಗಿದ್ದಾರೆ.

ಆದರೆ ಅವರು ಮೂಲತಃ ಜಮಖಂಡಿ ನಗರದವರು. ಅದಿತಿ ಅವರ ಸಹೋದರರು ಜಮಖಂಡಿಯಲ್ಲಿದ್ದಾರೆ‌. ಅದಿತಿ ಅವರ ತಂದೆ ಅಶೋಕ್ ವಿಜಯಪುರ ಸೈನಿಕ ಶಾಲೆಯಲ್ಲಿ ಎಸ್ಎಸ್ಎಲ್​ಸಿ ಮುಗಿಸಿದ್ದಾರೆ. ನಂತರ ಎಮ್ಎಸ್​ಸಿ ಪಡೆದು ಕೆಲ ವರ್ಷಗಳ ಕಾಲ ಉಪನ್ಯಾಸಕರಾಗಿದ್ದರು. ನಂತರ ಬೆಂಗಳೂರಲ್ಲಿ ರಿಯಲ್ಎಸ್ಟೇಟ್ ಉದ್ಯಮಿಯಾಗಿದ್ದಾರೆ‌. ಅದಿತಿ ಅವರಿಗೆ ಅಶೋಕ್ ಕೇವಲ ತಂದೆ ಅಲ್ಲ. ಕೋಚ್ ಕೂಡಾ ಹೌದು.

Aditi Ashok

ಅದಿತಿ ಅಶೋಕ್

ಎಂಟಕ್ಕೂ ಹೆಚ್ಚು ಅಂತರಾಷ್ಟ್ರೀಯ ಪ್ರಶಸ್ತಿ ಗೆದ್ದಿರುವ ಅದಿತಿ; ಬಾಗಲಕೋಟೆ, ಜಮಖಂಡಿ ಜನತೆಗೆ ಹೆಮ್ಮೆ ಅದಿತಿ ಅಶೋಕ್ ಇದುವರೆಗೂ ಎಂಟಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಲೇಡೀಸ್ ಬ್ರಿಟಿಷ್ ಅಮೆಚೂರ್, ಪಾಲ್ಡೊ ಸರ್ವಿಸ್​ಗಳಲ್ಲಿ ಜಯ ಪಡೆದಿದ್ದಾರೆ. ಯುರೋಪಿಯ ಲೇಡಿ ಟೂರ್ನಾಮೆಂಟ್​ನಲ್ಲಿ ಗೆದ್ದ ಮೊದಲ ಭಾರತೀಯ ಗಾಲ್ಫ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಅಲ್ಲದೆ ಅದಿತಿ 2017ರಲ್ಲಿ ಎಲ್​​ಪಿಜಿಎ ಟೂರ್ನಾಮೆಂಟ್​ನಲ್ಲಿ ಸ್ಪರ್ಧಿಸಿದ ಭಾರತದ ಮೊದಲ ಗಾಲ್ಫ್ ಎಂಬ ಹೆಗ್ಗಳಿಕೆ ಇವರದ್ದು. 2016ರಲ್ಲಿ ರಿಯೊ ಒಲಂಪಿಕ್​ನಲ್ಲಿ ಅದಿತಿ ಭಾಗಿಯಾಗಿ 60 ಸ್ಪರ್ಧಿಗಳಲ್ಲಿ 41ನೇ ಸ್ಥಾನ ಪಡೆದಿದ್ದರು‌.

ಶ್ರೀಮಂತರ ಆಟ ಗಾಲ್ಫ್​​ನಲ್ಲಿ ಕಮಾಲ್ ಮಾಡಿದ ಅದಿತಿ ಅಶೋಕ್; ಜಮಖಂಡಿ ಜನತೆಗೆ ಸಂತಸ ನಮ್ಮ ನೆಲದ ಹುಡುಗಿ ಈ ಮಟ್ಟಕ್ಕೆ ಬೆಳೆದಿದ್ದಾಳೆ ಎಂದರೆ ನಮಗೆ ಇನ್ನಿಲ್ಲದ ಸಂತಸ ತಂದಿದೆ. ಅವಳು ಇನ್ನು ಎತ್ತರಕ್ಕೆ ಬೆಳೆದು, ದೇಶಕ್ಕೆ ಕೀರ್ತಿ ತರಲಿ ಎಂದು ಜಿಲ್ಲೆಯ ಜನರು ಹರಸುತ್ತಿದ್ದಾರೆ. ಅದಿತಿ ಕುಟುಂಬಸ್ಥರು ಜಮಖಂಡಿಯಲ್ಲಿದ್ದು, ಅವಳ ಸಾಧನೆಗೆ ಹರಸುತ್ತಾರೆ. ಅದಿತಿ ಸಾಧನೆ ಬಗ್ಗೆ ಮಾತಾಡಿದ ಜಮಖಂಡಿ ಶಾಸಕ ಆನಂದ ನ್ಯಾಮಗೌಡ, ಅದಿತಿ ನಮ್ಮ ಕ್ಷೇತ್ರದ ಮಗಳು ಎನ್ನೋದಕ್ಕೆ ಹೆಮ್ಮೆ ಇದೆ. ಇಡೀ ಜಮಖಂಡಿ ಕ್ಷೇತ್ರ ಅಷ್ಟೇ ಅಲ್ಲ. ಜಿಲ್ಲೆಗೆ ದೇಶಕ್ಕೆ ಇದು ಹೆಮ್ಮೆಯ ವಿಚಾರ. ಗಾಲ್ಫ್ ಅನ್ನೋದು ಶ್ರೀಮಂತರ ಕ್ರೀಡೆ ಎಂದು ಗುರುತಿಸಿಕೊಂಡಿದ್ದೆ. ಅಂತಹ ಆಟದಲ್ಲಿ ನಮ್ಮ ಜಮಖಂಡಿಯ ಯುವತಿ ಈ ಮಟ್ಟಕ್ಕೆ ಬೆಳೆದಿದ್ದು ನಮಗೆ ಬಾರಿ ಖುಷಿ ತಂದಿದೆ. ಅವಳ ಸಾಧನೆ ಎಷ್ಟೋ ‌ಮಹಿಳೆಯರಿಗೆ ಸ್ಪೂರ್ತಿಯಾಗಿದೆ ಎಂದರು.

ಇದನ್ನೂ ಓದಿ

Tokyo Olympics: ಕರ್ನಾಟಕ ಸರ್ಕಾರ ಅದಿತಿ ಜತೆಗಿದೆ; ಗಾಲ್ಫರ್ ಅದಿತಿ ಅಶೋಕ್ ಸಾಧನೆಗೆ ಮುಖ್ಯಮಂತ್ರಿ ಅಭಿನಂದನೆ

Tokyo Olympics: ಕೂದಲೆಳೆಯಲ್ಲಿ ಭಾರತಕ್ಕೆ ಪದಕ ಮಿಸ್: ಗಾಲ್ಫ್​ನಲ್ಲಿ ಕರ್ನಾಟಕದ ಅದಿತಿ ಅಶೋಕ್​ಗೆ ಸೋಲು

(Golfer Aditi Ashok was originally from Bagalkot)

Published On - 4:56 pm, Sat, 7 August 21