Tokyo Olympics: ಕರ್ನಾಟಕ ಸರ್ಕಾರ ಅದಿತಿ ಜತೆಗಿದೆ; ಗಾಲ್ಫರ್ ಅದಿತಿ ಅಶೋಕ್ ಸಾಧನೆಗೆ ಮುಖ್ಯಮಂತ್ರಿ ಅಭಿನಂದನೆ

Tokyo Olympics: ಕರ್ನಾಟಕ ಸರ್ಕಾರ ಅದಿತಿ ಜತೆಗಿದೆ; ಗಾಲ್ಫರ್ ಅದಿತಿ ಅಶೋಕ್ ಸಾಧನೆಗೆ ಮುಖ್ಯಮಂತ್ರಿ ಅಭಿನಂದನೆ
ಅದಿತಿ ಅಶೋಕ್, ಬಸವರಾಜ ಬೊಮ್ಮಾಯಿ

Tokyo Olympics: ಅದಿತಿ ಅವರು ಇಂದು ಪದಕ ಗೆಲ್ಲದೇ ಇರಬಹುದು. ಆದರೆ ಅವರು ಅಂತಾರಾಷ್ಟ್ರೀಯ ಗುಣಮಟ್ಟದ ಆಟವನ್ನು ಪ್ರದರ್ಶನ ಮಾಡಿದ್ದಾರೆ. ಅದಿತಿಗೆ ಉಜ್ವಲ ಭವಿಷ್ಯ ಇದೆ ಎಂದರು.

TV9kannada Web Team

| Edited By: pruthvi Shankar

Aug 07, 2021 | 3:34 PM

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಯಾರೂ ನಿರೀಕ್ಷಿಸಿರದ ಗಾಲ್ಫ್ ಕ್ರೀಡೆಯಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿತಾದರೂ ಪದಕ ಗೆಲ್ಲುವಲ್ಲಿ ವಿಫಲವಾಗಿದೆ.ಕರ್ನಾಟಕದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್‌ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದು ನಾಲ್ಕನೇ ಸ್ಥಾನ ಪಡೆದುಕೊಂಡಿದ್ದು ಕೂದಲೆಳೆಯ ಅಂತರದಲ್ಲಿ ಪದಕ ಕೈತಪ್ಪಿದೆ. ಆದರೆ ಅದಿತಿ ಅವರ ಸಾಧನೆಯನ್ನು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಮುಕ್ತ ಕಂಠದಿಂದ ಶ್ಲಾಘನೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಬಿಜೆಪಿಯ ಆರೋಗ್ಯ ಸ್ವಯಂ ಸೇವಕರ ಅಭೊಯಾನ ಕಾರ್ಯಕ್ರಮದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅದಿತಿ ಕರ್ನಾಟಕದವರು. ಬೆಂಗಳೂರಿನವರು ಎಂಬುದು ನಮಗೆ ಹೆಮ್ಮೆಯ ಸಂಗತಿ ಎಂದರು. ಅದಿತಿ ಅವರಿಗೆ ಉಜ್ವಲ ಭವಿಷ್ಯವಿದೆ. ಕಾಮನ್ ವೆಲ್ತ್ ಸೇರಿದಂತೆ ಮುಂಬರುವ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ಮಾಡಲು, ಪದಕಗಳನ್ನು ಗೆಲ್ಲಲು ಅವಕಾಶವಿದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

ಕರ್ನಾಟಕ ಸರ್ಕಾರ ಅದಿತಿ ಜತೆಗಿದೆ. ಇಡೀ ನಾಡಿನ ಜನತೆ ಅವರೊಂದಿಗೆ ಇದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಮುಖ್ಯಮಂತ್ರಿಗಳು ಮಾಧ್ಯಮಗಳಿಗೆ ಅದಿತಿ ಅವರ ಸಾಧನೆ ಕುರಿತು ಶುಭ ಹಾರೈಸಿದರು. ಅದಿತಿ ಅವರು ಇಂದು ಪದಕ ಗೆಲ್ಲದೇ ಇರಬಹುದು. ಆದರೆ ಅವರು ಅಂತಾರಾಷ್ಟ್ರೀಯ ಗುಣಮಟ್ಟದ ಆಟವನ್ನು ಪ್ರದರ್ಶನ ಮಾಡಿದ್ದಾರೆ. ಅದಿತಿಗೆ ಉಜ್ವಲ ಭವಿಷ್ಯ ಇದೆ ಎಂದರು.

Follow us on

Related Stories

Most Read Stories

Click on your DTH Provider to Add TV9 Kannada