Tokyo Olympics: ಪದಕ ಗೆಲ್ಲುತ್ತಿದ್ದಂತೆ ಟೀಮ್ ಇಂಡಿಯಾಗೆ ಕಾದಿತ್ತು ಸರ್​ಪ್ರೈಸ್..!

Indian Hockey Team: 1980ರ ಮಾಸ್ಕೋ ಒಲಿಂಪಿಕ್ಸ್ ಬಳಿಕ ಯಾವುದೇ ಪದಕ ಗೆಲ್ಲದಿದ್ದ ಭಾರತ ಹಾಕಿ ತಂಡ ಇದೀಗ 41 ವರ್ಷಗಳ ಬಳಿಕ ಟೋಕಿಯೋ ಒಲಿಂಪಿಕ್ಸ್​ ಮೂಲಕ ಮತ್ತೊಮ್ಮೆ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ.

Tokyo Olympics: ಪದಕ ಗೆಲ್ಲುತ್ತಿದ್ದಂತೆ ಟೀಮ್ ಇಂಡಿಯಾಗೆ ಕಾದಿತ್ತು ಸರ್​ಪ್ರೈಸ್..!
Indian Hockey team

ಟೋಕಿಯೊ ಒಲಿಂಪಿಕ್ಸ್‌ನಲ್ಲಿ (Tokyo Olympics) ಭಾರತೀಯ ಪುರುಷರ ಹಾಕಿ ತಂಡದ ಐತಿಹಾಸಿಕ ಜಯ ಸಾಧಿಸಿದೆ. ಜರ್ಮನಿ ವಿರುದ್ದ (India vs Germany) ಕಂಚಿನ ಪದಕಕ್ಕಾಗಿ ನಡೆದ ರೋಚಕ ಪಂದ್ಯದಲ್ಲಿ ಮನ್​ಪ್ರೀತ್ ಪಡೆ 5-4 ಗೋಲುಗಳ ಅಂತರದಲ್ಲಿ ಗೆದ್ದು ಬೀಗಿದೆ. ಈ ಮೂಲಕ ಬರೋಬ್ಬರಿ 41 ವರ್ಷಗಳ ಬಳಿಕ ಒಲಿಂಪಿಕ್ಸ್​ ಹಾಕಿಯಲ್ಲಿ ಭಾರತ ಮತ್ತೆ ಪದಕಕ್ಕೆ ಕೊರಳೊಡ್ಡಿದೆ. ಈ ಭರ್ಜರಿ ಜಯ ಬೆನ್ನಲ್ಲೇ ಟೀಮ್ ಇಂಡಿಯಾಗೆ ಸರ್​ಪ್ರೈಸ್ ಕಾದಿತ್ತು. ಹೌದು, 4 ದಶಕಗಳ ಬಳಿಕ ಪದಕಕ್ಕೆ ಮುತ್ತಿಕ್ಕಿದ ಭಾರತ ಕ್ರೀಡಾಪಟುಗಳಿಗೆ ಖುದ್ದು ಪ್ರಧಾನಿ ಮೋದಿ (PM Modi) ಕರೆ ಮಾಡಿ ಅಭಿನಂದಿಸಿದ್ದು ವಿಶೇಷ.

ಐತಿಹಾಸಿಕ ಗೆಲುವಿಗೆ ಅಭಿನಂದಿಸಿದ ಸಚಿವ ನರೇಂದ್ರ ಮೋದಿ, ನಾಯಕ ಮನ್​ಪ್ರೀತ್ ಸಿಂಗ್ ಜೊತೆ ಮಾತನಾಡಿದರು. ಬಹುತ್, ಬಹುತ್, ಬಹುತ್ ಬಾಧಾಯಿ (ಅಭಿನಂದನೆಗಳು) ” . ಟೋಕಿಯೊದಲ್ಲಿ ನಮ್ಮ ತಂಡವು ಅದ್ಭುತವಾಗಿ ಆಡಿದೆ. ನಿಮಗೆ ಮತ್ತು ಇಡೀ ತಂಡಕ್ಕೆ ತುಂಬು ಹೃದಯದ ಅಭಿನಂದನೆಗಳು. ನಿಮ್ಮಿಂದ ಇಂದು ಇಡೀ ದೇಶವೇ ಸಂತೋಷವಾಗಿದೆ. ತರಬೇತುದಾರ ರೀಡ್, ನೀವು ಇತಿಹಾಸವನ್ನು ರಚಿಸಿದ್ದೀರಿ. ನಿಮಗೂ ನನ್ನ ಶುಭ ಹಾರೈಕೆಗಳು” ಎಂದು ಪ್ರಧಾನಿ ಮೋದಿ ಕರೆ ಮಾಡಿ ಅಭಿನಂದಿಸಿದ್ದಾರೆ.

