AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tokyo Olympics: ರಿಲೇಯಲ್ಲಿ ಭಾರತಕ್ಕೆ ನಿರಾಸೆ: ಒಂದು ಸ್ಥಾನದಿಂದ ಕೈತಪ್ಪಿದ ಫೈನಲ್

ಒಟ್ಟಾರೆಯಾಗಿ 9ನೇ ಸ್ಥಾನಕ್ಕೆ ಕುಸಿದು 8 ತಂಡಗಳ ಫೈನಲ್‌ ಸ್ಪರ್ಧೆಯಿಂದ ದೂರ ಉಳಿಯಬೇಕಾಯಿತು. ಭಾರತದ 3 ನಿಮಿಷ, 25 ಸೆಕೆಂಡ್ಸ್‌ಗಳ ಈ ಸಾಧನೆ ಏಶ್ಯನ್‌ ದಾಖಲೆ ಎನಿಸಿತು.

Tokyo Olympics: ರಿಲೇಯಲ್ಲಿ ಭಾರತಕ್ಕೆ ನಿರಾಸೆ: ಒಂದು ಸ್ಥಾನದಿಂದ ಕೈತಪ್ಪಿದ ಫೈನಲ್
relay
TV9 Web
| Edited By: |

Updated on:Aug 07, 2021 | 7:20 AM

Share

ಟೋಕಿಯೋ ಒಲಿಂಪಿಕ್ಸ್​ನಲ್ಲಿ (Tokyo Olympics) ಭಾರತೀಯ ಪುರುಷರ ತಂಡವು 4×400 ಮೀ. ರಿಲೇ ಯಲ್ಲಿ ಏಶ್ಯಾ ದಾಖಲೆಯನ್ನು ಮುರಿದರೂ ಫೈನಲ್ ನಲ್ಲಿ ಸ್ಥಾನ ಗಿಟ್ಟಿಸುವಲ್ಲಿ ಸ್ವಲ್ಪದರಲ್ಲೇ ವಿಫಲವಾಗಿದೆ. ಮಹಮ್ಮದ್ ಅನಸ್, ನೋವಾ ನಿರ್ಮಲ್ ಟಾಮ್ ಅರೋಕಿಯಾ ರಾಜೀವ್ ಮತ್ತು ಮತ್ತು ಅಮೋಜ್ ಜೇಕಬ್ ಅವರನ್ನೊಳಗೊಂಡ ಭಾರತೀಯ ತಂಡ ಹೀಟ್ 2ರಲ್ಲಿ ನಾಲ್ಕನೇ ಸ್ಥಾನಿಯಾಗಿ ಸ್ಪರ್ಧೆಯನ್ನು ಮುಗಿಸಿದೆ.

ಒಟ್ಟಾರೆಯಾಗಿ 9ನೇ ಸ್ಥಾನಕ್ಕೆ ಕುಸಿದು 8 ತಂಡಗಳ ಫೈನಲ್‌ ಸ್ಪರ್ಧೆಯಿಂದ ದೂರ ಉಳಿಯಬೇಕಾಯಿತು. ಭಾರತದ 3 ನಿಮಿಷ, 25 ಸೆಕೆಂಡ್ಸ್‌ಗಳ ಈ ಸಾಧನೆ ಏಶ್ಯನ್‌ ದಾಖಲೆ ಎನಿಸಿತು. ಹಿಂದಿನ ದಾಖಲೆ ಕತಾರ್‌ ಹೆಸರಲ್ಲಿತ್ತು (3 ನಿಮಿಷ, 56 ಸೆಕೆಂಡ್ಸ್‌). ಇದು 2018ರ ಏಶ್ಯನ್‌ ಗೇಮ್ಸ್‌ನಲ್ಲಿ ದಾಖಲಾಗಿತ್ತು.

ಇತ್ತ ಭಾರತದ ವಾಕ್‌ ರೇಸರ್‌ ಗುರುಪ್ರೀತ್‌ ಸಿಂಗ್‌ 50 ಕಿ.ಮೀ. ಗುರಿ ಪೂರೈಸದೆ ಅರ್ಧದಲ್ಲೇ ಹಿಂದೆ ಸರಿದರು. ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಗುರುಪ್ರೀತ್‌ ಸಿಂಗ್‌ 35 ಕಿ.ಮೀ. ( 2 ಗಂಟೆ 55 ನಿಮಿಷ) ಓಟವನ್ನಷ್ಟೇ ಕ್ರಮಿಸಿ 51ನೇ ಸ್ಥಾನಿಯಾಗಿ ಕೂಟದಿಂದ ನಿರ್ಗಮಿಸಿದರು.

ಪೋಲ್ಯಾಂಡ್ ಈ ಆವೃತ್ತಿಯಲ್ಲಿನ ಅತ್ಯುತ್ತಮ ಪ್ರದರ್ಶನದೊಂದಿಗೆ ಮೊದಲ ಸ್ಥಾನಿಯಾಗಿ ಸ್ಪರ್ಧೆಯನ್ನು ಮುಗಿಸಿತು. 2:55:55 ಅವಧಿಯಲ್ಲಿ ಪೊಲ್ಯಾಂಡ್ ಗುರಿ ತಲುಪಿತ್ತು. ಎರಡನೇ ಸ್ಥಾನದಲ್ಲಿ ಜಮೈಕಾ ಇದ್ದು 2:59:29 ಅವಧಿಯಲ್ಲಿಯಲ್ಲಿ ಗುರಿ ತಲುಪಿದೆ. ಮೂರನೇ ಸ್ಥಾನದಲ್ಲಿದ್ದು ಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಂಡ ಬೆಲ್ಜಿಯಂ ತಂಡ 2:59:37ರ ಅವಧಿಯೊಂದಿಗೆ ಸ್ಪರ್ಧೆಯನ್ನು ಮುಗಿಸಿದೆ. ಪ್ರತೀ ಹೀಟ್‌ನಲ್ಲಿರುವ ಅಗ್ರ ಮೂರು ತಂಡಗಳು ಫೈನಲ್‌ಗೆ ಅರ್ಹತೆಯನ್ನು ಸಂಪಾದಿಸುತ್ತದೆ. ಹೀಗಾಗಿ ಭಾರತಕ್ಕೆ ಫೈನಲ್ ಪ್ರವೇಶ ಗಿಟ್ಟಿಸಿಕೊಳ್ಳಲು ಅಸಾಧ್ಯವಾಗಿದೆ.

IND vs ENG: ಅತಿ ವೇಗವಾಗಿ 600 ಟೆಸ್ಟ್ ವಿಕೆಟ್ ಪಡೆದ ಬೌಲರ್; ಟೆಸ್ಟ್​ನಲ್ಲಿ ಅನಿಲ್ ಕುಂಬ್ಳೆ ದಾಖಲೆ ಮುರಿದ ಆಂಡರ್ಸನ್

ಬಲಿಷ್ಠ ಆಸ್ಟ್ರೇಲಿಯಾವನ್ನು ಮಣಿಸಿ ಟಿ-20 ಸರಣಿ ಗೆದ್ದ ಬಾಂಗ್ಲಾದೇಶ! ಚೊಚ್ಚಲ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಾಥನ್ ಎಲ್ಲಿಸ್

(Tokyo Olympics India Mens 4x400m relay team breaks Asian Record but fails to enter Finals)

Published On - 7:17 am, Sat, 7 August 21