Aditi Ashok ಟೊಕಿಯೊ ಒಲಿಂಪಿಕ್ಸ್ ಗಾಲ್ಫ್ ; ಕನ್ನಡತಿ ಅದಿತಿ ಅಶೋಕ್ನಿಂದ ಪದಕ ನಿರೀಕ್ಷೆ
Tokyo Olympics: ಕೇವಲ ಒಂದು ಸುತ್ತು ಬಾಕಿ ಇರುವಾಗ, ಅದಿತಿ ಪದಕದ ಭರವಸೆಯೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ ನಿರ್ಣಾಯಕ ನಾಲ್ಕನೇ ಸುತ್ತು ಶನಿವಾರ ನಡೆಯಲಿದೆ. ಇದು ಅದಿತಿಯ ಎರಡನೇ ಒಲಿಂಪಿಕ್ಸ್ ಆಗಿದೆ.
ಟೋಕಿಯೊ: ಭಾರತಕ್ಕೆ ಟೋಕಿಯೊ ಒಲಿಂಪಿಕ್ಸ್ನಲ್ಲಿ ಇನ್ನೊಂದು ಪದಕ ಸಿಗುವ ನಿರೀಕ್ಷೆ ಇದೆ. ಹಾಕಿ ಮತ್ತು ಕುಸ್ತಿಯಲ್ಲಿ ಪದಕದ ಕನಸು ಭಗ್ನವಾಗಿದ್ದರೂ ಗಾಲ್ಫ್ನಲ್ಲಿ ಪದಕ ಸಿಗುವ ನಿರೀಕ್ಷೆ ದೇಶದ ಜನರದ್ದು. ಮಹಿಳೆಯರ ವೈಯಕ್ತಿಕ ಸ್ಟ್ರೋಕ್ ಪ್ಲೇನಲ್ಲಿ ಸ್ಪರ್ಧಿಸುತ್ತಿರುವ ಇಪ್ಪತ್ಮೂರು ವರ್ಷದ ಕನ್ನಡತಿ ಅದಿತಿ ಅಶೋಕ್ ಪದಕದ ನಿರೀಕ್ಷೆಯಲ್ಲಿದ್ದಾರೆ. ಮೊದಲ ಮೂರು ಸುತ್ತುಗಳನ್ನು ಮುಗಿಸಿದ ನಂತರ ಅದಿತಿ ಎರಡನೇ ಸ್ಥಾನ ಪಡೆದರು. ವಿಶ್ವದ ಅಗ್ರಸ್ಥಾನದಲ್ಲಿರುವ ಅಮೆರಿಕದ ನೆಲ್ಲಿ ಕಾರ್ಡಾ ಈಗ ಅಗ್ರಸ್ಥಾನದಲ್ಲಿದ್ದಾರೆ. ಕೇವಲ ಒಂದು ಸುತ್ತು ಬಾಕಿ ಇರುವಾಗ, ಅದಿತಿ ಪದಕದ ಭರವಸೆಯೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ನಿರ್ಣಾಯಕ ನಾಲ್ಕನೇ ಸುತ್ತು ಶನಿವಾರ ನಡೆಯಲಿದೆ. ಇದು ಅದಿತಿಯ ಎರಡನೇ ಒಲಿಂಪಿಕ್ಸ್ ಆಗಿದೆ.
ಶನಿವಾರದ ನಾಲ್ಕನೇ ಸುತ್ತಿನ ಪಂದ್ಯಗಳು ಕೆಟ್ಟ ಹವಾಮಾನದಿಂದಾಗಿ ಒಂದು ಗಂಟೆ ತಡವಾಗಲಿದೆ ಎಂದು ಸಂಘಟಕರು ಘೋಷಿಸಿದ್ದಾರೆ. ಆದಾಗ್ಯೂ, ಕೆಟ್ಟ ಹವಾಮಾನದಿಂದಾಗಿ ನಾಲ್ಕನೇ ಸುತ್ತಿನ ಪಂದ್ಯಗಳಿಗೆ ಅಡ್ಡಿಯಾಗುವ ಸಾಧ್ಯತೆಯಿದೆ. ಶನಿವಾರ ಪಂದ್ಯಕ್ಕೆ ಈ ರೀತಿ ಹವಾಮಾನ ಅಡಚಣೆಯಾದರೆ ಭಾನುವಾರ ಕಾರ್ಯಕ್ರಮ ಆಯೋಜಿಸಲು ಸಂಘಟಕರು ಚಿಂತನೆ ನಡೆಸಿದ್ದಾರೆ.
.@aditigolf betters her performance from the first two rounds and goes one up to rank second in women’s individual stroke play as compared to a tied-second position from yesterday!
The #IND golfer stays in medal contention for three days straight! ?#Tokyo2020 | #Golf pic.twitter.com/dBLPpbMERr
— #Tokyo2020 for India (@Tokyo2020hi) August 6, 2021
ಭಾನುವಾರ ಹವಾಮಾನವು ಪ್ರತಿಕೂಲವಾಗಿರುತ್ತದೆ ಎಂದು ಮುನ್ಸೂಚನೆ ನೀಡಲಾಗಿದೆ. ನಾಲ್ಕನೇ ಸುತ್ತು ನಡೆಯದಿದ್ದರೆ, ಪ್ರಸ್ತುತ ಪಾಯಿಂಟ್ ಆಧಾರದಲ್ಲಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಆಗ ಅದಿತಿಗೆ ಬೆಳ್ಳಿ ಪದಕ ಸಿಗುವುದು ಖಚಿತ.
ಇದನ್ನೂ ಓದಿ: Tokyo Olympics: ಒಲಿಂಪಿಕ್ಸ್ ಹಾಕಿ ಇತಿಹಾಸದಲ್ಲಿ ಚೊಚ್ಚಲ ಪದಕ ಗೆಲ್ಲುವ ಭಾರತೀಯ ಮಹಿಳೆಯರ ಕನಸು ಭಗ್ನ
(Tokyo Olympics golf women’s individual Aditi Ashok continued with her great form hope for medal)
Published On - 6:14 pm, Fri, 6 August 21