ಇದಕ್ಕೆ ಉತ್ತರಿಸಿದ ಕೋಚ್ ರೀಡ್, ಸೆಮಿಫೈನಲ್ ಬಳಿಕ ನೀವು ಆಡಿದ ಮಾತುಗಳೇ ನಮಗೆ ಸ್ಪೂರ್ತಿಯಾಗಿತ್ತು. ನಿಮಗೆ ನಮ್ಮ ಕಡೆಯಿಂದ ಧನ್ಯವಾದಗಳು. ಇದೇ ವೇಳೆ ಪ್ರತಿಕ್ರಿಯಿಸಿದ ಪ್ರಧಾನಿ, ನಿಮ್ಮ ಕಠಿಣ ಪರಿಶ್ರಮಕ್ಕೆ ಇಂದು ಫಲ ಸಿಕ್ಕಿದೆ. ನಾನಂತೂ ತುಂಬಾ ಹೆಮ್ಮೆ ಪಡುತ್ತಿದ್ದೇನೆ ಎಂದು ಇಡೀ ತಂಡವನ್ನು ಅಭಿನಂದಿಸಿದರು. ಈ ಅತ್ಯಾಧ್ಭುತ ಕ್ಷಣಗಳ ವಿಡಿಯೋವನ್ನು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ಈ ಹಿಂದೆ ಸೆಮಿಫೈನಲ್​ಗೆ ತಲುಪಿದಾಗ ಪ್ರಧಾನಿ ಮೋಡಿ ಅಭಿನಂದನಾ ಸಂದೇಶವನ್ನು ಟ್ವೀಟ್ ಮಾಡಿದ್ದರು. ಅಲ್ಲದೆ ನಾಯಕ ಮನ್​ಪ್ರೀತ್ ಸಿಂಗ್ ಮತ್ತು ಕೋಚ್ ರೀಡ್ ಅವರೊಂದಿಗೆ ಮಾತನಾಡಿದ್ದರು.

1980ರ ಮಾಸ್ಕೋ ಒಲಿಂಪಿಕ್ಸ್ ಬಳಿಕ ಯಾವುದೇ ಪದಕ ಗೆಲ್ಲದಿದ್ದ ಭಾರತ ಹಾಕಿ ತಂಡ ಇದೀಗ 41 ವರ್ಷಗಳ ಬಳಿಕ ಟೋಕಿಯೋ ಒಲಿಂಪಿಕ್ಸ್​ ಮೂಲಕ ಮತ್ತೊಮ್ಮೆ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಹಾಕಿ ತಂಡ ಎನಿಸಿಕೊಂಡಿದೆ. ಇದುವರೆಗೆ ಒಲಿಂಪಿಕ್ಸ್​ನಲ್ಲಿ ಭಾರತದ ಹಾಕಿ ತಂಡ 12 ಪದಕ ಗೆದ್ದುಕೊಂಡಿದೆ. ಇದು ಒಲಿಂಪಿಕ್ಸ್​ ಇತಿಹಾಸದಲ್ಲೇ ತಂಡವೊಂದರೆ ಸರ್ವಶ್ರೇಷ್ಠ ಸಾಧನೆ ಎಂಬುದು ವಿಶೇಷ.

ಇದನ್ನೂ ಓದಿ:-

Tokyo Olympics: ಒಲಿಂಪಿಕ್ಸ್​ನಲ್ಲಿ ವಿಶ್ವ ದಾಖಲೆ ಬರೆದ ಭಾರತ..!

ಭಾರತ ಮಹಿಳಾ ಹಾಕಿ ತಂಡದ ಆಟಗಾರರಿಗೆ ಮನೆ ಕಟ್ಟಲು ಹಣ, ಕಾರು: ವಜ್ರದ ವ್ಯಾಪಾರಿ ಘೋಷಣೆ

(Tokyo Olympics: Men’s Hockey Team Had A ‘Surprise Caller’ After Olympic Bronze)

Click on your DTH Provider to Add TV9 Kannada