Bajrang Punia: ಎದುರಾಳಿಯನ್ನು ಮಕಾಡೆ ಮಲಗಿಸಿದ ಬಜರಂಗ್: ಭಾರತಕ್ಕೆ ಮತ್ತೊಂದು ಕಂಚು
Tokyo Olympics 2020: ಈ ಮೊದಲು ಪ್ರೀ-ಕ್ವಾರ್ಟರ್ ಫೈನಲ್ ಮುಖಾಮುಖಿಯಲ್ಲಿ ಬಜರಂಗ್, ಕಿರ್ಗಿಸ್ತಾನದ ಎರ್ನಾಜರ್ ಅಕ್ಮಟಾಲೀವ್ ಅವರನ್ನು ಮಣಿಸಿದ್ದರು. ಹಾಗೆಯೇ ಕ್ವಾರ್ಟರ್ ಫೈನಲ್ನಲ್ಲಿ ಕುಸ್ತಿ ಅಂಗಳದ ಬಲಿಷ್ಠ ಪಟು ಇರಾನಿನ ಮೊರ್ತೆಜಾ ಗಿಯಾಸಿ ಅವರನ್ನು 2-1ರ ಅಂತರದಿಂದ ಸೋಲಿಸಿ ಸೆಮಿಫೈನಲ್ಗೆ ಲಗ್ಗೆಯಿಟ್ಟು ಸರ್ವಶ್ರೇಷ್ಠ ಸಾಧನೆ ಮಾಡಿದ್ದರು.
ಟೋಕಿಯೋ ಒಲಿಂಪಿಕ್ಸ್ (Tokyo Olympics) 2020 ರಲ್ಲಿ ಭಾರತಕ್ಕೆ ಮತ್ತೊಂದು ಕಂಚಿನ ಪದಕ ತಂದುಕೊಟ್ಟಿದ್ದಾರೆ ಕುಸ್ತಿಪಟು ಬಜರಂಗ್ ಪುನಿಯಾ ( Bajrang Punia ). ಶನಿವಾರ ನಡೆದ 65 ಕೆಜಿ ಫ್ರೀಸ್ಟೈಲ್ ವಿಭಾಗದ ಪಂದ್ಯದಲ್ಲಿ ಕಜಕಿಸ್ತಾನದ ದೌಲತ್ ನಿಯಾಜ್ಬೆಕವೊ ಅವರನ್ನು 8-0 ಅಂತರದಿಂದ ಮಣಿಸಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು. ಈ ಹಿಂದೆ ಸೆಮಿ ಫೈನಲ್ವರೆಗೂ ಭರ್ಜರಿ ಪ್ರದರ್ಶನ ನೀಡಿದ್ದ ಪುನಿಯಾ ಫೈನಲ್ ಪ್ರವೇಶಿಸುವಲ್ಲಿ ವಿಫಲರಾಗಿದ್ದರು. ಅಜರ್‌ಬೈಜಾನಿಯಾದ ಹಾಜಿ ಆಲಿಯಾವ್ ವಿರುದ್ಧ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ 5-12 ಅಂಕಗಳ ಅಂತರದಿಂದ ಪುನಿಯಾ ಸೋಲನುಭವಿಸಿದ್ದರು. ಆದರೆ 3ನೇ ಸ್ಥಾನಕ್ಕಾಗಿ ನಡೆದ ಹೋರಾಟದಲ್ಲಿ ಈ ಹಿಂದಿನ ತಪ್ಪುಗಳನ್ನು ತಿದ್ದಿಕೊಂಡಿದ್ದ ಭಾರತೀಯ ಕುಸ್ತಿಪಟು ಆಕ್ರಮಣಕಾರಿ ಆಟದೊಂದಿಗೆ ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು. ಅದರಂತೆ ಎದುರಾಳಿಗೆ ಯಾವುದೇ ಅಂಕ ಬಿಟ್ಟುಕೊಡದೆ 8-0 ಅಂತರದಿಂದ ಭರ್ಜರಿ ಗೆಲುವು ಸಾಧಿಸಿದರು.
ಈ ಮೊದಲು ಪ್ರೀ-ಕ್ವಾರ್ಟರ್ ಫೈನಲ್ ಮುಖಾಮುಖಿಯಲ್ಲಿ ಬಜರಂಗ್, ಕಿರ್ಗಿಸ್ತಾನದ ಎರ್ನಾಜರ್ ಅಕ್ಮಟಾಲೀವ್ ಅವರನ್ನು ಮಣಿಸಿದ್ದರು. ಹಾಗೆಯೇ ಕ್ವಾರ್ಟರ್ ಫೈನಲ್ನಲ್ಲಿ ಕುಸ್ತಿ ಅಂಗಳದ ಬಲಿಷ್ಠ ಪಟು ಇರಾನಿನ ಮೊರ್ತೆಜಾ ಗಿಯಾಸಿ ಅವರನ್ನು 2-1ರ ಅಂತರದಿಂದ ಸೋಲಿಸಿ ಸೆಮಿಫೈನಲ್ಗೆ ಲಗ್ಗೆಯಿಟ್ಟು ಸರ್ವಶ್ರೇಷ್ಠ ಸಾಧನೆ ಮಾಡಿದ್ದರು. ಕಠಿಣ ಹೋರಾಟದ ಹೊರತಾಗಿಯೂ ಪುನಿಯಾ ಅವರ ಫೈನಲ್ ಆಸೆ ಈಡೇರಿರಲಿಲ್ಲ. ಇದೀಗ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್ನಲ್ಲಿ ಬಜರಂಗ್ ಪುನಿಯಾ ತಮ್ಮ ಪದಕದ ಖಾತೆ ತೆರೆದಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತ ಈವರೆಗೆ ಒಟ್ಟು 6 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಅದರಲ್ಲಿ ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಹಾಗೂ ರಸ್ಲಿಂಗ್‌ನಲ್ಲಿ ರವಿಕುಮಾರ್ ಬೆಳ್ಳಿ ಪದಕ ಗೆದ್ದರೆ, ಮಹಿಳಾ ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು, ಮಹಿಳಾ ಬಾಕ್ಸಿಂಗ್‌ನಲ್ಲಿ ಲವ್ಲಿನಾ ಬೋರ್ಗೊಹೈನ್, ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದುಕೊಂಡಿದೆ. ಇದೀಗ ಬಜರಂಗ್ ಪುನಿಯಾ ಕೂಡ ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಪದಕದ ಸಂಖ್ಯೆಯನ್ನು ಆರಕ್ಕೇರಿಸಿದ್ದಾರೆ. ಸದ್ಯ 6 ಪದಕಗಳೊಂದಿಗೆ ಭಾರತ ಪದಕ ಪಟ್ಟಿಯಲ್ಲಿ 66ನೇ ಸ್ಥಾನದಲ್ಲಿದೆ.
ಇದನ್ನೂ ಓದಿ:-
Tokyo Olympics: ಒಲಿಂಪಿಕ್ಸ್ನಲ್ಲಿ ವಿಶ್ವ ದಾಖಲೆ ಬರೆದ ಭಾರತ..!
Tokyo Olympics: ಪದಕ ಗೆಲ್ಲುತ್ತಿದ್ದಂತೆ ಟೀಮ್ ಇಂಡಿಯಾಗೆ ಕಾದಿತ್ತು ಸರ್ಪ್ರೈಸ್..!
Published On - 4:24 pm, Sat, 7 August 21